3 ಉನ್ನತ ಹುದ್ದೆಗಳಿಗಾಗಿ ಭಾರತೀಯರಿಗೆ ಟ್ರಂಪ್ ಆದ್ಯತೆ

ಈ ಸುದ್ದಿಯನ್ನು ಶೇರ್ ಮಾಡಿ

Trump-b-01

ವಾಷಿಂಗ್ಟನ್, ಜ.17-ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತೀಯ ಸಂಜಾತ ಪ್ರತಿಭಾವಂತರಿಗೆ ಸರ್ಕಾರದ ಉನ್ನತ ಹುದ್ದೆಗಳಿಗೆ ಆದ್ಯತೆ ನೀಡುವ ಪರಿಪಾಠ ಮುಂದುವರಿದಿದೆ. ಮಹಿಳಾ ಅಣು ತಜ್ಞಾ ಸೇರಿದಂತೆ ಭಾರತೀಯ ಮೂಲದ ಮೂವರು ಪ್ರಭಾವಿ ಅಮೆರಿಕನ್ನರನ್ನು ಉನ್ನತ ಸ್ಥಾನಗಳಿಗೆ ಟ್ರಂಪ್ ನೇಮಿಸಿದ್ದಾರೆ.

ರೀಟಾ ಬರನ್ವಾಲ್ ಅವರನ್ನು ಇಂಧನ(ಅಣು ಶಕ್ತಿ) ಇಲಾಖೆ ಸಹಾಯಕ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ. ಆದಿತ್ಯ ಬಮ್‍ಜೈ ಅವರನ್ನು ಖಾಸಗಿತನ ಮತ್ತು ನಾಗರಿಕ ಸ್ವಾತಂತ್ರ ಉಸ್ತುವಾರಿ ಮಂಡಳಿ ಕಾರ್ಯದರ್ಶಿಯನ್ನಾಗಿ ನಿಯೋಜಿಸಲಾಗಿದೆ. ಹಾಗೂ ಬಿಮಲ್ ಪಟೇಲ್ ಅವರನ್ನು ಖಜಾನೆ ಇಲಾಖೆಯ ಸಹಾಯಕ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ.

ರೀಟಾ, ಆದಿತ್ಯ ಮತ್ತು ಬಿಮಲ್ ಅವರ ನೇಮಕವನ್ನು ಸೆನೆಟ್ ಮಾಹಿತಿಗಾಗಿ ರವಾನಿಸಲಾಗಿದೆ. ಅಧ್ಯಕ್ಷ ಟ್ರಂಪ್ ಈವರೆಗೆ 36ಕ್ಕೂ ಹೆಚ್ಚು ಇಂಡೋ-ಅಮೆರಿಕನ್ನರನ್ನು ಸರ್ಕಾರದ ವಿವಿಧ ಉನ್ನತ ಹುದ್ದೆಗಳಿಗೆ ನೇಮಿಸಿದ್ದಾರೆ.

ಶ್ವೇತಭವನದ ಮಾಧ್ಯಮ ವಿಭಾಗದಲ್ಲಿ ಉಪ ವಕ್ತಾರರಾಗಿದ್ದ ರಾಜ್ ಶಾ ಮೊನ್ನೆಯಷ್ಟೇ ಟ್ರಂಪ್ ಆಡಳಿತದಿಂದ ನಿರ್ಗಮಿಸಿದ್ದು, ಅವರ ಸ್ಥಾನಕ್ಕೆ ಮತ್ತೊಬ್ಬ ಭಾರತೀಯ ಸಂಜಾತ ನೇಮಕಗೊಳ್ಳುವ ನಿರೀಕ್ಷೆ ಇದೆ.

Facebook Comments