ಅಯ್ಯಪ್ಪನ ಸನ್ನಿಧಿ ಪ್ರವೇಶಿಸಿದ ಇಬ್ಬರು ಮಹಿಳೆಯರಿಗೆ ರಕ್ಷಣೆ ಕುರಿತು ನಾಳೆ ಸುಪ್ರೀಂ ವಿಚಾರಣೆ

ಈ ಸುದ್ದಿಯನ್ನು ಶೇರ್ ಮಾಡಿ

shabarimaleನವದೆಹಲಿ, ಜ.17- ಶಬರಿಮಲೆ ಶ್ರೀ ಅಯ್ಯಪ್ಪಸ್ವಾಮಿ ಸನ್ನಿಧಿಗೆ ತೆರಳಿ ದರ್ಶನ ಪಡೆದು ದೇಶಾದ್ಯಂತ ಭಾರೀ ಸುದ್ದಿಯಾಗಿದ್ದ ಇಬ್ಬರು ಮಹಿಳೆಯರಿಗೆ 24 ತಾಸು ರಕ್ಷಣೆ ನೀಡುವ ಮನವಿ ಸಂಬಂಧ ನಾಳೆ ವಿಚಾರಣೆ ನಡೆಸುವುದಾಗಿ ಸುಪ್ರೀಂಕೋರ್ಟ್ ಇಂದು ತಿಳಿಸಿದೆ.

ಕನಕದುರ್ಗ ಮತ್ತು ಬಿಂದು ತಮಗೆ 2್ಡ47 ರಕ್ಷಣೆ ನೀಡಬೇಕೆಂದು ಇಬ್ಬರು ಮಹಿಳೆಯರು ಸುಪ್ರೀಂಕೋರ್ಟ್‍ಗೆ ಮನವಿ ಸಲ್ಲಿಸಿದರು. ಈ ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗಯ್ ಹಾಗೂ ನ್ಯಾಯಮೂರ್ತಿಗಳಾದ ಎಲ್.ಎನ್.ರಾವ್ ಮತ್ತು ಎಸ್.ಕೆ.ಕೌಲ್ ಅವರನ್ನೊಳಗೊಂಡ ಪೀಠ ಈ ಪ್ರಕರಣದ ಕೂಲಂಕಶ ವಿಚಾರಣೆಯನ್ನು ಶುಕ್ರವಾರ ಕೈಗೊಳ್ಳುವುದಾಗಿ ತಿಳಿಸಿದರು.
ಶಬರಿಮಲೆ ಅಯ್ಯಪ್ಪ ಸನ್ನಿಧಾನಕ್ಕೆ ಭೇಟಿ ನೀಡಿ ಹಿಂದಿರುಗಿದ್ದ ಕನಕದುರ್ಗ ಅವರಿಗೆ ಅವರ ಅತ್ತೆ ಹಲ್ಲೆ ಮಾಡಿದ ನಂತರ ತಮಗೆ ಭದ್ರತೆ ನೀಡಬೇಕೆಂದು ಕೋರಿದ್ದಾರೆ.

Facebook Comments