ಪೊಲೀಸ್ ತರಬೇತಿ ಕೇಂದ್ರದ ಮೇಲೆ ಕಾರ್ ಬಾಂಬ್ ದಾಳಿ, 10 ಮಂದಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Bogotaಬೊಗೊಟಾ, ಜ.18-ಪೊಲೀಸ್ ತರಬೇತಿ ಕೇಂದ್ರದ ಮೇಲೆ ನಡೆದ ಕಾರ್ ಬಾಂಬ್ ದಾಳಿಯಲ್ಲಿ 10 ಮಂದಿ ಮೃತಪಟ್ಟು, ಇತರ 65 ಜನರು ಗಾಯಗೊಂಡಿರುವ ಘಟನೆ ಕೊಲಂಬಿಯಾ ರಾಜಧಾನಿ ಬೊಗೊಟಾದಲ್ಲಿ ನಡೆದಿದೆ.

ಈ ಕೃತ್ಯದಲ್ಲಿ ಬಾಂಬರ್ ಸಹ ಹತನಾಗಿದ್ದಾನೆ. ದಕ್ಷಿಣ ಬೊಗೊಟಾದಲ್ಲಿನ ಜನರಲ್ ಫ್ರಾನ್ಸಿಸ್ಕೋ ಡಿ ಪೌಲಾ ಸಾಂಟಾಡೇರ್ ಆಫೀಸರ್ ಸ್ಕೂಲ್‍ನಲ್ಲಿ ನಡೆಯುತ್ತಿದ್ದ ಪ್ರವರ್ತನ ಸಮಾರಂಭದ ವೇಳೆ ಕಾರ್ ಬಾಂಬ್ ದಾಳಿ ನಡೆದಿದೆ.

ಇದು ಭಯೋತ್ಪಾದಕರ ಹೀನ ಕೃತ್ಯ. 80 ಕೆಜಿ ಸ್ಫೋಟಕಗಳಿದ್ದ ಕಾರನ್ನು ಬಳಸಿ ಪೊಲೀಸ್ ಕೆಡೆಟ್ ಟ್ರೈನಿಂಗ್ ಅಕಾಡೆಮಿ ಮೇಲೆ ದಾಳಿ ನಡೆಸಲಾಗಿದೆ ಎಂದು ರಕ್ಷಣಾ ಸಚಿವಾಲಯ ಉನ್ನತಾಧಿಕಾರಿಯೊಬ್ಬರು ಹೇಳಿದ್ದಾರೆ. ಭಯೋತ್ಪಾದಕರ ದಾಳಿಯನ್ನು ಉಗ್ರವಾಗಿ ಖಂಡಿಸಿರುವ ಕೊಲಂಬಿಯಾ ಅಧ್ಯಕ್ಷ ಇವಾನ್ ಡುಕ್ಯೂ, ಇದಕ್ಕೆ ಕಾರಣರಾದವರನ್ನು ಕಾನೂನು ಕುಣಿಕೆಗೆ ಒಳಪಡಿಸಲಾಗುವುದು. ಕೊಲಂಬಿಯನ್ನರು ಭಯೋತ್ಪಾದನೆಯನ್ನು ತಿರಸ್ಕರಿಸಿದ್ದಾರೆ.

ಈ ಪಿಡುಗಿನ ವಿರುದ್ಧ ಒಗ್ಗೂಡಿ ಹೋರಾಟ ನಡೆಸುತ್ತಾರೆ ಎಂದು ಹೇಳಿದ್ದಾರೆ. 16 ವರ್ಷಗಳ ಅವಧಿಯಲ್ಲಿ ಪೊಲೀಸ್ ಕೇಂದ್ರದ ಮೇಲೆ ನಡೆದ ಭೀಕರ ಬಾಂಬ್ ದಾಳಿ ಇದಾಗಿದೆ. ಕೆಲವು ವರ್ಷಗಳಿಂದ ತಣ್ಣಗಾಗಿದ್ದ ಭಯೋತ್ಪಾದಕರು ಮತ್ತೆ ಅಟ್ಟಹಾಸ ಮೆರೆದಿದ್ದು, ನಾಗರಿಕರು ಆತಂಕಕ್ಕೀಡಾಗಿದ್ದಾರೆ.

Facebook Comments