ಹಿಮಪಾತ ಅಪ್ಪಳಿಸಿ ಟ್ರಕ್‍ನಲ್ಲಿದ್ದ 10 ಮಂದಿ ನಾಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

Snowfallಶ್ರೀನಗರ, ಜ.18-ಹಿಮಪಾತ ಅಪ್ಪಳಿಸಿ ಟ್ರಕ್‍ನಲ್ಲಿದ್ದ 10 ಮಂದಿ ನಾಪತ್ತೆಯಾಗಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಲಡಖ್ ಪ್ರಾಂತ್ಯದ ಖಾರ್‍ಡಂಗ್ ಲಾ ಪ್ರದೇಶದಲ್ಲಿ ಸಂಭವಿಸಿದೆ. ಇಂದು ಬೆಳಗ್ಗೆ ಪರ್ವತಮಯ ಪ್ರದೇಶದಲ್ಲಿ ಟ್ರಕ್ ತೆರಳುತ್ತಿದ್ದಾಗ ಅದೇ ಸಮಯದಲ್ಲಿ ಹಿಮಪಾತವಾಯಿತು.

ಹಿಮ ಬಂಡೆಗಳು ವಾಹನಕ್ಕೆ ಅಪ್ಪಸಿದವು. ನಂತರ ಅದರಲ್ಲಿದ್ದ 10 ಮಂದಿ ನಾಪತ್ತೆಯಾಗಿದ್ದಾರೆ ಎಂದು ಗಡಿ ರಸ್ತೆಗಳ ಸಂಘಟನೆ (ಬಿಆರ್‍ಒ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹಿಮದ ಭಾರೀ ರಾಶಿಯೊಳಗೆ ಸಿಲುಕಿರುವ ಸಂತ್ರಸ್ತರನ್ನು ರಕ್ಷಿಸಲು ಯೋಧರು, ರಾಜ್ಯ ವಿಪತ್ತು ಸ್ಪಂದನೆ ಪಡೆದಯ ರಕ್ಷಣಾ ಕಾರ್ಯಕರ್ತರ ಸಿಬ್ಬಂದಿ ಮತ್ತು ಯಂತ್ರೋಪಕರಣಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ಅವರು ಹೇಳಿದ್ಧಾರೆ.
ಈ ಟ್ರಕ್‍ನಲ್ಲಿ ನಾಗರಕರು ಅಥವಾ ಯೋಧರು ಇದ್ದರೆ ಎಂಬುದು ತಿಳಿದುಬಂದಿಲ್ಲ.

Facebook Comments