BREAKING : ಧೂಳೆಬ್ಬಿಸಿದ ಧೋನಿ, ನಿರ್ಣಾಯಕ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ, ಸರಣಿ ಕೈವಶ

ಈ ಸುದ್ದಿಯನ್ನು ಶೇರ್ ಮಾಡಿ

Dhoni--01

ಮೆಲ್ಬೋರ್ನ್, ಜ.18-ಇಲ್ಲಿ ನಡೆಯುತ್ತಿರುವ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯ ಭಾರೀ ರೋಚಕ ಪಂದ್ಯದಲ್ಲಿ ಭಾರತ 7 ವಿಕೆಟ್‍ಗಳ ಅಂತರದಿಂದ ಆಸ್ಟ್ರೇಲಿಯವನ್ನು ಮಣಿಸಿ ಸರಣಿ ಜಯ ಸಾಧಿಸಿದೆ.

ಸ್ಪಿನ್ ಮಾಂತ್ರಿಕ ಚಹಲ್ ಅವರ ಚಮತ್ಕಾರಿ ಬೌಲಿಂಗ್ ದಾಳಿಗೆ ತತ್ತರಿಸಿರುವ ಆಸ್ಟ್ರೇಲಿಯಾ 230 ರನ್‍ಗಳಿಗೆ ಆಲ್ ಔಟಾಗಿದೆ. ಟಾಸ್ ಗೆದ್ದ ಭಾರತದ ನಾಯಕ ವಿರಾಟ್ ಕೊಹ್ಲಿ ನೇರವಾಗಿ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಇದಕ್ಕೆ ಪ್ರತಿಯಾಗಿ ಆರಂಭದಲ್ಲೇ ಸ್ವಿಂಗ್ ಮಾಂತ್ರಿಕ ವೇಗಿ ಭುವನೇಶ್ವರ್ ಕುಮಾರ್ ಅದ್ಭುತ ದಾಳಿಗೆ ಅಸೀಸ್‍ನ ಆರಂಭಿಕ ಬ್ಯಾಟ್ಸ್‍ಮನ್‍ಗಳಾದ ಫಿಂಚ್ ಮತ್ತು ಕ್ಯಾರಿ ಪ್ರತಿರೋಧವೇ ತೋರದೆ ಪೆವಿಲಿಯನ್ ಹಾದಿ ಹಿಡಿದರು.

ನಂತರ ಬಂದ ಕ್ವಾಜಾ ಮತ್ತು ಮಾರ್ಷ್ ತಾಳ್ಮೆಯ ಆಟ ಪ್ರದರ್ಶಿಸಿ ತಂಡವನ್ನು ಆಪತ್ತಿನಿಂದ ಪಾರು ಮಾಡಲು ಪ್ರಯತ್ನಿಸಿದರು. ಆದರೆ ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಸ್ಥಾನ ಪಡೆದಿರುವ ಚಹಾಲ್ ಅವರ ಚಮತ್ಕಾರಿ ಬೌಲಿಂಗ್ ದಾಳಿಗೆ ಅಸೀಸ್ ತರಗೆಲೆಗಳಂತೆ ಒಬ್ಬೊಬ್ಬರೇ ಪೆವಿಲಿಯನ್ ಸೇರಿದರು. ಅಂತಿಮ ಕ್ಷಣಗಳಲ್ಲಿ ಹ್ಯಾಂಡ್‍ಸ್ಕೋಮ್ ಮತ್ತು ಮ್ಯಾಕ್ಸ್‍ವೆಲ್ ಕೂಡ ಹೆಚ್ಚು ಹೊತ್ತು ನಿಲ್ಲಲು ಸಾಧ್ಯವಾಗಲಿಲ್ಲ. ಇನ್ನು 48.4 ಓವರ್‍ಗಳಲ್ಲೇ ತನ್ನೆಲ್ಲ ವಿಕೆಟ್ ಕಳೆದುಕೊಂಡ ಅಸೀಸ್ 230 ರನ್‍ಗಳಿಗೆ ಆಲ್ ಔಟಾಯಿತು. ಚಹಲ್ 6 ವಿಕೆಟ್ ಪಡೆದು ಎಲ್ಲರ ಗಮನ ಸೆಳೆದರು.

231ರನ್‍ಗಳ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಎಚ್ಚರಿಕೆಯಿಂದಲೇ ಬ್ಯಾಟ್ ಬೀಸಿದರು. ಆದರೆ 15 ರನ್‍ಗಳಾಗುತ್ತಿದ್ದಂತೆ ರೋಹಿತ್ ಶರ್ಮಾ (9) ಸಿದ್ಲೆ ಅವರ ಬೌಲಿಂಗ್‍ನಲ್ಲಿ ಔಟಾದರು.

ನಂತರ ಶಿಖರ್ ಧವನ್(23) ಕೂಡ ಸ್ಟೋನಿ ಅವರ ಬೌಲಿಂಗ್‍ನಲ್ಲಿ ಔಟಾದರು. ಕ್ರೀಸ್‍ಗಿಳಿದ ನಾಯಕ ವಿರಾಟ್ ಕೊಹ್ಲಿ ಮತ್ತು ಮಹೇಂದ್ರಸಿಂಗ್ ಧೋನಿ ತಾಳ್ಮೆಯ ಆಟವಾಡಿ ತಂಡವನ್ನು ಗೆಲುವಿನ ದಡಕ್ಕೆ ಮುಟ್ಟಿಸಲು ಹೋರಾಟ ನಡೆಸಿದರು. ಈ ನಡುವೆ ಕೊಹ್ಲಿ ಔಟಾದ ನಂತರ ಬಂದ ಕೇದಾರ್‍ಜಾದವ್ ತಮ್ಮ ನೈಜ್ಯ ಆಟದಿಂದ ಧೋನಿ(87)ಗೆ ಸಾಥ್ ನೀಡಿ ಮುರಿಯದ ಜತೆಯಾಟದ ನೆರವಿನಿಂದ ಅರ್ಧ ಶತಕ ಸಿಡಿಸುವ ಜತೆಗೆ ತಂಡವನ್ನು ಜಯದ ಲಯಕ್ಕೆ ತಂದರು.

ಅಂತಿಮ ಓವರ್ ವರೆಗೂ ನಡೆದ ಪಂದ್ಯದಲ್ಲಿ ಕೇದಾರ್ ಜಾದವ್ (61) ಬೌಂಡರಿ ಬಾರಿಸುವ ಮೂಲಕ ಭಾರತ ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟರು.
49.3 ಓವರ್‍ಗಳಲ್ಲಿ 233 ರನ್‍ಗಳನ್ನು ದಾಖಲಿಸುವ ಮೂಲಕ ಭಾರತ ಜಯ ಸಾಧಿಸಿತು. ಇದು ಆಸ್ಟ್ರೇಲಿಯಾ ನೆಲದಲ್ಲಿ ದೇಶಕ್ಕೆ ಲಭಿಸಿದ ಭರ್ಜರಿ ಸರಣಿ ಜಯವಾಗಿದೆ.

ಸಂಕ್ಷಿಪ್ತ ಸ್ಕೋರ್ :
ಆಸ್ಟ್ರೇಲಿಯಾ :  230
ಭಾರತ : 234/3 (49.2/50 ov, target 231)

 

Facebook Comments

Sri Raghav

Admin