ಗುಡಿಸಲ ಮೇಲೆ ಗೋಡೆ ಬಿದ್ದು ವೃದ್ಧೆ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

kr purಕೆ.ಆರ್.ಪುರಂ,ಜ.18- ಗುಡಿಸಲೊಂದರ ಮೇಲೆ ಕಾಂಪೌಂಡ್ ಗೋಡೆ ಕುಸಿದು ಬಿದ್ದ ಪರಿಣಾಮ ವೃದ್ದೆಯೊಬ್ಬರು ಮೃತಪಟ್ಟು ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೆ.ಆರ್.ಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬೃಂದಾವನ ಲೇಔಟ್‍ನಲ್ಲಿ ಗುಡಿಸಲು ಕಟ್ಟಿಕೊಂಡು ವಾಸವಿದ್ದ ಮರಿಯಮ್ಮ(70) ಮೃತಪಟ್ಟ ವೃದ್ಧೆ.

ಸುಮಾರು 10 ವರ್ಷದ ಹಿಂದೆ ಆಂಧ್ರದಿಂದ ಕುಟುಂಬದವರೊಂದಿಗೆ ಬೆಂಗಳೂರಿಗೆ ಬಂದಿದ್ದ ಮರಿಯಮ್ಮ ಬೃಂದಾವನ ಲೇಔಟ್‍ನಲ್ಲಿ ಗುಡಿಸಲು ಕಟ್ಟಿಕೊಂಡು ಜೀವನ ನಡೆಸುತ್ತಿದ್ದರು. ಗುಡಿಸಲಿಗೆ ಹೊಂದಿಕೊಂಡಂತೆ ಹಲೋ ಬ್ರಿಕ್ಸ್‍ನಿಂದ ನಿರ್ಮಿಸಲಾಗಿದ್ದ ಹಳೆಯ ಕಾಂಪೌಂಡ್ ಗೋಡೆ ತಡರಾತ್ರಿ 12.30ರ ಸಮಯದಲ್ಲಿ ಕುಸಿದು ಬಿದ್ದ ಪರಿಣಾಮ ಈ ಅಹಿತಕರ ಘಟನೆ ನಡೆದಿದೆ.

ದುರಂತದಲ್ಲಿ ಗಾಢ ನಿದ್ರೆಯಲ್ಲಿದ್ದ ಮರಿಯಪ್ಪ ಸ್ಥಳದಲ್ಲೇ ಮೃತಪಟ್ಟರೆ, ಶಾಂತಮ್ಮ, ಸುರೇಶ್, ಲಕ್ಷ್ಮಿ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.ಸುದ್ದಿ ತಿಳಿದ ಕೆ.ಆರ್.ಪುರಂ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments