ಕಾಂಗ್ರೆಸ್ ವಿಶೇಷ ಶಾಸಕಾಂಗ ಪಕ್ಷದ ಸಭೆಗೆ ನಾಲ್ವರು ಶಾಸಕರು ಗೈರು

ಈ ಸುದ್ದಿಯನ್ನು ಶೇರ್ ಮಾಡಿ

Congress-Leaders

ಬೆಂಗಳೂರು, ಜ.18-ತೀವ್ರ ಕುತೂಹಲ ಕೆರಳಿಸಿರುವ ಕಾಂಗ್ರೆಸ್ ವಿಶೇಷ ಶಾಸಕಾಂಗ ಪಕ್ಷದ ಸಭೆಗೆ ಆರಂಭವಾಗಿದ್ದು 75 ಶಾಸಕರು ಹಾಜರಾಗಿದ್ದಾರೆ. ಒಟ್ಟು 80 ಜನ ಶಾಸಕರಲ್ಲಿ ಕೇವಲ 4 ಜನ ಶಾಸಕರು ಮಾತ್ರ ಗೈರು ಹಾಜರಾಗಿದ್ದು ಇದರಲ್ಲಿ , ಸ್ಪೀಕರ್ ರಮೇಶ್ ಕುಮಾರ್ ಹೊರತುಪಡಿಸಿದರೆ ಇನ್ನು ನಾಲ್ಕು ಜನ ಶಾಸಕರು ಮಾತ್ರ ಗೈರಾದಂತಾಗಿದೆ.

ರಮೇಶ್ ಜಾರಕಿಹೊಳಿ , ಉಮೇಶ್ ಜಾದವ್, ನಾಗೇಂದ್ರ,  ಮಹೇಶ್ ಕಮಟಳ್ಳಿ ಗೈರಾದ ಶಾಸಕರು, ರಮೇಶ್ ಸ್ಪೀಕರ್ ಆಗಿರುವುದರಿಂದ ಶಾಸಕಾಂಗ ಸಭೆಯಲ್ಲಿ ಪಾಲ್ಗೊಳ್ಳಿವಂತಿಲ್ಲ.

ಮಧ್ಯಾಹ್ನ 3.30ಕ್ಕೆ ಶಾಸಕಾಂಗ ಪಕ್ಷದ ಸಭೆಯನ್ನು ನಿಗದಿ ಮಾಡಲಾಗಿತ್ತು. ಆದರೆ, ಬಿ.ಸಿ.ಪಾಟೀಲ್ ಪುತ್ರಿಯ ವಿವಾಹ ಸಮಾರಂಭ, ಎಚ್.ಕೆ.ಪಾಟೀಲ ಪದಗ್ರಹಣ ಸಮಾರಂಭದ ಕಾರಣದಿಂದಾಗಿ ಒಂದುಗಂಟೆ ತಡವಾಗಿ ಸಭೆ ಆರಂಭವಾಗಿದೆ.

ಕಾಂಗ್ರೆಸ್ ವಿರುದ್ಧ ಸೆಡ್ಡುಹೊಡೆದು ಆಪರೇಷನ್ ಕಮಲಕ್ಕೆ ಒಳಗಾಗಿ ಮುಂಬೈ ಸೇರಿದ್ದ ಅನೇಕ ಕೈ ಶಾಸಕರು ರಾಜಧಾನಿ ಬೆಂಗಳೂರಿಗೆ ಹಿಂದಿರುಗಿದ್ದು, ಇಂದಿನ ಶಾಸಕಾಂಗ ಸಭೆಯಲ್ಲಿ ಪಾಲ್ಗೊಂಡಿದ್ದಾರೆ.

ಇದೆ ವೇಳೆ ಚಿಂಚೋಳಿ ಶಾಸಕ ಉಮೇಶ್ ಜಾಧವ್ ಅವರು ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದು ನನಗೆ ಆರೋಗ್ಯ  ಸರಿಯಿಲ್ಲ , ಹಾಗೂ ಪ್ರಯಾಣ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

ಸಭೆಯಲ್ಲಿ ರಾಜ್ಯ ಉಸ್ತಿವಾರಿ ಕೆ.ಸಿ. ವೇಣುಗೋಪಾರ ಹಿರಿಯ ಮುಖಂಡರಾದ ಮಲ್ಲಿಕಾರ್ಜುನ್ ಖರ್ಗೆ, ಸಿಎಂ ಇಬ್ರಾಹಿಂ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದಾರೆ.

ಸಭೆ ಹಾಜರಾದ ಶಾಸಕರ ಪಟ್ಟಿ  ಇಲ್ಲಿದೆ ನೋಡಿ  :
1. ವಿ. ಮುನಿಯಪ್ಪ
2. ಅಮರೇಗೌಡ ಭೈಯ್ಯಾಪುರ
3. ರಾಮಲಿಂಗಾರೆಡ್ಡಿ
4. ಆನಂದ್ ಸಿಂಗ್
5. ನರೇಂದ್ರ ಹನೂರು
6. ಜಮೀರ್ ಅಹಮದ್
7. ಕೆ.ಜೆ. ಜಾರ್ಜ್
8. ಸೀಮಂತ್ ಪಾಟೀಲ್
9. ಶಿವರಾಮ್ ಹೆಬ್ಬಾರ್
10. ಎಸ್.ಟಿ. ಸೋಮಶೇಖರ್
11. ಶಾಮನೂರು ಶಿವಶಂಕರಪ್ಪ
12. ರೋಷನ್ ಭೇಗ್
13. ಸೌಮ್ಯಾ ರೆಡ್ಡಿ
14. ವೆಂಕಟರಮಣಪ್ಪ
15. ಮುನಿರತ್ನ
16. ಸತೀಶ್ ಜಾರಕಿಹೊಳಿ
17. ಭೈರತಿ ಸುರೇಶ್
18. ಫಾತಿಮಾ ಖಮರುಲ್
19. ಸಿದ್ದರಾಮಯ್ಯ
20. ಯತೀಂದ್ರ
21. ರಾಘವೇಂದ್ರ ಇಟ್ನಾಳ್
22. ಶಿವಶಂಕರ್ ರೆಡ್ಡಿ
23. ತುಕಾರಾಮ್
24. ಎನ್.ಎ. ಹ್ಯಾರೀಸ್
25. ಪ್ರತಾಪ್ ಗೌಡ ಪಾಟೀಲ್
26. ಎಂ. ಕೃಷ್ಣಪ್ಪ
27. ಗಣೇಶ್ ಹುಕ್ಕೇರಿ
28.ಬಿ.ಕೆ. ಸಂಗಮೇಶ
29. ಅಂಜಲಿ ನಿಂಬಾಳ್ಕರ್
30. ಆನಂದ್ ನ್ಯಾಮೇಗೌಡ
31. ಡಿ.ಎಸ್. ಹುಲಗೇರಿ
32. ಅಬ್ಬಯ್ಯ ಪ್ರಸಾದ್
33. ಅನಿಲ್ ಚಿಕ್ಕ ಮಾಧು
34. ನಂಜೇಗೌಡ
35. ಅಖಂಡ ಶ್ರೀನಿವಾಸ್
36. ರಾಜೇಶ್
37. ವೆಂಕಟರಮಣಪ್ಪ
38. ನಾರಾಯಣ ಸ್ವಾಮಿ
39. ಪಿ.ಟಿ. ಪರಮೇಶ್ವರ್
40. ಎಂ.ವೈ. ಪಾಟೀಲ್
41. ಶಿವಾನಂದ ಪಾಟೀಲ್
42. ರಹೀಂ ಖಾನ್
43. ಈಶ್ವರ ಖಂಡ್ರೆ
44. ಡಾ.ಜಿ. ಪರಮೇಶ್ವರ್
45. ಭೀಮಾ ನಾಯಕ್
46. ರಾಜಶೇಖರ್ ಪಾಟೀಲ್
47. ಪ್ರಿಯಾಂಕ್ ಖರ್ಗೆ
48. ಎಂ.ಬಿ. ಪಾಟೀಲ್.
49. ಆರ್.ವಿ. ದೇಶಪಾಂಡೆ
50. ಕೃಷ್ಣಭೈರೇಗೌಡ
51. ಯು.ಟಿ.ಖಾದರ್
52. ಲಕ್ಷ್ಮೀ ಹೆಬ್ಬಾಳ್ಕರ್
53. ಡಾ.ರಂಗನಾಥ್
54. ತನ್ವೀರ್ ಸೇಠ್
55. ಆನೇಕಲ್ ಶಿವಣ್ಣ
56. ಹರಿಹರ ರಾಮಪ್ಪ
57. ಯಶವಂತರಾಯಗೌಡ ಪಾಟೀಲ್
58. ಡಾ. ಸುಧಾಕರ್
59. ಎಸ್.ಎನ್. ಸುಬ್ಬಾರೆಡ್ಡಿ
60. ಅಜಯ್ ಸಿಂಗ್
61. ದಿನೇಶ್ ಗುಂಡೂರಾವ್

Facebook Comments

Sri Raghav

Admin