ದೆಹಲಿಯಲ್ಲಿ ದಟ್ಟ ಮಂಜಿನಿಂದ ವಿಮಾನಗಳ ಹಾರಾಟಕ್ಕೆ ಅಡ್ಡಿ

ಈ ಸುದ್ದಿಯನ್ನು ಶೇರ್ ಮಾಡಿ

Delhi--Fog

ನವದೆಹಲಿ, ಜ.18-ರಾಜಧಾನಿ ದೆಹಲಿಯ ಅನೇಕ ಭಾಗಗಳಲ್ಲಿ ಇಂದು ಮುಂಜಾನೆಯಿಂದಲೇ ದಟ್ಟ ಮಂಜಿನ ತೆರೆ ಆವರಿಸಿದ್ದು ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ವಿಮಾನಗಳ ಹಾರಾಟಕ್ಕೆ ತೀವ್ರ ಅಡ್ಡಿಯಾಯಿತು.

ದಟ್ಟ ಮಂಜಿನಿಂದಾಗಿ ಐಜಿಐ ಏರ್ ಪೋರ್ಟ್ ನಲ್ಲಿ ವಿಮಾನಗಳ ಆಗಮನ ಮತ್ತು ನಿರ್ಗಮನದಲ್ಲಿ ಭಾರೀ ವ್ಯತ್ಯಯವಾಯಿತು. ಮುಂಜಾನೆ 5.30ರಿಂದ ಬೆಳಗ್ಗೆ 9 ಗಂಟೆವರೆಗೆ ಕೆಲವು ವಿಮಾನಗಳ ಮಾರ್ಗಗಳನ್ನು ಸಹ ಬದಲಿಸಲಾಯಿತು.

ದೃಶ್ಯ ಗೋಚರ ತೀವ್ರ ಮಂದವಾಗಿದ್ದರಿಂದ ವಿಮಾನಗಳ ಹಾರಾಟಕ್ಕೆ ಅಡ್ಡಿಯಾಯಿತು ಮತ್ತು ಕೆಲವು ವಿಮಾನಗಳ ಆಗಮನ ಮತ್ತು ನಿರ್ಗಮನಕ್ಕೆ ತೊಂದರೆಯಾಯಿತು ಎಂದು ಏರ್ ಪೋರ್ಟ್ ನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನಗಳು ಮೇಲೇರಲು ರನ್‍ವೇನಲ್ಲಿ ಕನಿಷ್ಠ 125 ಮೀಟರ್‍ಗಳಷ್ಟು ಅಂತರದವರೆಗೆ ದೃಶ್ಯ ಗೋಚರಿಸಬೇಕು. ಆದರೆ ಮಂಜು ಮುಸುಕಿದ್ದರಿಂದ ತೀರಾ ಹತ್ತಿರದ ದೃಶ್ಯಗಳು ಸಹ ಗೋಚರಿಸುತ್ತಿರಲಿಲ್ಲ. ಈ ಕಾರಣದಿಂದಾಗಿ ವಿಮಾನಗಳ ಸಂಚಾರಕ್ಕೆ ಅಡ್ಡಿಯಾಗಿದೆ.

ದೆಹಲಿ ರೈಲು ಮತ್ತು ರಸ್ತೆ ಮಾರ್ಗಗಳಲ್ಲೂ ಮಂಜು ಆವರಿಸಿದ್ದರಿಂದ ರೈಲು ಮತ್ತು ವಾಹನಗಳ ಸಂಚಾರ ಮಂದಗತಿಯಲ್ಲಿ ಸಾಗಿತ್ತು. ಸುದ್ದಿ ತಿಳಿದ ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.

Facebook Comments

Sri Raghav

Admin