ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ದಿನೇಶ್, ಸಂಜೀವ್ ಪ್ರಮಾಣ

ಈ ಸುದ್ದಿಯನ್ನು ಶೇರ್ ಮಾಡಿ

SC judgesನವದೆಹಲಿ, ಜ.18- ನ್ಯಾಯಮೂರ್ತಿಗಳಾದ ದಿನೇಶ್ ಮಾಹೇಶ್ವರಿ ಮತ್ತು ಸಂಜೀವ್ ಖನ್ನಾ ಅವರು ಇಂದು ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಸರ್ವೋಚ್ಚ ನ್ಯಾಯಾಲಯದ ಕೋರ್ಟ್ ನಂಬರ್ 1ರಲ್ಲಿ ಇಂದು ಬೆಳಗ್ಗೆ ನಡೆದ ಪ್ರಮಾಣ ವಚನ ಸಮಾರಂಭದಲ್ಲಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನ್ಯಾಯಮೂರ್ತಿಗಳಾದ ಮಾಹೇಶ್ವರಿ ಮತ್ತು ಖನ್ನಾ ಅವರಿಗೆ ಗೋಪ್ಯ ವಿಧಿ ಭೋದಿಸಿದರು.

ಜಸ್ಟೀಸ್ ದಿನೇಶ್ ಮಾಹೇಶ್ವರಿ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಾಗಿದ್ದರು, ನ್ಯಾ.ಸಂಜೀವ್ ಖನ್ನಾ ದೆಹಲಿ ಹೈಕೋರ್ಟ್‍ನಲ್ಲಿ ನ್ಯಾಯಮೂರ್ತಿಯಾಗಿದ್ದರು. ಇವರಿಬ್ಬರ ಪ್ರಮಾಣ ವಚನದೊಂದಿಗೆ ಸುಪ್ರೀಂಕೋರ್ಟ್‍ನಲ್ಲಿ ನ್ಯಾಯಾಧೀಶರ ಸಂಖ್ಯೆ 28ಕ್ಕೇರಿದೆ. ಸರ್ವೋನ್ನತ ನ್ಯಾಯಾಲಯ 31 ನ್ಯಾಯಮೂರ್ತಿಗಳ ಸಾಮರ್ಥೈ ಹೊಂದಲು ಅವಕಾಶವಿದ್ದು, ಇನ್ನೂ ಮೂರು ನ್ಯಾಯಾಧೀಶರ ಹುದ್ದೆಗಳು ಖಾಲಿ ಇದೆ.

Facebook Comments