ಜ.24ಕ್ಕೆ ಹೊಸ ಅಂಡಮಾನ್ ನೌಕಾ-ವಾಯು ನೆಲೆ ಕಾರ್ಯಾರಂಭ

ಈ ಸುದ್ದಿಯನ್ನು ಶೇರ್ ಮಾಡಿ

Sunil Lanbaಪೋರ್ಟ್‍ಬ್ಲೇರ್, ಜ.18- ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಸೇನಾ ಕಾರ್ಯನಿರ್ವಹಣೆ ಸಾಮಥ್ರ್ಯ(ಎಎನ್‍ಸಿ) ಹೆಚ್ಚಿಸಲು ಜ.24ರಂದು ಎನ್‍ಎಎಸ್ ಶಿವ್‍ಪುರ್ ನೌಕಾ-ವಾಯು ನೆಲೆ (ಎನ್‍ಎಎಸ್) ಹೊಸ ರೂಪದೊಂದಿಗೆ ಕಾರ್ಯಾರಂಭ ಮಾಡಲಿದೆ.  ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಸುನಿಲ್ ಲನ್ಬಾ ಈ ಕೇಂದ್ರವನ್ನು ಐಎನ್‍ಎಸ್ ಕೊಹಸಾ ಎಂದು ಮರು ನಾಮಕರಣ ಮಾಡಲಿದ್ದಾರೆ.

ಎನ್‍ಎಎಸ್ ಶಿವ್‍ಪುರ್ ನೇವಲ್-ಏರ್ ಸ್ಟೇಷನ್‍ನನ್ನು 2010ರಲ್ಲಿ ಸ್ಥಾಪಿಸಲಾಗಿದೆ. ಜ.24ರಿಂದ ಈ ನೆಲೆಯ ಹೆಸರು ಐಎನ್‍ಎಸ್ ಕೊಹಸಾ ಎಂದು ಮರುನಾಮಕರಣವಾಗಲಿದೆ ಎಂದು ರಕ್ಷಣಾ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿರುವ ಬೃಹತ್ ಶ್ವೇತ ಬೇಟೆ ಸಮುದ್ರ ಹದ್ದು ಕೊಹಸಾ ಹೆಸರನ್ನೇ ಈ ನೆಲೆಗೆ ಇಡಲಾಗಿದೆ.  ಉತ್ತರ ಅಂಡಮಾನ್‍ನಲ್ಲಿ ಕಣ್ಗಾವಲು ಮತ್ತು ಪಹರೆ ಹೆಚ್ಚಿಸಲು ಇದು ಮುಂಚೂಣಿ ಕಾರ್ಯನಿರ್ವಹಣಾ ವಾಯು ನೆಲೆಯಾಗಿದೆ.

ಇದು ದ್ವೀಪದ ರಕ್ಷಣೆ ಮತ್ತು ಭದ್ರತೆಗೆ ಮಾತ್ರವಲ್ಲದೇ, ಅಂಡಮಾನ್-ನಿಕೋಬಾರ್ ಸಮಗ್ರ ಅಭಿವೃದ್ಧಿಗೂ ಮಹತ್ವದ ಕೇಂದ್ರವಾಗಲಿದೆ. ಇದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿರುವ ಮೂರನೇ ವಾಯು ನೆಲೆ ಇದಾಗಿದೆ. ಪೋರ್ಟ್ ಬ್ಲೇರ್‍ನಲ್ಲಿ ಐಎನ್‍ಎಸ್ ಉತ್ಕ್ರೋಶ್ ಮತ್ತು ಕ್ಯಾಂಪ್‍ಬೆಲ್ ಕೊಲ್ಲಿಯಲ್ಲಿ ಐಎನ್‍ಎಸ್ ಬಾಝ್ ಕಾರ್ಯನಿರ್ವಹಿಸುತ್ತಿವೆ.

Facebook Comments