ಚುನಾವಣೆಗೆ ಬೆಂಗಳೂರು ಸೆಂಟ್ರಲ್ ಕ್ಷೇತ್ರ ಆಯ್ದುಕೊಳ್ಳಲು ಪ್ರಕಾಶ್ ರೈ ಕಾರಣವೇನು ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

Prakash Rai
ಬೆಂಗಳೂರು, ಜ.18-ಬೆಂಗಳೂರು ಸೆಂಟ್ರಲ್ ನನ್ನ ಕ್ಷೇತ್ರ. ನಾನು ಹುಟ್ಟಿ, ಬೆಳೆದದ್ದು ಇದೇ ಕ್ಷೇತ್ರದಲ್ಲಿ. ಅದಕ್ಕಾಗಿ ನಾನು ಇಲ್ಲಿಂದಲೇ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ನಟ ಪ್ರಕಾಶ್‍ರಾಜ್ ಸ್ಪಷ್ಟಪಡಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಸಿನಿಮಾ ಜಗತ್ತು ಗಾಂಧಿನಗರದಲ್ಲಿ ನನ್ನ ಸ್ನೇಹಿತರು, ಕುಟುಂಬಸ್ಥರು ಇದ್ದಾರೆ. ಹೀಗಾಗಿ ಬೆಂಗಳೂರು ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದೇನೆ ಎಂದು ಹೇಳಿದರು.

ಜನರ ಆಶಯಗಳು ಈಡೇರುತ್ತಿಲ್ಲ. ಅದಕ್ಕಾಗಿ ನಾನು ಸ್ಪರ್ಧೆ ಮಾಡಲು ನಿರ್ಧರಿಸಿದ್ದೇನೆ. ಇನ್ನು ಮೂರು ತಿಂಗಳಲ್ಲಿ ಚುನಾವಣೆ ಇದೆ. ಇದಕ್ಕಾಗಿ ನಾನು ತಯಾರಾಗಬೇಕಿದೆ. ಹಲವರು ಹಿರಿಯರೊಂದಿಗೆ ಮಾತುಕತೆ ನಡೆಸಬೇಕಿದೆ ಎಂದುಹೇಳಿದರು.

ಈ ದೇಶದಲ್ಲಿ ಎಲ್ಲರೂ ಕಳ್ಳರೇ. ಐದು ವರ್ಷದಲ್ಲಿ ಪ್ರಜೆಗಳಿಗೆ ಯಾರು, ಏನು ಮಾಡುತ್ತಿದ್ದಾರೆ. ಈಗ ಅವರ ಬಗ್ಗೆ ಮಾತನಾಡಿಕೊಂಡು ಇರಲು ಟೈಂ ಇಲ್ಲ. ಅವರನ್ನು ಬದಲಾಯಿಸೋಣ ಎಂದು ಹೇಳಿದರು.

ಆಪರೇಷನ್ ಕಮಲದ ಬಗ್ಗೆ ಮಾತನಾಡಿದ ಪ್ರಕಾಶ್‍ರಾಜ್, ಬಿಜೆಪಿಗೆ ನಾಚಿಕೆಯಾಗಬೇಕು. ದೇಶಕ್ಕಾಗಿ ಯಾರೂ ಏನೂ ಮಾಡುತ್ತಿಲ್ಲ. ಜನರ ಬಗ್ಗೆ ಯಾರಿಗೂ ಯೋಚನೆ ಇಲ್ಲ. ಅವರೇನೋ ಸಭೆ ನಡೆಸುತ್ತೇವೆ ಎನ್ನುತ್ತಾರೆ.

ನಾವೇನು ಕಿವಿಗೆ ಹೂವು ಇಟ್ಟುಕೊಂಡಿದ್ದೇವೆಯೇ. ಎಷ್ಟು ದಿನ ನಡೆಯುತ್ತೇ ಈ ರಾಜಕೀಯ ಮೇಲಾಟ ಕಾದುನೋಡಬೇಕು. ಆರು ತಿಂಗಳು ಸಿನಿಮಾ ರಂಗದಿಂದ ಬ್ರೇಕ್ ತೆಗೆದುಕೊಳ್ಳುತ್ತೇನೆ. ಆಮೇಲೆ ನೋಡೋಣ ಏನಾಗುತ್ತದೆ ಎಂದು ತಿಳಿಸಿದರು.

Facebook Comments

Sri Raghav

Admin