ಅಚ್ಚರಿಯ ರೀತಿಯಲ್ಲಿ ಚೇತರಿಸಿಕೊಂಡ ಸಿದ್ದಗಂಗಾ ಶ್ರೀಗಳು..!

ಈ ಸುದ್ದಿಯನ್ನು ಶೇರ್ ಮಾಡಿ

Siddaganga-Swamiji
ಬೆಂಗಳೂರು, ಜ.18-ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಾಣಿಸುತ್ತಿದೆ. ಶ್ವಾಸಕೋಶದ ಉಸಿರಾಟದ ತೊಂದರೆ ಕಡಿಮೆಯಾಗಿದೆ. ಅವರಾಗಿಯೇ ಉಸಿರಾಡುತ್ತಿದ್ದಾರೆ.

ಇಂದಿನ ರಕ್ತ ಪರೀಕ್ಷೆಯಲ್ಲಿ ಸೋಂಕಿನ ಅಂಶ ಕಡಿಮೆಯಾಗಿದೆ ಎಂದು ತುಮಕೂರು ಸಿದ್ದಗಂಗಾ ಮಠದ ಡಾ.ಶ್ರೀ ಶಿವಕುಮಾರಸ್ವಾಮೀಜಿಯವರ ಆರೋಗ್ಯ ತಪಾಸಣೆ ಬಳಿಕ ಅವರ ಆಪ್ತ ವೈದ್ಯ ಡಾ.ಪರಮೇಶ್ವರ್ ತಿಳಿಸಿದರು.

ಶ್ರೀಗಳ ಆರೋಗ್ಯದ ಬಗ್ಗೆ ವಿವರ ನೀಡಿದ ಅವರು, ಪವಾಡ ರೀತಿಯಲ್ಲಿ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಅಲ್ಬುಮೀನ್ ಅಂಶ ಸ್ಥಿರವಾಗಿದೆ. ದ್ರವರೂಪದ ಆಹಾರ ನೀಡುತ್ತಿಲ್ಲ.

ನಿನ್ನೆ ಇಡ್ಲಿಯನ್ನು ದ್ರವರೂಪದಲ್ಲಿ ಶ್ರೀಗಳಿಗೆ ನೀಡಲಾಗಿತ್ತು. ಶ್ವಾಸಕೋಶದಲ್ಲಿ ನೀರು ತುಂಬಿಕೊಳ್ಳುವುದು ಕಡಿಮೆಯಾಗಿದೆ. ಸಹಜವಾಗಿ ಶ್ರೀಗಳು ಒಂದು ಗಂಟೆ ಉಸಿರಾಟ ನಡೆಸಿದ್ದಾರೆ. ಪ್ರೋಟೀನ್ ಅಂಶ 2.5ರಷ್ಟಿದೆ.

ನಿರೀಕ್ಷೆಗಿಂತ ಹೆಚ್ಚಾಗಿಯೇ ಚೇತರಿಸಿಕೊಂಡಿದ್ದಾರೆ. ಕಣ್ಣು ಬಿಟ್ಟು ನೋಡುತ್ತಿದ್ದಾರೆ, ಕೈಯಾಡಿಸುತ್ತಿದ್ದಾರೆ. ಇಂದು ಅಲ್ಬುಮೀನ್ ನೀಡಲಾಗುತ್ತದೆ. ಇದನ್ನು ನೀಡುವುದರಿಂದ ಪ್ರೋಟೀನ್ ಅಂಶ ಹೆಚ್ಚಾಗುತ್ತದೆ ಎಂದು ತಿಳಿಸಿದರು.

Facebook Comments

Sri Raghav

Admin