‘ಗಣರಾಜ್ಯೋತ್ಸವ ಸಮಾರಂಭದಲ್ಲಿ ಅಂಬೇಡ್ಕರ್ ಭಾವಚಿತ್ರವಿಡಿ’

ಈ ಸುದ್ದಿಯನ್ನು ಶೇರ್ ಮಾಡಿ

Ambedkar--01
ಬೆಂಗಳೂರು, ಜ.19- ಗಣರಾಜ್ಯೋತ್ಸವ ಸಮಾರಂಭ ಗಳಲ್ಲಿ ಸಂವಿಧಾನ ರಚನಕಾರರಾದ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವನ್ನು ಇಡುವಂತೆ ಆಚರಣಾ ಸಮಿತಿಯವರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆದೇಶಿಸಬೇಕು ಎಂದು ಸಾಮಾಜಿ ನ್ಯಾಯ ಪರಿಷತ್ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಸಾಮಾಜಿಕ ನ್ಯಾಯ ಪರಿಷತ್ ಅಧ್ಯಕ್ಷ ಅನಂತರಾಯಪ್ಪ ಮಾತನಾಡಿ, ಜ.26ರಂದು ಭಾರತ ಸಂವಿಧಾನ ಜಾರಿಗೆ ಬಂದ ದಿನವಾಗಿದೆ. ಅಂದು ಗಣರಾಜ್ಯೋತ್ಸವ ದಿನವಾಗಿ ದೇಶಾದ್ಯಂತ ಆಚರಿಸಲಾಗುತ್ತದೆ.

ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳು, ಕಾರ್ಪೊರೇಟ್ ಕಂಪೆನಿಗಳಲ್ಲೂ ಆಚರಿಸಿ ಕೇವಲ ಮಹಾತ್ಮಗಾಂಧೀಜಿಯವರ ಭಾವಚಿತ್ರ ವನ್ನು ಇಡಲಾಗುತ್ತಿದೆ. ಬಹುತೇಕ ಕಡೆಗಳಲ್ಲಿ ಡಾ.ಅಂಬೇ ಡ್ಕರ್ ಭಾವಚಿತ್ರವನ್ನು ಇಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿ ಸಿದರು.

ಅಂಬೇಡ್ಕರ್ ದಲಿತರೆಂಬ ಕಾರಣಕ್ಕೆ ಈ ತಾರತಮ್ಯ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದರು. ಅಂಬೇಡ್ಕರ್ ಅವರಿಗೆ ಬಹಿರಂಗವಾಗಿ ಅನ್ಯಾಯವಾಗುತ್ತಿದ್ದರೂ ದಲಿತ ಮಂತ್ರಿಗಳು, ಶಾಸಕರು ಇದನ್ನು ವಿರೋಧಿಸದೆ ಕಂಡೂ ಕಾಣದಂತಿದ್ದಾರೆ.

ಆದ್ದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೂಡಲೇ ಆದೇಶ ಹೊರಡಿಸಿ ಇನ್ನು ಮುಂದೆ ಗಣರಾಜ್ಯೋಠಿತ್ಸವ ಸಮಾರಂಭದಲ್ಲಿ ಬಿ.ಆರ್.ಅಂಬೇಡ್ಕರ್ ಭಾವಚಿತ್ರ ಇಡುವಂತೆ ಮಾಡಬೇಕೆಂದು ಅನಂತರಾಯಪ್ಪ ಆಗ್ರಹಿಸಿದರು.  ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಸಿ.ಕೆ.ರವಿಚಂದ್ರ, ಜಿ.ತಿಪ್ಪೆಸ್ವಾಮಿ, ಅಶೋಕ್‍ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Facebook Comments

Sri Raghav

Admin