ಬಂಗಾಳಿಯಲ್ಲಿ ಮಾತನಾಡಿ ಕೊಲ್ಕತ್ತಾ ಜನರ ಮನಗೆದ್ದ ಸಿಎಂ ಕುಮಾರಸ್ವಾಮಿ

ಈ ಸುದ್ದಿಯನ್ನು ಶೇರ್ ಮಾಡಿ

Kuamraswamy--01
ಕೊಲ್ಕತ್ತಾ, ಜ. 19 : ಕೊಲ್ಕತ್ತಾದಲ್ಲಿ ತೃಣಮೂಲ ಕಾಂಗ್ರೆಸ್ ವತಿಯಿಂದ ಇಂದು ನಡೆದ ವಿವಿಧ ಪಕ್ಷಗಳ ರ್ಯಾಲಿಯಲ್ಲಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಬಂಗಾಳಿ ಭಾಷೆಯಲ್ಲಿ ಕೊಲ್ಕತ್ತಾದ ಜನತೆಗೆ ಶುಭಾಶಯ ಕೋರಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಮುಖ್ಯಮಂತ್ರಿಗಳು ತಮ್ಮ ಭಾಷಣವನ್ನು ಬಂಗಾಳಿ ಭಾಷೆಯಲ್ಲಿ ಪ್ರಾರಂಭಿಸಿದಾಗ ಪ್ರೇಕ್ಷಕರು ಕರತಾಡನದೊಂದಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅವರು ಆಡಿದ ನುಡಿಗಳು ಹೀಗಿತ್ತು:

“ಶುಭ ಮಧ್ಯಾಹ್ನ, ನನಗೆ ಈ ರ್ಯಾಲಿಯಲ್ಲಿ ಅದರಲ್ಲೂ ಭಾರತೀಯ ಸಮಾಜದ ಬೌದ್ಧಿಕ ಕೆನೆ ಪದರವೆಂದೇ ಹೆಸರಾಗಿರುವ ಕೊಲ್ಕತ್ತಾದ ಜನರೊಂದಿಗೆ ಬೆರೆಯುವ ಅವಕಾಶ ದೊರೆತಿರುವುದು ನಿಜಕ್ಕೂ ಸಂತಸದ ವಿಚಾರ.
ಕವಿ ರವೀಂದ್ರನಾಥ ಠ್ಯಾಗೋರ್, ಆಧ್ಯಾತ್ಮ ಸಂತರಾದ ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ಪ್ರಗತಿಶೀಲ ಚಿಂತಕರಾದ ಈಶ್ವರಚಂದ್ರ ವಿದ್ಯಾಸಾಗರ್, ರಾಜಾರಾಮ್ ಮೋಹನ್ ರಾಯ್, ಮತ್ತು ಅಗಣಿತ ಕವಿ, ಲೇಖಕರು, ಸ್ವಾತಂತ್ರ್ಯ ಹೋರಾಟಗಾರರ ಪುಣ್ಯಭೂಮಿ ಇದು. ಈ ಮಹಾನ್ ವ್ಯಕ್ತಿಗಳು ದೇಶಕ್ಕೆ ನೀಡಿದ ಕೊಡುಗೆ ಅನನ್ಯವಾದುದು.

ಈ ಎಲ್ಲ ಶ್ರೇಷ್ಠ ವ್ಯಕ್ತಿಗಳಿಗೆ ನನ್ನ ಶ್ರದ್ಧಾಪೂರ್ವಕ ನಮನಗಳು”
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಈ ನುಡಿಗಳಿಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು.

Facebook Comments

Sri Raghav

Admin