ರೆಸಾರ್ಟ್‍ನಲ್ಲಿ ಶಾಸಕರ ಜತೆ ಲೋಕಸಭಾ ಎಲೆಕ್ಷನ್ ಚರ್ಚೆ

ಈ ಸುದ್ದಿಯನ್ನು ಶೇರ್ ಮಾಡಿ

DK-Shivakumar--01

ಬಿಡದಿ,ಜ.19- ರಾಜ್ಯದ ಅಭಿವೃದ್ಧಿ , ಲೋಕಸಭಾ ಚುನಾವಣೆ ಮುಂತಾದ ವಿಷಯಗಳ ಕುರಿತು ನಮ್ಮ ಶಾಸಕರೊಂದಿಗೆ ಚರ್ಚೆ ನಡೆಸಿದ್ದೇವೆ. ಎಲ್ಲಾ ಸಚಿವರು ಕಾರ್ಯೋನ್ಮುಖರಾಗಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬಿಡದಿಯ ಈಗಲ್‍ಟನ್ ರೆಸಾರ್ಟ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಅಭಿವೃದ್ಧಿ ಕೆಲಸಗಳು ನಿಂತಿಲ್ಲ.

ಎಲ್ಲಾ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಚುರುಕು ಮುಟ್ಟಿಸಲಾಗಿದೆ ಎಂದರು.
ಇದು ನನ್ನ ಕ್ಷೇತ್ರ. ನಾವಿಲ್ಲಿ ಅಭಿವೃದ್ಧಿ ಕಾರ್ಯ ಹಾಗೂ ಲೋಕಸಭಾ ಚುನಾವಣೆ ಸಂಬಂಧ ಎಲ್ಲಾ ಶಾಸಕರೊಂದಿಗೆ ಚರ್ಚೆ ನಡೆಸಿದ್ದೇವೆ ಎಂದು ಹೇಳಿದರು.

ಈಗಲ್ ಟನ್ ರೆಸಾರ್ಟ್ ಸುಮಾರು 992 ಕೋಟಿ ರೂ. ದಂಡ ಬೇಕಾಗಿದ್ದು, ಅದನ್ನು ವಸೂಲಿ ಮಾಡಿಕೊಂಡು ಬನ್ನಿ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಡಿಕೆ ಶಿವಕುಮಾರ್, ಈಗಲ್ ಟನ್ ರೆಸಾರ್ಟ್‍ಗೆ ದಂಡ ಹಾಕಿದ್ದು ಕಾಂಗ್ರೆಸ್ ಪಕ್ಷವೇ ಹೊರತು ಬಿಜೆಪಿಯಲ್ಲ.

ದಂಡ ವಸೂಲಿ ಮಾಡಲು ಕೆಲವು ಕಾನೂನು ತೊಡಕುಗಳಿವೆ . ನಿವಾರಣೆಯಾದ ಮೇಲೆ ದಂಡ ವಸೂಲಿ ಮಾಡುತ್ತೇವೆ ಎಂದು ಹೇಳಿದರು. ಸಿದ್ದರಾಮಯ್ಯನವರು ಹುಚ್ಚ ಎಂದು ಈಶ್ವರಪ್ಪ ಟೀಕಿಸಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಡಿಕೆಶಿವಕುಮಾರ್ ಯಾವ ನಾಯಕರ ಟೀಕೆಗಳಿಗೂ ನಾನು ಪ್ರತಿಕ್ರಿಯಿಸುವುದಿಲ್ಲ ಎಂದರು.

Facebook Comments

Sri Raghav

Admin