‘ರಾಮ್ ಕೃಪಾಲ್ ತಲೆ ಕತ್ತರಿಸಬೇಕು’ ಎಂದು ಘರ್ಜಿಸಿದ ಲಾಲು ಪುತ್ರಿ..!

ಈ ಸುದ್ದಿಯನ್ನು ಶೇರ್ ಮಾಡಿ

Misa-Bharati--01
ಪಾಟ್ನಾ, ಜ.19 (ಪಿಟಿಐ)- ಬಿಜೆಪಿಗೆ ಸೇರ್ಪಡೆಯಾದ ರಾಷ್ಟ್ರೀಯ ಜನತಾ ದಳದ(ಆರ್‍ಜೆಡಿ) ಮಾಜಿ ನಾಯಕ ಮತ್ತು ಕೇಂದ್ರ ಸಚಿವ ರಾಮ್ ಕೃಪಾಲ್ ಯಾದವ್ ಅವರ ತಲೆ ಕತ್ತರಿಸಬೇಕೆಂಬ ವಿವಾದಾತ್ಮಕ ಹೇಳಿಕೆ ನೀಡಿರುವ ಆರ್‍ಜೆಡಿ ಮುಖಂಡ ಲಾಲು ಪ್ರಸಾದ್ ಯಾದವ್‍ರ ಪುತ್ರಿ ಮಿಸಾ ಭಾರತಿ ಈಗ ಜೇನುಗೂಡು ಕೆದಕಿದಂಥ ಪರಿಸ್ಥಿತಿಗೆ ಸಿಲುಕಿದ್ದಾರೆ.

ರಾಮ್ ಕೃಪಾಲ್ ಯಾದವ್ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟದಲ್ಲಿ ಗ್ರಾಮೀಣಾಭಿವೃದ್ದಿ ಖಾತೆ ರಾಜ್ಯ ಸಚಿವರಾಗಿದ್ದಾರೆ. ಇವರು ಬಿಹಾರದ ಪಾಟಲಿಪುತ್ರ ಲೋಕಸಭಾ ಸದಸ್ಯರು.

ಕಳೆದ ಬುಧವಾರ ಪಾಟ್ನಾದ ಬಿಕ್ರಮ್ ಪ್ರದೇಶದಲ್ಲಿ ನಡೆದ ಸಮಾರಂಭವೊಂದರಲ್ಲಿ ಭಾಗವಹಿಸಿದ್ದ ಮಿಸಾ ಭಾರತಿ ನೀಡಿರುವ ಈ ಹೇಳಿಕೆ ಈಗ ಭಾರೀ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.

ಅವರ(ರಾಮ್ ಕೃಪಾಲ್ ಯಾದವ್) ತಲೆಯನ್ನು ಕತ್ತರಿಸಬೇಕು. ನಾವು ಅವರ ಬಗ್ಗೆ ಅಪಾರ ಗೌರವ ಹೊಂದಿದ್ದೇವು. ನಾನು ಅವರನ್ನು ಪ್ರೀತಿಯಿಂದ ಚಾಚಾ(ಅಂಕಲ್) ಎನ್ನುತ್ತಿದ್ದೆ. ಅವರು ಬಿಜೆಪಿಯ ಸುಶೀಲ್ ಕುಮಾರ್ ಮೋದಿ ಜೊತೆ ಕೈಜೋಡಿಸಿದ ಕ್ಷಣದಿಂದ ನಾವು ಅವರನ್ನು ಗೌರವಿಸುವುದನ್ನು ನಿಲ್ಲಿಸಿದೆವು.

ಇಂಥ ದ್ರೋಹ ಎಸಗಿರುವ ಅವರನ್ನು ಕತ್ತರಿಸುವ ಯಂತ್ರದಿಂದ ಅವರ ಕೈಗಳು ಮತ್ತು ತಲೆಯನ್ನು ಕತ್ತರಿಸಬೇಕೆಂದು ನನಗೆ ಅನಿಸಿತ್ತು ಎಂದು ಮಿಸಾ ಭಾರತಿ ಆರ್ಭಟಿಸಿದ್ದರು. ಲಾಲುಗೆ ಪರಮಾಪ್ತರಾಗಿದ್ದ ಅವರು ಪಾಟಲಿಪುತ್ರ ಲೋಕಸಭಾ ಕ್ಷೇತ್ರದಿಂದ ಆರ್‍ಜೆಡಿ ಟಿಕೆಟ್ ನಿರಾಕರಿಸಿದ್ದರಿಂದ ಬಂಡಾಯವೆದ್ದು ಪಕ್ಷ ತೊರೆದು 2014ರಲ್ಲಿ ಬಿಜೆಪಿ ಸೇರಿದ್ದರು.

Facebook Comments

Sri Raghav

Admin