ಐಆರ್‌ಟಿಸಿ ಹಗರಣದಲ್ಲಿ ಜ.28ರವರೆಗೆ ಲಾಲುಗೆ ಜಾಮೀನು ವಿಸ್ತರಣೆ

ಈ ಸುದ್ದಿಯನ್ನು ಶೇರ್ ಮಾಡಿ

Lalu-Prasad-Yadav
ನವದೆಹಲಿ, ಜ.19 (ಪಿಟಿಐ)- ರೈಲ್ವೆ ಆತಿಥ್ಯ ಮತ್ತು ಪ್ರವಾಸೋದ್ಯಮ ನಿಗಮ(ಐಆರ್‍ಸಿಟಿಸಿ) ಹಗರಣ ಸಂಬಂಧ ತನಿಖಾ ದಳ(ಸಿಬಿಐ) ಮತ್ತು ಜಾರಿ ನಿರ್ದೇಶನಾಲಯ(ಇಡಿ) ದಾಖಲಿಸಿದ್ದ ಎರಡು ಪ್ರಕರಣಗಳಲ್ಲಿ ರಾಷ್ಟೀಯ ಜನತಾ ದಳ(ಆರ್‍ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರಿಗೆ ನೀಡಲಾಗಿದ್ದ ಮಧ್ಯಂತರ ಜಾಮೀನನ್ನು ದೆಹಲಿಯ ನ್ಯಾಯಾಲಯವೊಂದು ಜ.28ರವೆಗೆ ವಿಸ್ತರಿಸಿದೆ.

ಲಾಲು ಅವರಲ್ಲದೇ, ಅವರ ಪತ್ನಿ-ಮಾಜಿ ಮುಖ್ಯಮಂತ್ರಿ ರಾಬ್ಡಿ ದೇವಿ ಹಾಗೂ ಪುತ್ರ-ಮಾಜಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರಿಗೂ ಸಹ ಇದೇ ಪ್ರಕರಣಗಳಲ್ಲಿ ಜಾಮೀನು ಅವಧಿಯನ್ನು ಜ.28ರವರೆಗೆ ವಿಸ್ತರಿಸಲಾಗಿದೆ.

ಈ ಸಂಬಂಧ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶ ಅರುಣ್ ಭಾರದ್ವಾಜ್ ಈ ಮೂವರಿಗೆ ನೀಡಲಾಗಿದ್ದ ಜಾಮೀನು ಅವಧಿಯನ್ನು ವಿಸ್ತರಿಸಿದರು.

ಜ.28ರಂದು ಲಾಲು ಮತ್ತಿತರರ ಸಾಮಾನ್ಯ ಜಾಮೀನು ಅರ್ಜಿಗಳ ಬಗ್ಗೆ ತನ್ನ ಅದೇಶವನ್ನು ಪ್ರಕಟಿಸಲಿದೆ. ಎರಡು ಐಆರ್‍ಸಿಟಿಸಿ ಹೋಟೆಲ್‍ಗಳ ಕಾರ್ಯನಿರ್ವಹಣಾ ಗುತ್ತಿಗೆಯನ್ನು ಎರಡು ಖಾಸಗಿ ಸಂಸ್ಥೆಗಳಿಗೆ ನೀಡುವಲ್ಲಿ ಅವ್ಯವಹಾರಗಳು ನಡೆದಿವೆ ಎಂಬ ಆರೋಪಗಳಿಗೆ ಸಂಬಂಧಪಟ್ಟ ಪ್ರಕರಣಗಳು ಇವಾಗಿವೆ.

Facebook Comments

Sri Raghav

Admin