ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಮತ್ತಷ್ಟು ಚೇತರಿಕೆ
ತುಮಕೂರು, ಜ.19- ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರ ಆರೋಗ್ಯ ಸ್ಥಿತಿಯಲ್ಲಿ ಮತ್ತಷ್ಟು ಚೇತರಿಕೆ ಕಂಡುಬಂದಿದ್ದು, ಇಂದು ಮುಂಜಾನೆ ಕಿರಿಯ ಶ್ರೀಗಳೊಂದಿಗೆ ಇಷ್ಟಲಿಂಗ ಪೂಜೆ ನಡೆಸಿದ್ದಾರೆ.
ಇಂದು ಬೆಳಗ್ಗೆ ಈ ಕುರಿತು ಮಾಹಿತಿ ನೀಡಿದ ಶ್ರೀಗಳ ಆಪ್ತ ವೈದ್ಯ ಡಾ.ಪರಮೇಶ್ವರ್ ಅವರು, ಶ್ರೀಗಳ ಉಸಿರಾಟದ ಸಮಸ್ಯೆ ಹತೋಟಿಗೆ ಬಂದಿದೆ. ರಕ್ತದಲ್ಲಿನ ಸೋಂಕಿನ ಅಂಶ ಕಡಿಮೆಯಾಗಿದ್ದು, ಇನ್ನು ಎರಡು-ಮೂರು ವಾರಗಳಲ್ಲಿ ಪೌಷ್ಠಿಕಾಂಶಗಳು ಸಹಜ ಸ್ಥಿತಿಗೆ ಬಂದರೆ ಶ್ರೀಗಳು ಪೂರ್ಣ ಗುಣಮುಖರಾಗುತ್ತಾರೆ ಎಂದು ತಿಳಿಸಿದ್ದಾರೆ.
ಶ್ರೀಗಳಿಗೆ ಕೃತಕ ಉಸಿರಾಟ (ವೆಂಟಿಲೇಟರ್)ದ ವ್ಯವಸ್ಥೆ ತೆಗೆಯಲಾಗಿದ್ದು, ಸ್ವಂತ ಉಸಿರಾಟದ ಶಕ್ತಿ ಬಂದಿದೆ. ಇಂದಿನಿಂದ ಹಂತ ಹಂತವಾಗಿ ಪ್ರೋಟೀನ್ ಅಂಶ ಹೆಚ್ಚಳಕ್ಕೆ ಔಷಧಿಗಳನ್ನು ನೀಡುತ್ತೇವೆ ಎಂದು ತಿಳಿಸಿದ್ದಾರೆ.
ಶ್ರೀಗಳ ಆರೋಗ್ಯದಲ್ಲಿ ಪವಾಡ ಸದೃಶ ರೀತಿಯಲ್ಲಿ ಚೇತರಿಕೆ ಕಾಣುತ್ತಿದ್ದು, ಇದು ನಮಗೂ ಕೂಡ ಸಂತಸ ತಂದಿದೆ ಎಂದು ತಿಳಿಸಿದ್ದಾರೆ. ಆದರೂ ಅವರ ದರ್ಶನಕ್ಕೆ ಇನ್ನೂ ಕಾಲಾವಕಾಶ ಬೇಕಾಗಿದೆ. ಭಕ್ತರು ಸಹಕರಿಸಬೇಕು ಎಂದು ಕಿರಿಯ ಶ್ರೀಗಳು ಮನವಿ ಮಾಡಿದ್ದಾರೆ.
Pingback: this site
Pingback: gvk bio company information
Pingback: Escort kiz