ವ್ಯಕ್ತಿಯನ್ನು ಕೊಂದು ಕಾಫಿ ತೋಟದಲ್ಲಿ ಹೂತಿದ್ದ ಮೂವರಿಗೆ ಜೀವಾವಧಿ ಶಿಕ್ಷೆ..!

ಈ ಸುದ್ದಿಯನ್ನು ಶೇರ್ ಮಾಡಿ

Jail--01

ಹಾಸನ,ಜ.19- ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿ ಕಾಫಿ ತೋಟದಲ್ಲಿ ಹೂತಿದ್ದ ಪ್ರಕರಣ ಸಂಬಂಧ ಮೂವರಿಗೆ ಇಲ್ಲಿನ ಮೂರನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಕಾಕನಮನೆ ಗ್ರಾಮದ ಮೋಹನ, ಗಣೇಶ, ಚಂದ್ರಶೇಖರ ಶಿಕ್ಷೆಗೆ ಗುರಿಯಾದ ಅಪರಾಧಿಗಳಾಗಿದ್ದಾರೆ. ಕಳೆದ 2013, ಆಗಸ್ಟ್ 23ರಂದು ಸೆಲ್ವ ದೊರೈ ಜಾಕಿಚಾನ್ ಎಂಬುವರನ್ನು ಈತನ ಪತ್ನಿ ಅಂಬಿಕ ಹಾಗೂ ಇತರ ನಾಲ್ವರು ಕೊಲೆ ಮಾಡಿ ಸಮೀಪದಲ್ಲೇ ಇದ್ದ ಕಾಫಿ ಎಸ್ಟೇಟ್‍ನಲ್ಲಿ ಶವವನ್ನು ಹೂತಿ ಹಾಕಿದ್ದರು.

ಘಟನೆ ವಿವರ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಅಂಬಿಕಾ ಮತ್ತು ಸೆಲ್ವ ದೊರೈ ನಡುವೆ ಮನಸ್ತಾಪ ಉಂಟಾಗಿತ್ತು. ಗ್ರಾಮಸ್ಥರು ರಾಜೀ ಪಂಚಾಯ್ತಿ ಮಾಡಿ ಇಬ್ಬರನ್ನು ಸಮಾಧಾನ ಪಡಿಸಿದ್ದರು.

ಇಷ್ಟಕ್ಕೆ ಸುಮ್ಮನಾಗದ ಪತ್ನಿ ಅಂಬಿಕಾ, ತನ್ನ ಪತಿಗೆ ಕಂಠಪೂರ್ತಿ ಕುಡಿಸಿ ಮನೆಯ ಹೊರಗೆ ಸುತ್ತಾಡಿಕೊಂಡು ಬರೋಣವೆಂದು ಕರೆದೊಯ್ದಿದ್ದಳು.
ಈ ವೇಳೆ ಮೋಹನ, ಗಣೇಶ, ಚಂದ್ರಶೇಖರ ಅವರಿಗೆ ಕುಮ್ಮಕ್ಕು ನೀಡಿ ಪತಿಯ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿಸಿ ಕೊಲೆ ಮಾಡಿಸಿರುವುದಾಗಿ ಆಕೆಯ ಮೇಲೆ ಆರೋಪವಿತ್ತು.

ದಿನಗಳದಂತೆ ಸೆಲ್ವಾ ದೊರೈ ಕಾಣದಿದ್ದಾಗ ಅನುಮಾನಗೊಂಡು ಕೆಲವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಯಿತು.

ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸಾಕ್ಷಾಧಾರಗಳ ಕೊರತೆಯಿಂದ ಅಂಬಿಕಾ ಅವರನ್ನು ದೋಷಮುಕ್ತಗೊಳಿಸಿದ್ದು, ಇತರ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

Facebook Comments

Sri Raghav

Admin