ಚಿಂತಾಮಣಿ ನಗರಸಭೆ ಅಧಿಕಾರಿಗಳಿಂದ ಪೌರ ಕಾರ್ಮಿಕರಿಗೆ ‘ಅನಾರೋಗ್ಯ ಭಾಗ್ಯ’ …!

ಈ ಸುದ್ದಿಯನ್ನು ಶೇರ್ ಮಾಡಿ

Chintamani--01

ಚಿಂತಾಮಣಿ, ಜ.20- ನನ್ನ ಚಿಂತಾಮಣಿ ಸ್ವಚ್ಛ ಚಿಂತಾಮಣಿ ಎಂದು ಕರೆಸಿಕೊಂಡು ರಾಜ್ಯ ಮಟ್ಟದ ಉತ್ತಮ ಪರಿಸರ ಪ್ರಶಸ್ತಿ ಪಡೆದುಕೊಂಡಿದ್ದ ಚಿಂತಾಮಣಿ ನಗರಸಭೆಯ ವ್ಯಾಪ್ತಿಯಲ್ಲಿ ಇಂದು ಅಶುಚಿತ್ವ ತಾಂಡವಾಡುತ್ತಿದ್ದು ಶುಚಿತ್ವಕ್ಕೆ ಸೂಕ್ತ ಕ್ರಮ ಕೈಗೊಳ್ಳದ ಪರಿಣಾಮ ಇಂದು ನಗರಸಭೆಯ ಅಧಿಕಾರಿಗಳಿಂದಲೇ ಪೌರಕಾರ್ಮಿಕರು ಅನಾರೋಗ್ಯಕ್ಕೆ ತುತ್ತಾಗಿ ಸಾವಿನ ದವಡೆಗೆ ತಲುಪುತ್ತಿದ್ದಾರೆ.

ಕೇಂದ್ರ ಸರ್ಕಾರ ಸ್ವಚ್ಚ ಭಾರತ ಅಭಿಯಾನ ಮಾಡುತ್ತಿದ್ದ ನಗರಸಭೆಯ ಅಧಿಕಾರಿಗಳು ಮಾತ್ರ ಅಶುಚಿತ್ವದ ಅಭಿಯಾನ ನಡೆಸುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿ ಎಂದರೆ ಜನನಿಬಿಡ ವಾಹನ ದಟ್ಟಣೆ ಮತ್ತು ಪ್ರಮುಖ ರಸ್ತೆಗಳಲ್ಲಿ ಬಡಾವಣೆಗಳಲ್ಲಿ ತಾಂಡವಾಡುತ್ತಿರುವ ಕಸದ ರಾಶಿಗಳೇ ಉದಾಹರಣೆ.

ಇದರ ಜೊತೆಗೆ ಮಾಂಸ ಮಾರಾಟ ಅಂಗಡಿಗಳ ಬಳಿ ಸೇರಿದಂತೆ ನಗರದ ವಿವಿಧ ಕಡೆ ಹೋಟೆಲ್‍ಗಳಲ್ಲಿ ಉಳಿಕೆಯಾಗಿ ಕೆಟ್ಟು ಹೋಗಿರುವ ಸಸ್ಯಹಾರಿ ಮತ್ತು ಮಾಂಸಹಾರಿ ಆಹಾರ ವನ್ನು ಜನನಿಬಿಡ ರಸ್ತೆಯ ಪಕ್ಕದಲ್ಲಿಯೇ ಪ್ರತಿದಿನ ಸುರಿಯುತ್ತಿದ್ದರೂ ನಗರಸಭೆಯ ಅಧಿಕಾರಿ ಗಳು ಮಾತ್ರ ತಮ್ಮ ಕಣ್ಣಿಗೆ ಏನು ಕಾಣದಂತೆ ಕಣ್ಣು ಮುಚ್ಚಿ ಕುಳಿತ್ತಿದ್ದಾರೆ ಎಂದರೆ ಅಶುತ್ವಕ್ಕೆ ನಗರಸಭೆಯ ಅಧಿಕಾರಿಗಳೇ ಎಂದರೆ ತಪ್ಪಾಗಲಾರದು.

ತಾಜಾ ಉದಾಹರಣೆ ಎಂದರೆ ನಗರದ ಪ್ರತಿಷ್ಟಿತ ರಸ್ತೆಯಾದ ಬೆಂಗಳೂರು ಜೋಡಿ ರಸ್ತೆಯಲ್ಲಿ ಇರುವ ಡಿಸಿಸಿ ಬ್ಯಾಂಕ್ ಕಾಂಪೌಂಡ್ ಬಳಿಯ ಬಸ್ ನಿಲ್ದಾಣದ ಸ್ಥಳ ಮೂತ್ರ ವಿಸರ್ಜನೆಯ ಸ್ಥಳವಾಗಿರುವುದರ ಜೊತೆಗೆ ಆ ಸ್ಥಳದಲ್ಲಿಯೇ ಕೊಳೆತ ಆಹಾರವನ್ನು ಪ್ರತಿದಿನ ಹಲವಾರು ಹೋಟೆಲ್‍ನವರು ರಾಶಿ ರಾಶಿಯಾಗಿ ಸುರಿಯುತ್ತಿರುವುದೇ ಉದಾಹರಣೆ.

ಮಲಮೂತ್ರ ವಿಸರ್ಜನೆಯ ಜೊತೆಗೆ ಕೊಳೆತ ಆಹಾರದಿಂದ ಇಡೀ ರಸ್ತೆಯಲ್ಲಿ ಗಬ್ಗುನಾಥ ಬೀರುತ್ತಿದ್ದು ಜನರು ಪ್ರಮುಖ ರಸ್ತೆಯಲ್ಲಿಯೇ ಓಡಾಡುವಾಗಲೇ ಮೂಗು ಮುಚ್ಚಿಕೊಂಡು ಹೋಗುವಂತಹ ಪರಿಸ್ಥಿತಿ ನಗರಸಭೆಯ ಕಚೇರಿಗೆ ಸಮೀಪದಲ್ಲಿಯೇ ನಿರ್ಮಾಣವಾಗಿದೆ.

ಇಂತಹ ದುರ್ನಾತದ ಕಸವನ್ನು ಎತ್ತಿ ಸಾಗಾಣೆಕೆ ಮಾಡುವ ನಗರಸಭೆಯ ಪೌರಕಾರ್ಮಿ ಕರು ಮತ್ತು ನಗರಸಭೆಯ ಗುತ್ತಿಗೆ ಪೌರಕಾರ್ಮಿಕರ ಪರಿಸ್ಥಿತಿಯಂತು ಹೇಳತೀರದು. ಇಂದು ಬೆಳಿಗ್ಗೆ ಸಂಪೂರ್ನ ದುರ್ನಾತದ ವಾಸನೆಯನ್ನು ಎತ್ತುವಾಗ ಇಬ್ಬರು ಪೌರಕಾರ್ಮಿಕರು ವಾಸನೆಗೆ ತಟ್ಟುಕೊಳ್ಳದೆ ವಾಂತಿ ಮಾಡಿಕೊಂಡು ಪ್ರಸಂಗ ನಡೆಯಿತು.

ನಗರಸಭೆಯ ಪಕ್ಕದಲ್ಲಿಯೇ ಆಗಿರುವ ಈ ಅಶುಚಿತ್ವದ ಬಗ್ಗೆ ಮತ್ತು ಪ್ರತಿದಿನ ಇಂತಹ ಅಶುಚಿತ್ವದ ಕಸ ವಿಲೇವಾರಿಯಿಂದ ಪೌರಕಾರ್ಮಿಕರು ರೋಗರುಜಿನುಗಳಿಗೆ ತುತ್ತಾಗಿ ಅನಾರೋಗ್ಯ ಪೀಡಿತರಾಗಿ ಸಾವನ್ನಪ್ಪಲು ಕಾರಣವಾಗುತ್ತಿದೆ.

ನಗರದಲ್ಲಿ ಇಂತಹ ಅಶುಚಿತ್ವ ನಿರ್ಮಾಣ ಮಾಡಿದವರಿಗೆ ಕಾನೂನು ರೀತಿಯ ಕ್ರಮಗಳು ಇಲ್ಲವೆ ಎಂದು ನಗರಸಭೆಯ ಪರಿಸರ ಅಭಿಯಂತರ ಉಮಾಶಂಕರ್ ಮತ್ತು ಹಿರಿಯ ಆರೋಗ್ಯ ಅಧಿಕಾರಿ ರವರನ್ನು ಸಂಪರ್ಕಿಸಿದಾಗ ಅವರು ಉತ್ತರವೇ ನೀಡಲಿಲ್ಲ.

ಕೊನೆಗೂ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಪರಿಸ್ಥಿತಿಯ ನೈಜಸ್ಥಿತಿಯನ್ನು ಗಮನಕ್ಕೆ ತಂದಾಗ ಅವರು ತರಾಟೆ ತೆಗೆದುಕೊಂಡ ನಂತರ ಇಬ್ಬರು ಅಧಿಕಾರಿಗಳು ಅ ಸ್ಥಳ ಸ್ವಚತೆ ಮಾಡಿ ಬೀಚಿಂಗ ಪೌಡರ್ ಹಾಕಲಾಗಿದೆ, ಸುತ್ತಮುತ್ತಲಿನ ಹೋಟೆಲ್‍ನವರು ನಗರಸಭೆಯ ವಾಹನಗಳಿಗೆ ಕಸವನ್ನು ನೀಡುತ್ತಿದ್ದಾರೆ ಆದರೆ ರಾತ್ರಿ ವೇಳೆ ತಳ್ಳುವ ಬಂಡಿಯ ವ್ಯಾಪಾರಸ್ಥರು ಈ ಕಸವನ್ನು ಹಾಕುತ್ತಿರಬಹುದು ಅವರು ಕಸ ಹಾಕದಂತೆ ನಮ್ಮ ಪ್ರಯತ್ನಗಳು ನಡೆಯುತ್ತಿವೆ ಎಂಬ ಉತ್ತರ ಸಿಕ್ಕಿತು.

ನಗರದ ಶುಚಿತ್ವ ಕಾಪಾಡ ಬೇಕಾದ ಅಧಿಕಾರಿಗಳು ಇಂದು ಬೀದಿಗೆ ಕಸ ಹಾಕದಂತೆ ತಡೆಯುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳುತ್ತಿದ್ದಾರೆ ಹೊರತು ನಡೆಯುತ್ತಿಲ್ಲ ಎಂಬುದಕ್ಕೆ ನಗರದಲ್ಲಿ ಸಿಗುವ ರಾಶಿಗಳೇ ಉದಾಹರಣೆಯಾಗಿದ್ದು, ಸಂಪೂರ್ಣ ಅಶುಚಿತ್ವದ ಕಸ ಸಾಗಾಣೆಯನ್ನು ಕಾರ್ಮಿಕರಿಂದ ಸಾಗಿಸಿ ಅವರನ್ನು ಅನಾರೋಗ್ಯಕ್ಕೆ ತುತ್ತು ಮಾಡಿ ಎಷ್ಟು ಮಂದಿಯನ್ನು ಬಲಿ ಮಾಡ್ತಾರೋ ಕಾದು ನೋಡಬೇಕಾಗಿದೆ.

# ಮಾನವ ಹಕ್ಕುಗಳಿಗೆ ದೂರು:
ನಗರಸಭೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಗರದಲ್ಲಿ ಅಶುಚಿತ್ವ ತಾಂಡವಾಡುತ್ತಿದ್ದು, ಆಂತಹ ಕಸವನ್ನು ಪ್ರತಿದಿನ ಸಾಗಾಣೆಕೆ ಮಾಡಿ ಗುತ್ತಿಗೆ ಪೌರಕಾರ್ಮಿಕರು ಅನಾರೋಗ್ಯಕ್ಕೆ ತುತ್ತಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಈ ಬಗ್ಗೆ ಅಧಿಕಾರಿಗಳು ಗಮನಹರಿಸಿದ ಪರಿಣಾಮ ಹಿರಿಯ ಅಧಿಕಾರಿಗಳಿಗೆ ದೂರು ಸಲ್ಲಿಸುವುದರ ಜೊತೆಗೆ ಮಾನವ ಹಕ್ಕುಗಳ ಅಯೋಗಕ್ಕೆ ಮತ್ತು ಸಫಾಯಿ ಕರ್ಮಚಾರಿ ಇಲಾಖೆಗೆ ದೂರು ಸಲ್ಲಿಸುತ್ತೇವೆ.

ಅಗ್ರಹಾರ ಮೋಹನ್ ಅಧ್ಯಕ್ಷರು ಕರವೇ ಸ್ವಾಭಿಮಾನಿ ಬಣ್ಣದ ಜಿಲ್ಲಾಧ್ಯಕ್ಷರು.  19.ಸಿ.ಎಂ.ವೈ.1 ಚಿಂತಾಮಣಿ ನಗರಸಭೆಯ ಸಮೀಪದಲ್ಲಿಯೇ ಇರುವ ಮುಖ್ಯ ರಸ್ತೆಯ ಬಸ್ ನಿಲ್ದಾಣದ ಬಳಿ ಮೂತ್ರ ವಿಸರ್ಜನೆಯ ಜೊತೆಗೆ ಕೊಳೆತ ಆಹಾರವನ್ನು ಸುರಿದಿರುವುದು.

19.ಸಿ.ಎಂ.ವೈ.2 ಚಿಂತಾಮಣಿ ನಗರದ ಬೆಂಗಳೂರು ಜೋಡಿ ರಸ್ತೆಯ ರಾಜೀವನಗರದ ಬಳಿ ದ್ವಿಚಕ್ರವಾಹ ಷೂರೂಂ ಅಂಗಡಿಯವರು ಕಸವನ್ನು ಮೂಟೆ ಕಟ್ಟಿ ಪಾದಚಾರಿ ರಸ್ತೆಯ ಪಕ್ಕದಲ್ಲಿ ಬಿಸಾಡಿರುವುದು. ಅಕ್ರಮ ಮರಳು ದಂಧೆ ತಡೆಗೆ ಹೊಸ ಪ್ಲಾನ್

# ಪೊಲೀಸರ ಕ್ರಮಕ್ಕೆ ಜನರ ಮೆಚ್ಚುಗೆ
ಚಿಂತಾಮಣಿ, ಜ.20- ರಾಜ್ಯ ಸರ್ಕಾರದ ನಿರ್ಬಂಧದ ನಡುವೆಯೇ ಅಕ್ರಮ ಮರಳಿನ ಸಾಗಾಣಿಕೆಯ ಜತೆಗೆ ಫಿಲ್ಟರ್ ಮರಳು ದಂಧೆ ಜೋರಾಗಿದ್ದು ಅದಕ್ಕೆ ಕಡಿವಾಣ ಹಾಕಲು ಇದೀಗ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ಅಕ್ರಮ ಮರಳು ಸ್ಥಳಕ್ಕೆ ಹೋಗದಂತೆ ಗುಂಡಿಗಳನ್ನು ತೋಡುವ ಕೆಲಸಕ್ಕೆ ಮುಂದಾಗಿದೆ.

ತಾಲೂಕಿನಾದ್ಯಂತ ಅಕ್ರಮ ಮರಳು ಮತ್ತು ಫಿಲ್ಟರ್ ಮರಳನ್ನು ಲಾರಿ, ಟಿಪ್ಪರ್ ಮತ್ತು ಟ್ರ್ಯಾಕ್ಟರ್ ಮೂಲಕ ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿರುವುದನ್ನು ಕಂಡ ಪ್ರಭಾರಿ ಉಪ ವಿಭಾಗಾಧಿಕಾರಿ ಅಶೋಕ್ ತೇಲಿರವರು ತಹಸೀಲ್ದಾರ್ ಆಗಿ ಅಧಿಕಾರ ವಹಿಸಿಕೊಂಡ ದಿನದಿಂದಲೂ ತಾಲೂಕಿನಲ್ಲಿ ಒಂದಲ್ಲ ಒಂದು ಕಡೆ ಅಕ್ರಮ ಮರಳು ಮತ್ತು ಫಿಲ್ಟರ್ ಮರಳಿನ ಮೇಲೆ ದಾಳಿ ನಡೆಸುವ ಮೂಲಕ ಮರಳು ಲಾರಿ, ಟಿಪ್ಪರ್, ಟ್ರ್ಯಾಕ್ಟರ್ ಮತ್ತು ಜೆಸಿಬಿಯನ್ನು ಸಹ ವಶಪಡಿಸಿ ಕೊಂಡಿದ್ದರು.

ಆದರೂ ಮರಳು ಮಾಫಿಯಾ ದಂಧೆಕೋರರು ತಾಲ್ಲೂಕಿನ ತಾಲೂಕಿನ ಸುತ್ತಮುತ್ತಲಿನ ಕೆರೆಗಳಲ್ಲಿ ಹಗಲು ಮತ್ತು ರಾತ್ರಿ ಎನ್ನದೆ ರಾಜÁರೋಷವಾಗಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದ್ದು, ವಿಶೇóಷವಾದರೆ ಅವರಿಗೆ ಬೆಂಬಲವಾಗಿ ಪೊಲೀಸ್ ಇಲಾಖೆ ಇದೆ ಎಂಬ ಕೂಗು ಸಹ ಕೇಳಿ ಬಂದಿತ್ತು.

ಕಳೆದರಡು ದಿನಗಳ ಹಿಂದೆ ಗ್ರಾಮಾಂತರ ಠಾಣೆಯ ಸರ್ಕಲ್ ಇನ್ಸ್‍ಪೆಕ್ಟರ್ ಆಗಿ ಅಧಿಕಾರ ವಹಿಸಿಕೊಂಡ ಶ್ರೀನಿವಾಸಪ್ಪರವರು ತಾಲೂಕಿನಾದ್ಯಂತ ಅಕ್ರಮ ಮರಳಿನ ಜೊತೆಗೆ ಫಿಲ್ಟರ್ ಮರಳು ದಂಧೆಗೆ ಸಂಪೂರ್ಣ ಕಡಿವಾಣ ಹಾಕಲು ಹೊಸ ಪ್ಲಾನ್ ರೂಪಿಸಿ ಕೆರೆಗಳತ್ತ ಯಾವುದೇ ವಾಹನಗಳು ತಲಪುದ್ದಂತೆ ಪ್ರಮುಖ ರಸ್ತೆಗಳಲ್ಲಿ ಜೆಸಿಬಿಯಲ್ಲಿ ದೊಡ್ಡ ದೊಡ್ಡ ಗುಂಡಿಗಳನ್ನು ತೋಡಿದ್ದಾರೆ.  ಇದರಿಂದ ದಂಧೆಕೋರರು ಅಕ್ರಮ ಚಟುವಟಿಕೆಯಲ್ಲಿ ತೊಡಗಲು ಹಿನ್ನಡೆಯಾಗಿದ್ದು , ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

Facebook Comments

Sri Raghav

Admin