ಶಿವಮೊಗ್ಗದಲ್ಲಿ ಬೀಡಿ, ಸಿಗರೇಟು, ಕಡ್ಡಿಪುಡಿ, ಹೊಗೆಸೊಪ್ಪು ಮಾರಾಟ ನಿಷೇಧ

ಈ ಸುದ್ದಿಯನ್ನು ಶೇರ್ ಮಾಡಿ

ಶಿವಮೊಗ್ಗ,ಜ.20- ಜಿಲ್ಲಾ ತಂಬಾಕು ನಿಯಂತ್ರಣ ಕೋಶವು ಕೋಟ್ಪಾ-2003 ಕಾಯ್ದೆಯನುಸಾರ ಜಿಲ್ಲೆಯಲ್ಲಿ ಬಿಡಿಬಿಡಿಯಾಗಿ ಮಾರಾಟ ಮಾಡುತ್ತಿರುವ ಸಿಗರೇಟು, ಬೀಡಿ ಹಾಗೂ ಜಗಿಯುವ ತಂಬಾಕಿನ ಉತ್ಪನ್ನಗಳನ್ನು(ಕಡ್ಡಿಪುಡಿ) ಈ ಕೂಡಲೇ ಜರಿಗೆ ಬರುವಂತೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಕಾನೂನನ್ನು ಉಲ್ಲಂಘಿಸಿದ ಯಾವುದೇ ವ್ಯಕ್ತಿಯು ಕೋಟ್ಪಾ ಕಾಯ್ದೆಯಡಿ ದಂಡನೆಗೆ ಒಳಗಾಗುವರು ಎಂದು ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಜಿಲ್ಲಾ ಕಾರ್ಯಕ್ರಮಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Facebook Comments