ಅಕ್ರಮ ಮರಳು ದಂಧೆ ತಡೆಯಲು ಪೊಲೀಸರ ಹೊಸ ಪ್ಲಾನ್

ಈ ಸುದ್ದಿಯನ್ನು ಶೇರ್ ಮಾಡಿ

sandalಚಿಂತಾಮಣಿ, ಜ.20- ರಾಜ್ಯ ಸರ್ಕಾರದ ನಿರ್ಬಂಧದ ನಡುವೆಯೇ ಅಕ್ರಮ ಮರಳಿನ ಸಾಗಾಣಿಕೆಯ ಜತೆಗೆ ಫಿಲ್ಟರ್ ಮರಳು ದಂಧೆ ಜೋರಾಗಿದ್ದು ಅದಕ್ಕೆ ಕಡಿವಾಣ ಹಾಕಲು ಇದೀಗ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ಅಕ್ರಮ ಮರಳು ಸ್ಥಳಕ್ಕೆ ಹೋಗದಂತೆ ಗುಂಡಿಗಳನ್ನು ತೋಡುವ ಕೆಲಸಕ್ಕೆ ಮುಂದಾಗಿದೆ.

ತಾಲೂಕಿನಾದ್ಯಂತ ಅಕ್ರಮ ಮರಳು ಮತ್ತು ಫಿಲ್ಟರ್ ಮರಳನ್ನು ಲಾರಿ, ಟಿಪ್ಪರ್ ಮತ್ತು ಟ್ರ್ಯಾಕ್ಟರ್ ಮೂಲಕ ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿರುವುದನ್ನು ಕಂಡ ಪ್ರಭಾರಿ ಉಪ ವಿಭಾಗಾಧಿಕಾರಿ ಅಶೋಕ್ ತೇಲಿರವರು ತಹಸೀಲ್ದಾರ್ ಆಗಿ ಅಧಿಕಾರ ವಹಿಸಿಕೊಂಡ ದಿನದಿಂದಲೂ ತಾಲೂಕಿನಲ್ಲಿ ಒಂದಲ್ಲ ಒಂದು ಕಡೆ ಅಕ್ರಮ ಮರಳು ಮತ್ತು ಫಿಲ್ಟರ್ ಮರಳಿನ ಮೇಲೆ ದಾಳಿ ನಡೆಸುವ ಮೂಲಕ ಮರಳು ಲಾರಿ, ಟಿಪ್ಪರ್, ಟ್ರ್ಯಾಕ್ಟರ್ ಮತ್ತು ಜೆಸಿಬಿಯನ್ನು ಸಹ ವಶಪಡಿಸಿ ಕೊಂಡಿದ್ದರು.

ಆದರೂ ಮರಳು ಮಾಫಿಯಾ ದಂಧೆಕೋರರು ತಾಲ್ಲೂಕಿನ ಸುತ್ತಮುತ್ತಲಿನ ಕೆರೆಗಳಲ್ಲಿ ಹಗಲು ಮತ್ತು ರಾತ್ರಿ ಎನ್ನದೆ ರಾಜರೋಷವಾಗಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದ್ದು, ವಿಶೇಷವಾದರೆ ಅವರಿಗೆ ಬೆಂಬಲವಾಗಿ ಪೊಲೀಸ್ ಇಲಾಖೆ ಇದೆ ಎಂಬ ಕೂಗು ಸಹ ಕೇಳಿ ಬಂದಿತ್ತು.

ಕಳೆದರಡು ದಿನಗಳ ಹಿಂದೆ ಗ್ರಾಮಾಂತರ ಠಾಣೆಯ ಸರ್ಕಲ್ ಇನ್ಸ್‍ಪೆಕ್ಟರ್ ಆಗಿ ಅಧಿಕಾರ ವಹಿಸಿಕೊಂಡ ಶ್ರೀನಿವಾಸಪ್ಪರವರು ತಾಲೂಕಿನಾದ್ಯಂತ ಅಕ್ರಮ ಮರಳಿನ ಜೊತೆಗೆ ಫಿಲ್ಟರ್ ಮರಳು ದಂಧೆಗೆ ಸಂಪೂರ್ಣ ಕಡಿವಾಣ ಹಾಕಲು ಹೊಸ ಪ್ಲಾನ್ ರೂಪಿಸಿ ಕೆರೆಗಳತ್ತ ಯಾವುದೇ ವಾಹನಗಳು ತಲಪುದ್ದಂತೆ ಪ್ರಮುಖ ರಸ್ತೆಗಳಲ್ಲಿ ಜೆಸಿಬಿಯಲ್ಲಿ ದೊಡ್ಡ ದೊಡ್ಡ ಗುಂಡಿಗಳನ್ನು ತೋಡಿದ್ದಾರೆ. ಇದರಿಂದ ದಂಧೆಕೋರರು ಅಕ್ರಮ ಚಟುವಟಿಕೆಯಲ್ಲಿ ತೊಡಗಲು ಹಿನ್ನಡೆಯಾಗಿದ್ದು , ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

Facebook Comments