6000 ಹೊಸ ಬಸ್‍ ಖರೀದಿಗೆ ಮುಂದಾದ ಸಾರಿಗೆ ಇಲಾಖೆ..!

ಈ ಸುದ್ದಿಯನ್ನು ಶೇರ್ ಮಾಡಿ

DC-rtammanna--01

ಹುಣಸೂರು, ಜ.20- ರಾಜ್ಯ ರಸ್ತೆ ಸಾರಿಗೆಯ ನಾಲ್ಕು ನಿಗಮಗಳಿಗೆ ಹೊಸದಾಗಿ 6 ಸಾವಿರ ಬಸ್‍ಗಳನ್ನು ಖರೀದಿಸುವ ಯೋಜನೆ ಇದೆ ಎಂದು ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಹೇಳಿದರು.  ನಗರದ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಮೇಜರ್ ಸರ್ಜರಿ ಆಗಬೇಕಿದ್ದು, ಕೆಲವೇ ದಿನಗಳಲ್ಲಿ ಎಲ್ಲವೂ ಸರಿಪಡಿಸಲಾಗುವುದು ಎಂದರು.

ರಾಜ್ಯ ರಸ್ತೆ ಸಾರಿಗೆ ನಷ್ಟದಲ್ಲಿದ್ದು, ಈ ನಷ್ಟವನ್ನು ಭರಿಸುವ ಉದ್ದೇಶದಿಂದ ನಗರ ಮತ್ತು ತಾಲ್ಲೂಕು ಕೇಂದ್ರಗಳ ಬಸ್ ನಿಲ್ದಾಣದ ನಿವೇಶನದಲ್ಲಿ ಬಹುಮಹಡಿ ಕಟ್ಟಡ ನಿರ್ಮಿಸಿ ಸರ್ಕಾರಿ ಕಚೇರಿಗಳಿಗೆ ಬಾಡಿಗೆಗೆ ನೀಡುವ ಉದ್ದೇಶ ಹೊಂದಿದೆ.

ಇದಲ್ಲದೆ ನಿಲ್ದಾಣದ ಹೊರ ಭಾಗದಲ್ಲಿ ವಾಣಿಜ್ಯ ಮಳಿಗೆ ನಿರ್ಮಿಸಿ ಬಾಡಿಗೆ ನೀಡುವ ಕೆಲಸ ರಾಜ್ಯದಾದ್ಯಂತ ಕೈಗೆತ್ತಿಕೊಳ್ಳಲಾಗಿದೆ ಎಂದರು.ನಗರದ ಶಾಸಕ ಹೆಚ್.ವಿಶ್ವನಾಥ್ ನಗರದಲ್ಲಿ ಕೆಎಸ್‍ಆರ್‍ಟಿಸಿಯ ವಿಬಾಗಿಯ ಕಚೇರಿ ಸ್ಥಾಪನೆಗಾಗಿ ಪ್ರಸ್ಥವನೆ ಸಲ್ಲಿಸಿದ್ದಾರೆ.

ಹುಣಸೂರು, ಕೆಆರ್.ನಗರ, ಹೆಚ್.ಡಿ.ಕೋಟೆ, ಪಿರಿಯಾಪಟ್ಟಣ ಹಾಗೂ ಮಡಿಕೇರಿಯಲ್ಲಿ ವಿಭಾಗಿಯ ಕಚೇರಿ ಸ್ಥಾಪನೆಗೆ ಸರ್ಕಾರ ಚಿಂತನೆ ನಡೆಸಿದೆ ಎಂದು ಸಚಿವ ಡಿ.ಸಿ ತಮ್ಮಣ್ಣ ತಿಳಿಸಿದರು.

ಬಸ್ ನಿಲ್ದಾಣದಲ್ಲಿ ಮಲ್ಟಿಪ್ಲೆಕ್ಸ್ ಥಿಯೇಟರ್ ನಿರ್ಮಿಸುವ ಉದ್ದೇಶ ಹೊಂದಿದ್ದು, ಈಗಾಗಲೇ ಮಹಾನಗರಪಾಲಿಗೆ ವ್ಯಾಪ್ತಿಗಳಲ್ಲಿ ಕ್ರಮವಹಿಸಿ ಯಶಸ್ವಿಯಾಗಿದೆ. ಅದೇ ಮಾದರಿ ನಗರಸಭೆ ವ್ಯಾಪ್ತಿಯಲ್ಲೂ ಜನಸಂಖ್ಯೆಗೆ ಅನುಗುಣವಾಗಿ ನಿರ್ಮಿಸಲಾಗುವುದು ಎಂದರು.

# ತಡೆಗೋಡೆ:
ರಸ್ತೆ ಸಾರಿಗೆ ಸಂಚರಿಸುವ ಮಾರ್ಗದ ಕೆರೆ ಏರಿಗಳಿಗೆ ಸಿಮೆಂಟ್ ಕಾಂಕ್ರೀಟ್ ಅಥವಾ ರೈಲ್ವೆ ಹಳಿ ತಡೆಗೋಡೆ ನಿರ್ಮಿಸಲು ಮುಖ್ಯಮಂತ್ರಿಗಳೇ ಆದೇಶಿಸಿದ್ದು, ಲೋಕೋಪಯೋಗಿ ಇಲಾಖೆಗೆ ಪತ್ರ ಬರೆಯುವಂತೆ ತಹಶೀಲ್ದಾರ್‍ಗೆ ಸೂಚಿಸಿದರು.

ಬಸ್ ನಿಲ್ದಾಣವನ್ನು ಆಧುನಿಕರಣಗೊಳಿಸುವ ಕೆಲಸಕ್ಕೆ ಇಲಾಖೆ ಚಿಂತನೆ ನಡೆಸಿದ್ದು, ಪ್ರತಿ ನಿಲ್ದಾಣಕ್ಕೂ ಸಿ.ಸಿ ಕ್ಯಾಮೆರಾ, ಹೈಮಾಸ್ಕ್ ದೀಪ ಮತ್ತು ಮಕ್ಕಳಿಗೆ ಹಾಲುಣಿಸಲು ಪ್ರತ್ಯೇಕ ಕೊಠಡಿ, ಮಹಿಳೆಗೆ ವಿಶ್ರಾಂತಿ ಕೊಠಡಿ ನಿರ್ಮಿಸಲಾಗುವುದು ಎಂದರು.

7 ಸಾವಿರ ಕಿ.ಮಿ. ಓಡಿದ ಬಸ್ ಗುಜರಿಗೆ ಹಾಕಲಾಗುತ್ತಿದೆ. ಈ ಮಿತಿಯನ್ನು ವೈಜ್ಞಾನಿಕವಾಗಿ ಪರಿಶೀಲಿಸಿ ಇಲಾಖೆ 15 ಸಾವಿರ ಕಿ.ಮಿ. ಓಡಿದ ಬಸ್‍ಗಳನ್ನು ಗುಜರಿಗೆ ಹಾಕಲು ಕ್ರಮ ವಹಿಸಿದೆ. 7 ರಿಂದ 8 ಸಾವಿರ ಓಡಿದ ಬಸ್‍ಗಳಿಗೆ ಮತ್ತೊಮ್ಮೆ ಬಾಡಿ ಬಿಲ್ಡ್ ಮಾಡಿ ಎಂಜಿನ್ ಸಿದ್ಧಗೊಳಿಸಿ ರಸ್ತೆಗಿಳಿಸುವ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ನಗರಸಭೆ ಅಧ್ಯಕ್ಷ ಎಚ್.ವೈ.ಮಹದೇವ್,ತಹಸಿಲ್ದಾರ್ ಮೋಹನ್, ಡಿಪೋಮೆನೆಜರ್ ವಿಪಿನ್ ಕೃಷ್ಣ, ಜೆಡಿಎಸ್ ಮುಖಂಡ ಗಣೇಶ್ ಗೌಡ, ನಗರಸಭೆ ಸದಸ್ಯೆ ಸತೀಶ್ ಕುಮಾರ್ ಮತ್ತು ಕೆಂಪರಾಜು, ಸತ್ಯಪ್ಪ ಇತರರಿದ್ದರು.

Facebook Comments

Sri Raghav

Admin