ನೀರವ್ ಮೋದಿ ಹಗರಣದಲ್ಲಿ ಇಬ್ಬರು ಉನ್ನತಾಧಿಕಾರಿಗಳ ತಲೆದಂಡ

ಈ ಸುದ್ದಿಯನ್ನು ಶೇರ್ ಮಾಡಿ

niravಮುಂಬೈ,ಜ.20- ನೀರವ್ ಮೋದಿ 14 ಸಾವಿರ ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ನ್ಯಾಷನಲ್ ಬ್ಯಾಂಕಿನ ಇಬ್ಬರು ಕಾರ್ಯನಿರ್ವಾಹಕ ನಿರ್ದೇಶಕರನ್ನು ಕೇಂದ್ರ ಸರ್ಕಾರ ಸೇವೆಯಿಂದ ವಜ ಮಾಡಿದೆ. ಬ್ಯಾಂಕ್ ಹಿರಿಯ ಅಧಿಕಾರಿಗಳಾದ ಕೆ.ವೀರ ಬ್ರಹ್ಮಾಜಿ ರಾವ್ ಹಾಗೂ ಸಂಜೀವ್ ಶರಣ್ ವಜಾಗೊಂಡಿರುವವರು.

ಇವರಿಬ್ಬರು ಶೀಘ್ರದಲ್ಲಿಯೇ ನಿವೃತ್ತಿಯಾಗಲಿದ್ದರು. ಈ ಇಬ್ಬರಿಗೂ ಶೋಕಾಸ್ ನೋಟಿಸ್ ನೀಡಿರುವ ಕೇಂದ್ರ, ಹಗರಣದ ಸಂದರ್ಭದಲ್ಲಿ ಕಾರ್ಯಾ ನಿರ್ವಹಕ ನಿರ್ದೇಶಕರಾಗಿದ್ದ ನೀವು ಬ್ಯಾಂಕ್‍ನ ಕಾರ್ಯದ ಬಗ್ಗೆ ನಿಯಂತ್ರಣ ಸಾಧಿಸದ ಕಾರಣ ನಿಮ್ಮನ್ನು ಕೆಲಸದಿಂದ ತೆಗೆದು ಹಾಕಲಾಗಿದೆ ಎಂದು ತಿಳಿಸಿದೆ.

Facebook Comments