4,000 ತಮಿಳು ಬೆಸ್ತರ ಬೆದರಿಸಿದ ಓಡಿಸಿ ಲಂಕಾ ನೌಕಾಪಡೆ

ಈ ಸುದ್ದಿಯನ್ನು ಶೇರ್ ಮಾಡಿ

fishermenರಾಮೇಶ್ವರಂ(ತಮಿಳುನಾಡು), ಜ.20- ಭಾರತ ಮತ್ತು ಶ್ರೀಲಂಕಾ ಜಲಗಡಿ ಪ್ರದೇಶದಲ್ಲಿ ತಮಿಳುನಾಡಿನ ಮೀನುಗಾರರು ಮತ್ತು ಶ್ರೀಲಂಕಾ ನೌಕಾಪಡೆ ನಡುವೆ ಘರ್ಷಣೆ ಮರುಕಳಿಸಿದೆ. ನೆಡುಂತಿವು ಪ್ರದೇಶದಲ್ಲಿ ನಿನ್ನೆ ಮೀನುಗಾರಿಕೆಯಲ್ಲಿ ತೊಡಗಿದ್ದ ರಾಮೇಶ್ವರಂನ 4,000ಕ್ಕೂ ಹೆಚ್ಚು ಬೆಸ್ತರನ್ನು ಲಂಕಾ ಕರಾವಳಿ ರಕ್ಷಣಾ ಸಿಬ್ಬಂದಿ ಬೆದರಿಸಿ ಓಡಿಸಿದ್ದಾರೆ.

ನೌಕಾಪಡೆ ಯೋಧರ ಕಲ್ಲು ತೂರಾಟದಲ್ಲಿ ಕೆಲವು ಯೋಧರು ಗಾಯಗೊಂಡಿದ್ದಾರೆ ಎಂದು ರಾಮೇಶ್ವರಂ ಮೀನುಗಾರರ ಸಂಘದ ಅಧ್ಯಕ್ಷ ಪಿ.ಸೆಸುರಾಜ ತಿಳಿಸಿದ್ದಾರೆ.

590 ಯಾಂತ್ರಿಕೃತ ದೋಣಿಗಳಲ್ಲಿ ಗಡಿ ಪ್ರದೇಶದಲ್ಲಿ ನಮ್ಮ ಮೀನುಗಾರರು ಮೀನುಗಾರಿಕೆ ನಡೆಸುತ್ತಿದ್ದರು. ಆಗ ಅಲ್ಲಿಗೆ ಬಂದ ದ್ವೀಪರಾಷ್ಟ್ರದ ನೌಕಾಪಡೆ ಯೋಧರು ಬೆಸ್ತರ ಮೇಲೆ ಕಲ್ಲುಗಳನ್ನು ತೂರಿದರು.

10 ದೋಣಿಗಳ ಮೀನುಗಾರಿಕೆ ಬಲೆಗಳನ್ನು ಹರಿದು ಹಾಕಿದರು. 20 ಬೋಟ್‍ಗಳ ಜಿಪಿಎಸ್‍ಗಳನ್ನು ಕೊಂಡೊಯ್ಡರು ಎಂದು ಅವರು ಆರೋಪಿಸಿದ್ಧಾರೆ.  ಶ್ರೀಲಂಕಾ ನೌಕಾಪಡೆಯ ಈ ದೌರ್ಜನ್ಯದಿಂದ ಬೆಸ್ತರು ಮೀನುಗಾರಿಕೆ ನಡೆಸದೇ ಬರಿಗೈಯಲ್ಲಿ ಹಿಂದಿರುಗಿದ್ದಾರೆ ಎಂದು ಸೇಸುರಾಜ ತಿಳಿಸಿದ್ದಾರೆ.

Facebook Comments