ಪವಾಡ ಪುರುಷರ ಪುಣ್ಯ ಕ್ಷೇತ್ರ ಸಿದ್ದಪ್ಪಾಜಿ ಜಾತ್ರೆಗೆ ಸಕಲ ಸಿದ್ಧತೆ

ಈ ಸುದ್ದಿಯನ್ನು ಶೇರ್ ಮಾಡಿ

SiddappaPajiಕೊಳ್ಳೇಗಾಲ, ಜ.20- ಪವಾಡ ಪುರುಷರ ಪುಣ್ಯ ಕ್ಷೇತ್ರ ಸಿದ್ದಪ್ಪಾಜಿ ಅವರ ಜಾತ್ರೆಗೆ ಈ ಬಾರಿ ಅತ್ಯಂತ ಮುತುವರ್ಜಿಯಿಂದ ಕಾಮಗಾರಿಗಳನ್ನು ನೆರವೇರಿಸಲಾಗಿದೆ. ಈ ಕ್ಷೇತ್ರದ ಅಭಿವೃದ್ಧಿಗೆ ಹಿಂದಿನ ಸಿದ್ದರಾಮಯ್ಯ ಸರ್ಕಾರ ಮೂರು ಕೋಟಿ ಅನುದಾನ ಬಿಡುಗಡೆ ಮಾಡಿತ್ತು. ಆ ಪೈಕಿ ಚಿಕ್ಕಲ್ಲೂರು ಪುಣ್ಯಕ್ಷೇತ್ರದಲ್ಲಿ ಸುಮಾರು 99 ಲಕ್ಷ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಮಾಡಲಾಗಿದೆ.

ಅಭಿವೃದ್ಧಿಯ ಜವಾಬ್ದಾರಿಯನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆಗೆ ವಹಿಸಿದ್ದು, ಕಾಮಗಾರಿಯನ್ನು ನಿರ್ಮಿತಿ ಕೇಂದ್ರ ಕೈಗೊಂಡಿತು. ದೇವಾಲಯದ ಹಿಂಭಾಗ ಮಹಿಳೆಯರು ಹಾಗೂ ಪುರುಷರಿಗಾಗಿ ಪ್ರತ್ಯೇಕವಾಗಿ 80 ಹೈಟೆಕ್ ಶೌಚಗೃಹ ಹಾಗೂ 18 ಸ್ನಾನಗೃಹಗಳನ್ನು ನಿರ್ಮಿಸಲಾಗಿದೆ. ದೇವಸ್ಥಾನದ ಆವರಣದಲ್ಲಿ 30 ಅಡಿ ಹಾಗೂ ಸುತ್ತಲು 17 ಅಡಿ ಅಳತೆಯ ಗ್ರಾನೈಟ್ ಅಳವಡಿಸಲಾಗಿದೆ.

ಚಂದ್ರಮಂಡಲ ಕಟ್ಟೆ ಸುತ್ತ 110 ಅಡಿ ದೇವಸ್ಥಾನದ ಹೊರಾಂಗಣದಲ್ಲಿ 45 ಅಡಿ ಅಳತೆಯ ಇಂಟರ್‍ಲಾಕ್, ವಿದ್ಯುತ್ ಹಾಗೂ ನೀರಿನ ಸಂಪರ್ಕ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಜಾತ್ರೆಗೆ ಬರುವ ಭಕ್ತರಿಗೆ ನೀರು ಕಲ್ಪಿಸುವ ಸಲುವಾಗಿ ಜಾತ್ರೆಯ ಆವರಣದಲ್ಲಿರುವ ಸುಮಾರು 10 ಎಕರೆ ಪ್ರದೇಶದಲ್ಲಿ ವಿದ್ಯುತ್ ಬೋರ್‍ವೆಲ್‍ಗಳು ಹಾಗೂ ತೆರೆದ ಬಾವಿಗಳಲ್ಲಿ ಕೈಪಂಪ್‍ಗಳ ದುರಸ್ತಿ ಹಾಗೂ ನೀರಿನ ತೊಂಬೆಗಳನ್ನು ಸ್ವಚ್ಛಪಡಿಸಲಾಗಿದೆ.

ದೇವಾಲಯದ ಸುತ್ತ 8 ಸಿಸಿ ಕ್ಯಾಮೆರಾ, ಹಳೆಮಠದ ದಾಸೋಹ ಭವನದ ಸುತ್ತ 6 ಸಿಸಿ ಕ್ಯಾಮೆರಾ ಹಾಗೂ ಮತ್ತಿಪುರ ಕ್ರಾಸ್ ಬಳಿ 3 ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಜಾತ್ರೆಗೆ ಲಕ್ಷಾಂತರ ಮಂದಿ ಭಕ್ತರು ಆಗಮಿಸುವುದರಿಂದ ಬಿಗಿ ಪೊಲೀಸ್ ಭದ್ರತೆ ಮಾಡಲಾಗಿದೆ.

Facebook Comments