ಚಳಿಗಾಲದಲ್ಲಿ ತುಟ್ಟಿಯ ರಕ್ಷಣೆಗೆ ಇಲ್ಲಿವೆ ಟಿಪ್ಸ್

ಈ ಸುದ್ದಿಯನ್ನು ಶೇರ್ ಮಾಡಿ

lips ಸುಂದರ ತುಟಿ ಜನರನ್ನು ಆಕರ್ಷಿಸುತ್ತದೆ. ಮುಖದ ಸೌಂದರ್ಯ ಹೆಚ್ಚಿಸುವ ಜೊತೆಗೆ ವ್ಯಕ್ತಿತ್ವವನ್ನು ತೋರಿಸುತ್ತದೆ. ಚಳಿಗಾಲದಲ್ಲಿ ಚರ್ಮದ ಜೊತೆಗೆ ತುಟಿಗಳು ಸೌಂದರ್ಯ ಕಳೆದುಕೊಳ್ಳುತ್ತವೆ. ತುಟಿಗಳು ಬಿರುಕು ಬಿಟ್ಟಂತೆ ಕಾಣುವುದಲ್ಲದೆ ಕೆಲವರ ತುಟಿಗಳಿಂದ ರಕ್ತ ಬರುವುದುಂಟು. ಚಳಿಗಾಲದಲ್ಲಿ ತುಟಿಗಳ ಆರೈಕೆ ಬಹಳ ಮುಖ್ಯ. ಕೆಲವೊಂದು ಟಿಪ್ಸ್ ಗಳನ್ನು ಅನುಸರಿಸುತ್ತ ಬಂದಲ್ಲಿ ಚಳಿಗಾಲದಲ್ಲಿಯೂ ಸುಂದರ ತುಟಿಯನ್ನು ನಮ್ಮದಾಗಿಸಿಕೊಳ್ಳಬಹುದು.

ದೇಹದಲ್ಲಿ ನೀರಿನ ಅಂಶ ಕಡಿಮೆಯಾದಲ್ಲಿ ತುಟಿಗಳು ತೇವಾಂಶ ಕಳೆದುಕೊಳ್ಳುತ್ತವೆ. ಇದ್ರಿಂದ ತುಟಿ ಒಡೆಯುತ್ತದೆ. ಹಾಗಾಗಿ ಚಳಿಗಾಲದಲ್ಲಿಯೂ ಹೆಚ್ಚೆಚ್ಚು ನೀರು ಕುಡಿದಲ್ಲಿ ತುಟಿಯ ರಕ್ಷಣೆ ಸುಲಭವಾಗುತ್ತದೆ. ರಾತ್ರಿ ಜೇನು ತುಪ್ಪವನ್ನು ತುಟಿಗಳಿಗೆ ಹಚ್ಚಿ ಮಲಗುವುದ್ರಿಂದ ತುಟಿಗಳು ಮೃದುವಾಗುತ್ತವೆ. ರಾತ್ರಿ ತುಟಿಗಳಿಗೆ ಜೇನುತುಪ್ಪ ಹಚ್ಚಿ ಬೆಳಿಗ್ಗೆ ತಣ್ಣೀರಿನಲ್ಲಿ ತೊಳೆಯಬೇಕು.

ಗ್ಲಿಸರಿನ್ ಹಾಗೂ ರೋಸ್ ವಾಟರನ್ನು ಸಮ ಪ್ರಮಾಣದಲ್ಲಿ ಮಿಕ್ಸ್ ಮಾಡಿ ರಾತ್ರಿ ತುಟಿಗೆ ಹಚ್ಚುತ್ತ ಬಂದಲ್ಲಿ ಅತಿ ಬೇಗ ತುಟಿ ಉರಿ, ಒಡಕು ಸಮಸ್ಯೆ ಕಡಿಮೆಯಾಗುತ್ತದೆ. ಬೆರಳಿನಲ್ಲಿ ಸ್ವಲ್ಪ ಆಕಳ ತುಪ್ಪವನ್ನು ತೆಗೆದುಕೊಂಡು ತುಟಿಗಳಿಗೆ ಮಸಾಜ್ ಮಾಡಿ. ತುಟಿಗಳ ರಕ್ತ ಸಂಚಾರ ಸುಲಭವಾಗಿ ಒಡಕು ನಿವಾರಣೆಯಾಗುತ್ತದೆ.

ಹೆಚ್ಚು ಕ್ಯಾರೆಟ್ ಹಾಗೂ ಹಸಿ ಸೌತೆಕಾಯಿ ತಿನ್ನಿ. ಇದು ನಿಮ್ಮ ತುಟಿಗಳನ್ನು ಯಾವಾಗಲೂ ತಾಜಾತನದಿಂದ ಹೊಳೆಯವಂತೆ ಮಾಡುತ್ತದೆ. ಗುಲಾಬಿ ದಳಗಳನ್ನು ಚೆನ್ನಾಗಿ ಅರೆದು ತುಟಿಗಳಿಗೆ ಲೇಪಿಸಿದರೆ ತುಟಿಗಳು ಪಿಂಕ್ ಆಗಿ ಉಳಿಯುತ್ತದೆ. ನಿಂಬೆಹಣ್ಣಿನ ರಸದಿಂದ ತುಟಿಗಳನ್ನು ಮಸಾಜ್ ಮಾಡುತ್ತಿದ್ದರೆ, ತುಟಿಗಳು ಕಪ್ಪಾಗುವುದನ್ನು ತಡೆಯಬಹುದು.

ನೈಸರ್ಗಿಕವಾಗಿ ಪಿಂಕ್ ಆಗಿರುವ ತುಟಿಯನ್ನು ಪಡೆಯಲು ರಾತ್ರಿ ಮಲಗುವ ಮುನ್ನ ಬೀಟ್‌ರೂಟ್‌ನ್ನು ಲೇಪಿಸಿ ಮಲಗಿ. ರೋಸ್ ವಾಟರ್ ಹಾಗೂ ಸಕ್ಕರೆ ಸೇರಿಸಿ ತುಟಿಗೆ ಪ್ರತಿದಿನವೂ ಮಸಾಜ್ ಮಾಡಿ. ಇದು ನಿಮ್ಮ ತುಟಿಯನ್ನು ಗುಲಾಬಿ ದಳದಷ್ಟೇ ಮೃದು, ನಯ ಹಾಗೂ ಹೊಳೆಯುವಂತೆ ಮಾಡುತ್ತದೆ.

Facebook Comments