ಪತಿ ಕೊಂದಿದ್ದ ಪತ್ನಿ-ಪ್ರಿಯಕರನ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

arrestಮೈಸೂರು,ಜ.20- ಪತಿಯನ್ನು ಕೊಲೆ ಮಾಡಿದ್ದ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ತೀ.ನರಸೀಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೊಳ್ಳೆಗಾಲ ತಾಲ್ಲೂಕಿನ ಹಾಳನಹಳ್ಳಿ ಗ್ರಾಮದ ನಿವಾಸಿಗಳಾದ ಲಿಂಗರಾಜು ಮತ್ತು ಕವಿತಾ ಬಂಧಿತ ಆರೋಪಿಗಳು. ಕಳೆದ ಜ.5ರಂದು ತೀ.ನರಸೀಪುರ ಪಟ್ಟಣದ ಆಲಗೂಡು ಬಳಿ ಇರುವ ಸುಜ್ಯಾಲೂರು ಎಡದಂಡೆ ನಾಲೆಯ ಏರಿ ಮೇಲೆ ಬಸವರಾಜು ಎಂಬುವರ ಮೃತದೇಹ ಪತ್ತೆಯಾಗಿತ್ತು.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದ ತೀ.ನರಸೀಪುರ ಠಾಣೆ ಪೊಲೀಸರು ಈ ಸಂಬಂಧ ಬಸವರಾಜು ಪತ್ನಿ ಕವಿತಾ ಹಾಗೂ ಪ್ರಿಯಕರನನ್ನು ವಿಚಾರಣೆಗೊಳಪಡಿಸಿದರು. ಇಬ್ಬರು ಅಕ್ರಮ ಸಂಬಂಧ ಹೊಂದಿದ್ದು, ಇದಕ್ಕೆ ಅಡ್ಡಿಯಾಗಿದ್ದ ಪತಿ ಬಸವರಾಜು ಅವರನ್ನು ಕೊಲೆ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಬಂಧಿತರಿಂದ ಬೈಕ್ ಮತ್ತು ಮೊಬೈಲ್‍ನ್ನು ವಶಪಡಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ವೃತ್ತ ನಿರೀಕ್ಷಕ ಎಂ.ಆರ್.ಲವ ಅವರ ನೇತೃತ್ವದಲ್ಲಿ ಸಬ್‍ಇನ್‍ಸ್ಪೆಕ್ಟರ್ ಅಜೀರ್ ಉದೀನ್, ಸಿಬ್ಬಂದಿಗಳಾದ ಮಂಚಿಗಯ್ಯ, ಹುಚ್ಚೇಗೌಡ, ಪ್ರಭಾಕರ್, ಮಂಜುನಾಥ್, ಸುನಿತಾ, ಸೋಮಶೇಖರ್ ಕಾರ್ಯಚರಣೆಯಲ್ಲಿದ್ದರು.

Facebook Comments