ಭಾರತ ಪೌರತ್ವ ತೊರೆದ ವಂಚಕ ಜೋಕ್ಸಿ

ಈ ಸುದ್ದಿಯನ್ನು ಶೇರ್ ಮಾಡಿ

PNB-Bank-Choksi

ನವದೆಹಲಿ,ಜ.21-ಬಹುಕೋಟಿ ವಂಚನೆ ಪ್ರಕರಣದ ಆರೋಪಿ ವಜ್ರದ ವ್ಯಾಪರಿ ಮೆಹುಲ್ ಚೋಕ್ಸಿ ತಮ್ಮ ಭಾರತದ ಪೌರತ್ವವನ್ನು ತೊರೆದಿದ್ದಾರೆ.
ಅಂಟಿಗ್ಯೂನ ಭಾರತದ ಹೈ ಕಮಿಷನರ್‍ಗೆ ಚೋಕ್ಸಿ ತಮ್ಮ ಪಾಸ್ ಪೋರ್ಟ್ ಹಾಗೂ 177 ಡಾಲರ್ ಮರಳಿಸಿದ್ದಾರೆ. ಮೆಹುಲ್ ಚೋಕ್ಸಿ ಅಂಟಿಗ್ಯೂ ಹಾಗೂ ಬಾರ್ಬುಡ ಪೌರತ್ವವನ್ನು 2018ರಲ್ಲಿ ಪಡೆದಿದ್ದಾರೆ.

ಈ ಹಿನ್ನೆಲೆಯಲ್ಲಿ ಭಾರತದ ಪೌರತ್ವವನ್ನು ತೊರೆಯುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 12 ಸಾವಿರ ಕೋಟಿ ರೂ. ವಂಚಿಸಿರುವ ಪ್ರಕರಣದ ಆರೋಪಿಯಾಗಿರುವ ಉದ್ಯಮಿ ನೀರವ್ ಮೋದಿಯ ಸಂಬಂಧಿಯಾಗಿರುವ ಮೆಹುಲ್ ಚೋಕ್ಸಿ ಈ ಪ್ರಕರಣದ ಆರೋಪಿ. ಈ ಹಗರಣದ ಎರಡು ಪ್ರಕರಣಗಳಲ್ಲಿ ಚೋಕ್ಸಿ ವಿರುದ್ಧ ಚಾರ್ಜ್‍ಶೀಟ್ ದಾಖಲಾಗಿದೆ.

Facebook Comments