ವಾಹನಗಳ ಗಾಜು ಒಡೆದು ದುಷ್ಕರ್ಮಿಗಳ ಅಟ್ಟಹಾಸ

ಈ ಸುದ್ದಿಯನ್ನು ಶೇರ್ ಮಾಡಿ

car-fire-a

ಬೆಂಗಳೂರು,ಜ.21- ನಗರದ ಎರಡು ಕಡೆ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದು, ಎರಡು ವಾಹನಗಳ ಗಾಜುಗಳನ್ನು ಜಖಂಗೊಳಿಸಿದ್ದಾರೆ.  ಮತ್ತೊಂದು ಪ್ರಕರಣದಲ್ಲಿ ಟ್ರ್ಯಾಕ್ಟರ್‍ಗೆ ಬೆಂಕಿ ಬಿದ್ದಿದ್ದು ಇದು ಆಕಸ್ಮಿಕವೋ ಅಥವಾ ದುಷ್ಕರ್ಮಿಗಳ ಕೃತ್ಯವೋ ಎಂಬುದು ತಿಳಿದುಬಂದಿಲ್ಲ. ಕೋಣನಕುಂಟೆ ವ್ಯಾಪ್ತಿಯ ಜೆಪಿನಗರದ 8ನೇ ಹಂತ ಪ್ಲಾಟಿನಂ ಲೈಫ್ ಸ್ಟೈಲ್ ಅಪಾರ್ಟ್‍ಮೆಂಟ್ ಬಳಿಯ ಡಬಲ್‍ರೋಡ್‍ನಲ್ಲಿ ಕಾರು ಮತ್ತು ಟೆಂಪೋಟ್ರಾವೆಲ್ ವಾಹನವನ್ನು ರಾತ್ರಿ ಪಾರ್ಕಿಂಗ್ ಮಾಡಲಾಗಿತ್ತು.

ತಡರಾತ್ರಿ ದುಷ್ಕರ್ಮಿಗಳು ಈ ಎರಡೂ ವಾಹನಗಳ ಗಾಜುಗಳನ್ನು ಧ್ವಂಸಗೊಳಿಸಿ ಅಟ್ಟಹಾಸ ಮೆರೆದಿದ್ದಾರೆ. ವರ್ತೂರು: ಮತ್ತೊಂದು ಪ್ರಕರಣದಲ್ಲಿ ಸಿದ್ದಾರಪುರದ 5ನೇ ಹಂತ, 2ನೇ ಮುಖ್ಯರಸ್ತೆಯ ಮನೆಯೊಂದರ ಮುಂದೆ ನಿಲ್ಲಿಸಿದ್ದ ಟ್ರ್ಯಾಕ್ಟರ್‍ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಭಾಗಶಃ ಹಾನಿಯಾಗಿದೆ.
ಬ್ಯಾಟರಿ ಕಿಡಿಯಿಂದ ಬೆಂಕಿ ಕಾಣಿಸಿಕೊಂಡಿದೆಯೇ ಅಥವಾ ದುಷ್ಕರ್ಮಿಗಳ ಕೃತ್ಯವೇ ಎಂಬ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೆÇಲೀಸರು ತನಿಖೆ ಕೈಗೊಂಡಿದ್ದಾರೆ.

Facebook Comments