ಸೇನಾ ಶಿಬಿರದ ಮೇಲೆ ಉಗ್ರರ ದಾಳಿ, 14 ಮಂದಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Kabulಕಾಬೂಲ್,ಜ.21(ಪಿಟಿಐ) -ಹಿಂಸಾಚಾರದಿಂದ ತತ್ತರಿಸುತ್ತಿರುವ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ ಮುಂದುವರೆದಿದೆ. ಪೂರ್ವ ಅಫ್ಘಾನಿಸ್ತಾನದ ಸೇನಾ ಶಿಬಿರ ಮತ್ತು ಪೊಲೀಸ್ ತರಬೇತಿ ಶಾಲೆ ಮೇಲೆ ದಾಳಿ ನಡೆಸಿದ ಉಗ್ರರು 14 ಯೋಧರನ್ನು ಹತ್ಯೆ ಮಾಡಿ 30ಕ್ಕೂ ಹೆಚ್ಚು ಪೊಲೀಸರನ್ನು ಗಾಯಗೊಳಿಸಿದ್ದಾರೆ.

ನಂತರ ನಡೆದ ಗುಂಡಿನ ಚಕಮಕಿ ವೇಳೆ ಇಬ್ಬರು ತಾಲಿಬಾನ್ ಉಗ್ರರು ಸಹ ಹತರಾಗಿದ್ದಾರೆ. ಕಾಬೂಲ್ ಸಮೀಪದ ಮೈದಾನ್ ವರ್ದಿಕ್‍ನಲ್ಲಿರುವ ಮಿಲಿಟರಿ ಬೇಸ್ ಮತ್ತು ಪೊಲೀಸ್ ಟ್ರೈನಿಂಗ್ ಸ್ಕೂಲ್ ಮೇಲೆ ತಾಲಿಬಾನ್ ಉಗ್ರರು ದಾಳಿ ನಡೆಸಿದರು.

ಸ್ಫೋಟಕಗಳನ್ನು ತುಂಬಿದ್ದ ಕಾರಿನ ಮೂಲಕ ಆತ್ಮಹತ್ಯಾ ದಾಳಿ ನಡೆಸಿದ ಬಂಡುಕೋರರು ಬಳಿಕ ಗುಂಡಿನ ಸುರಿಮಳೆಗೆರೆದರು.

ಈ ಅನಿರೀಕ್ಷಿತ ದಾಳಿಯಲ್ಲಿ 14 ಯೋಧರು ಮೃತಪಟ್ಟರು. ತೀವ್ರ ಗಾಯಗೊಂಡ 30ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗಳಿಗೆ ಸೇರಿಸಲಾಗಿದೆ.  ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕವಿದೆ ಎಂದು ಪೊಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ.

Facebook Comments