ಯಶಸ್ವಿಯಾಗಿ ದಕ್ಷಿಣ ಧೃವ ಯಾತ್ರೆ ಪೂರೈಸಿದ ಐಪಿಎಸ್ ಅಧಿಕಾರಿಣಿ

ಈ ಸುದ್ದಿಯನ್ನು ಶೇರ್ ಮಾಡಿ

Aparna-Kumarನವದೆಹಲಿ,ಜ.21- ಮಹಿಳಾ ಐಪಿಎಸ್ ಅಧಿಕಾರಿಯೊಬ್ಬರು ದಕ್ಷಿಣ ಧ್ರುವ ದಂಡಯಾತ್ರೆಯನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಇಂಡೋ-ಟಿಬೇಟಿಯನ್ ಬಾರ್ಡರ್ ಪೊಲೀಸ್(ಐವೈಬಿಪಿ)ಯ ಡಿಐಜಿಯಾಗಿರುವ ಐಪಿಎಸ್ ಅಧಿಕಾರಿ ಅಪರ್ಣಾ ಕುಮಾರ್ ದಕ್ಷಿಣ ಧ್ರುವದ ತುದಿಯನ್ನು ಯಶಶ್ವಿಯಾಗಿ ತಲುಪಿದ್ದಾರೆ.

2002ರ ಉತ್ತರಪ್ರದೇಶ ಕೆಡರ್ ಐಪಿಎಸ್ ಅಧಿಕಾರಿಯಾಗಿರುವ ಅಪರ್ಣಾ ಸದ್ಯ ಐವೈಬಿಪಿ ಡೆಹ್ರಾಡೂನ್‍ನ ಉತ್ತರ ಫ್ರಾಂಟಿಯರ್ ಹೆಡ್ ಕ್ವಾರ್ಟರ್‍ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ದಕ್ಷಿಣ ಧ್ರುವದ ತುದಿ ತಲುಪಲು ಅಪರ್ಣಾ ಬರೋಬ್ಬರಿ 111 ಕಿ.ಮೀ. ಹಿಮದಲ್ಲಿ ನಡೆದಿದ್ದಾರೆ. ಅಲ್ಲದೇ ಈ ವೇಳೆ ಅಪರ್ಣಾ ಬರೋಬ್ಬರಿ 35 ಕೆಜಿ ಭಾರದ ಸಾಮಾನು ಸರಂಜಮನ್ನು ಹೊತ್ತು ಸಾಗಿದ್ದಾರೆ.

ಅಪರ್ಣಾ ದಕ್ಷಿಣ ಧ್ರುವ ತಲುಪಿದ್ದು, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವು ಗಣ್ಯರು ಅಪರ್ಣಾ ಅವರಿಗೆ ಶುಭಾಶಯ ಕೋರಿದ್ದಾರೆ.

Facebook Comments