ಸಿದ್ದಗಂಗಾ ಶ್ರೀಗಳ ಸದ್ಯದ ಆರೋಗ್ಯ ಸ್ಥಿತಿ ಕುರಿತು ವೈದ್ಯರು ಹೇಳಿದ್ದೇನು..?

ಈ ಸುದ್ದಿಯನ್ನು ಶೇರ್ ಮಾಡಿ

Doctor-Siddagaga-Swamiji-c

ತುಮಕೂರು,ಜ.21- ಶ್ರೀ ಶಿವಕುಮಾರ ಸ್ವಾಮೀಜಿಯವರ ಸ್ಥಿತಿ ಚಿಂತಾಜನಕವಾಗಿದ್ದರೂ, ಎಲ್ಲ ರೀತಿಯಲ್ಲೂ ಅವರ ಆರೋಗ್ಯ ಸುಧಾರಣೆಗಾಗಿ ಚಿಕಿತ್ಸೆ ನೀಡುತ್ತಿದ್ದೇವೆ. ಭಕ್ತರು ಆತಂಕಗೊಂಡು ಮಠಕ್ಕೆ ಭೇಟಿ ನೀಡಿ ಗೊಂದಲ ಸೃಷ್ಟಿಸುವುದು ಬೇಡ ಎಂದು ಶ್ರೀಗಳ ಆಪ್ತ ವೈದ್ಯ ಡಾ. ಪರಮೇಶ್ ತಿಳಿಸಿದ್ದಾರೆ.

11 ಗಂಟೆಗೆ ಶ್ರೀಗಳ ಆರೋಗ್ಯದ ಕುರಿತು ಮಾಧ್ಯಮದವರೊಂದಿಗೆ ಮಾಹಿತಿ ನೀಡಿದ ಅವರು, ಮುಂಜಾನೆ ಶ್ರೀಗಳ ಬಿಪಿ ಹಾಗೂ ಉಸಿರಾಟದಲ್ಲಿ ಸ್ವಲ್ಪ ಏರುಪೇರಾಗಿತ್ತು. ಆದರೆ ಈಗ ಅವರ ಪರಿಸ್ಥಿತಿ ಸುಧಾರಿಸಿದೆ. ಅವರಿಗೆ ಎಲ್ಲ ರೀತಿಯ ತುರ್ತು ಚಿಕಿತ್ಸೆಗಳನ್ನು ನೀಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಶ್ರೀಗಳು ಈಗ ಸ್ವಲ್ಪ ಚೇತರಿಸಿಕೊಂಡಿದ್ದಾರೆ. ಬೆಂಗಳೂರಿನ ಕೆಲವು ನುರಿತ ವೈದ್ಯರ ತಂಡ ಇಲ್ಲಿಗೆ ಬರುತ್ತಿದೆ. ನಮ್ಮ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಎಲ್ಲ ಭಕ್ತ ವೃಂದದವರು ಕೈ ಮುಗಿದು ಮನವಿ ಮಾಡುತ್ತೇನೆ ಇಲ್ಲಿಗೆ ಬಂದು ಮಠದ ಕಾರ್ಯಗಳಿಗೆ ಅಡಚಣೆ ಉಂಟು ಮಾಡಬಾರದು.

ಏನೇ ಇದ್ದರೂ ಮಾಹಿತಿಯನ್ನು ನೀಡುತ್ತೇವೆ. ಬಾವೋದ್ವೇಗಕ್ಕೆ ಒಳಗಾಗಬೇಡಿ ಎಂದು ಭಕ್ತ ವೃಂದಕ್ಕೆ ವೈದ್ಯ ಪರಮೇಶ್ ಮನವಿ ಮಾಡಿದ್ದಾರೆ.  ಇನ್ನು ಶ್ರೀಗಳ ಆರೋಗ್ಯದ ಬಗ್ಗೆ ಯಾರು ಕೂಡ ಸುಳ್ಳು ಸುದ್ದಿ ಹರಡಬೇಡಿ, ಶ್ರೀ ಮಠದಿಂದ ಬಂದ ಅಧಿಕೃತ ಆದೇಶ ಮಾತ್ರ ಶ್ರೀಗಳ ಆರೋಗ್ಯದ ಮಾಹಿತಿಯಾಗಿರುತ್ತದೆ ಹೊರತು ಬೇರೆ ಮೂಲಗಳಿಂದ ಬಂದ ಮಾತುಗಳು ಶ್ರೀಗಳ ಆರೋಗ್ಯದ ಬಗೆಗಿನ ಮಾಹಿತಿಯಾಗಿರುವುದಿಲ್ಲ, ಅಂತಿಮವಾಗಿ ಶ್ರೀ ಮಠ ನೀಡುವ ಮಾಹಿತಿ ಅಂತಿಮವಾಗಿರುತ್ತದೆ ಅಂತ ಹೇಳಿದರು.

Facebook Comments

Sri Raghav

Admin