ಪೌಶ್ ಪೂರ್ಣಿಮಾ ಹಿನ್ನೆಲೆಯಲ್ಲಿ ಕುಂಭಮೇಳದಲ್ಲಿ ಲಕ್ಷಾಂತರ ಭಕ್ತರಿಂದ ಪುಣ್ಯಸ್ನಾನ

ಈ ಸುದ್ದಿಯನ್ನು ಶೇರ್ ಮಾಡಿ

Paush-Purnimaಅಲಹಾಬಾದ್, ಜ.21-ಇಂದು ಪೌಶ್ ಪೂರ್ಣಿಮಾ. ಈ ಹುಣ್ಣಿಮೆಯನ್ನು ಉತ್ತರ ಭಾರತದಲ್ಲಿ ಕಲ್ಪವಸ್ ಆರಂಭದ ದಿನವನ್ನಾಗಿ ಆಚರಿಸಲಾಗುತ್ತದೆ. ಉತ್ತರ ಪ್ರದೇಶದ ಅಲಹಾಬಾದ್‍ನ ಪ್ರಯಾಗ್‍ರಾಜ್‍ನಲ್ಲಿ ನಡೆಯುತ್ತಿರುವ ವಿಶ್ವದ ಅತ್ಯಂತ ಬೃಹತ್ ಧಾರ್ಮಿಕ ಸಮಾವೇಶ ಕುಂಭಮೇಳದಲ್ಲಿ ಈ ದಿನದ ಪ್ರಯುಕ್ತ ನಡೆದ ಲಕ್ಷಾಂತರ ಭಕ್ತರು, ಸಾಧು, ಭೈೈರಾಗಿಗಳು ಎರಡನೇ ಪವಿತ್ರ ಪುಣ್ಯಸ್ನಾನ ಮಾಡಿದರು.

ಅಲಹಾಬಾದ್‍ನ ಗಂಗಾ, ಜಮುನಾ ಮತ್ತು ಸರಸ್ವತಿ ನದಿಗಳ ತ್ರಿವೇಣಿ ಸಂಗಮದಲ್ಲಿ ಇಂದು ನಸುಕಿನಿಂದಲೇ ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ತಂಡೋಪತಂಡವಾಗಿ ತೆರಳಿ ಪುಣ್ಯ ಸ್ನಾನ ಮಾಡಿ ವಿಶೇಷ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಂಡರು.

ಸಂಗಮ್ ಘಾಟ್ ಇಂದು ಭಕ್ತಸಾಗರದಿಂದ ತುಂಬಿ ತುಳುಕುತಿತ್ತು. ಭಗವನ್ನಾಮಸ್ಮರಣೆ ಮತ್ತು ಮಂತ್ರ ಘೋಷಗಳು ಮುಗಿಲು ಮುಟ್ಟಿದ್ದವು.
ಪೌಶ್ ಪೂರ್ಣಿಮಾ ಪ್ರಯುಕ್ತ ವ್ಯಾಪಕ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

Facebook Comments