ಕೊನೆಗೂ ಬಯಲಾಯ್ತು ರೆಸಾರ್ಟ್ ಫೈಟ್ ಸೀಕ್ರೆಟ್ , ಶಾಸಕ ಗಣೇಶ್ ವಿರುದ್ಧ ಎಫ್ಐಆರ್

ಈ ಸುದ್ದಿಯನ್ನು ಶೇರ್ ಮಾಡಿ

Anand-Singh-And-Ganesh-Reso

ಬೆಂಗಳೂರು. ಜ. 21 : ಆನಂದ್ ಸಿಂಗ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಂಪ್ಲಿ ಶಾಸಕ ಗಣೇಶ್ ವಿರುದ್ದ ಬಿಡದಿ ಪೋಲಿಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

ಈಗಲ್ ಟನ್ ರೆಸಾರ್ಟ್‌ನಲ್ಲಿ ಮೊನ್ನೆ ರಾತ್ರಿ ನಡೆದ ಮಾರಾಮಾರಿಯಲ್ಲಿ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಅವರಿಂದ ಹೊಡೆತ ತಿಂದು ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾಸಕ ಆನಂದ್ ಸಿಂಗ್ ಅವರು ಬಿಡದಿ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

ಈಗಾಗಲೇ ಆನಂದ್ ಸಿಂಗ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗಣೇಶ್ ವಿರುದ್ದ ಐಪಿಸಿ ಸೆಕ್ಷನ್ 323.324,504, 506 ರ ಅಡಿಯಲ್ಲಿ ಕೇಸ್ ದಾಖಲಾಗಿದೆ. ಈ ಹಿನ್ನೆಲೆ ಕಂಪ್ಲಿ ಶಾಸಕ ಗಣೇಶ್ ಗೆ ಬಂಧನದ ಭೀತಿ ಎದುರಾಗಿದ್ದು ಯಾವುದೇ ಕ್ಷಣದಲ್ಲಿ ಶಾಸಕ ಗಣೇಶ್ ಬಂಧನ ಸಾಧ್ಯತೆ ಎಂದು ಹೇಳಲಾಗುತ್ತಿದೆ.

ಗಣೇಶ್ ಆನಂದ್ ಸಿಂಗ್ ಗೆ ದೊಣ್ಣೆ ಹಾಗೂ ಪಾಟ್ ನಿಂದ ಹೊಡೆದಿದ್ದರು. ಅಲ್ಲದೇ ಹೊಟ್ಟೆ, ಕಣ್ಣಿಗೆ ಗಂಭೀರವಾಗಿ ಹಲ್ಲೆ ನಡೆಸಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಈ ಹಿನ್ನೆಲೆ ಕಂಪ್ಲಿ ಶಾಸಕ ಗಣೇಶ್ ಗೆ ಬಂಧನದ ಭೀತಿ ಎದುರಾಗಿದ್ದು, ಯಾವುದೇ ಕ್ಷಣದಲ್ಲಿ ಶಾಸಕ ಗಣೇಶ್ ಬಂಧನ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಪಕ್ಷದ ಸೂಚನೆಯಂತೆ ಈಗಲ್‌ಟನ್ ರೆಸಾರ್ಟ್‌ನಲ್ಲಿ ಇದ್ದ ನಾನು ಶನಿವಾರ ರಾತ್ರಿ ಊಟ ಮುಗಿಸಿ ಸಚಿವ ತುಕಾರಾಂ, ಶಾಸಕ ರಘುಮೂರ್ತಿ, ತನ್ವೀರ್ ಸೇಠ್ ಅವರುಗಳ ಜೊತೆ ನನ್ನ ರೂಮ್‌ (ನಂ 207) ಕಡೆ ಹೋಗುತ್ತಿದ್ದೆ. ಆಗ ಬಹು ಕೆಟ್ಟ ಭಾಷೆಯಲ್ಲಿ ನನ್ನ ಕೂಗಿ ಕರೆದು ನಿಲ್ಲುವಂತೆ ಕಂಪ್ಲಿ ಶಾಸಕ ಗಣೇಶ್ ಕೂಗಾಡಿದರು ಎಂದು ಆನಂದ್ ಸಿಂಗ್ ಹೇಳಿಕೆ ನೀಡಿದ್ದಾರೆ.

‘ಏನೋ, ನನ್ನ ವಿರುದ್ಧ ನೀನು ಪಕ್ಷದ ಮುಖಂಡರನ್ನು ಎತ್ತಿ ಕಟ್ಟುತ್ತೀಯಾ?’ ಎಂದು ಹೇಳಿ ನನ್ನ ಮೇಳೆ ಧಿಡೀರ್ ದಾಳಿ ನಡೆಸಿದ ಶಾಸಕ ಗಣೇಶ್, ನನ್ನ ಮುಖಕ್ಕೆ ಗುದ್ದಿ, ಗೋಡೆಗೆ ತಲೆಯನ್ನು ಗುದ್ದಿಸಿದರು. ‘ಎಲ್ಲಿ ನನ್ನ ಬಂದೂಕು, ಇವನನ್ನು ಇಲ್ಲಿಯೇ ಮುಗಿಸುತ್ತೇನೆ, ಇವನು ನನ್ನ ರಾಜಕೀಯ ಮುಗಿಸುವ ಯತ್ನ ಮಾಡುತ್ತಿದ್ದಾನೆ, ನಾನು ಇವನನ್ನು ಮುಗಿಸುತ್ತೇನೆ’ ಎಂದು ಕೂಗಾಡಿದರು ಎಂದು ಆನಂದ್ ಸಿಂಗ್ ಹೇಳಿಕೆ ದಾಖಲಿಸಿದ್ದಾರೆ.

ಜನವರಿ 19ರ ಶನಿವಾರ ರಾತ್ರಿ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಮತ್ತು ಆನಂದ್ ಸಿಂಗ್ ನಡುವೆ ಈಗಲ್ಟನ್ ರೆಸಾರ್ಟ್‌ನಲ್ಲಿ ಹೊಡೆದಾಟ ನಡೆದಿತ್ತು. ಜನವರಿ 20ರ ಭಾನುವಾರ ಬೆಳಗ್ಗೆ ಆನಂದ್ ಸಿಂಗ್ ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

Facebook Comments

Sri Raghav

Admin