ಶಿವಕುಮಾರ ಶ್ರೀಗಳ ಬದುಕೇ ಒಂದು ದಾರಿದೀಪ

ಈ ಸುದ್ದಿಯನ್ನು ಶೇರ್ ಮಾಡಿ

Siddagaga-Swamij---01

ಶ್ರೀಗಳು ಯಾವತ್ತೂ ಕಣ್ಣಮುಂದೆ ಕಂಡದ್ದನ್ನ ಹಠಾತ್ತನೆ ನಂಬಿದವರಲ್ಲ.. ಕೇಳಿಸಿಕೊಂಡೂ ನಂಬಿದವರಲ್ಲ ಸತ್ಯಕ್ಕೆ ಅದರದ್ದೇ ಆದ ಶಕ್ತಿ ಇರುತ್ತೆ, ರೂಪ ಇರುತ್ತೆ, ಮಹತ್ವ ಇರುತ್ತೆ.  ಅದು ಯಾರದ್ದೋ ಬಲವಂತಕ್ಕೆ ನಂಬುವಂಥಾದ್ದು ಅಲ್ಲ ಒಬ್ಬ ವ್ಯಕ್ತಿಗೆ ಹೃದಯಾಂತರಾಳದಿಂದ ಬಂದ ವಿಚಾರಗಳು ಮಾತ್ರ ಸತ್ಯ ಎಂದು ನಂಬಿದವರು..

ತುಮಕೂರು ಸಿದ್ದಗಂಗಾ ಮಠದ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರು ಜಾತಿಯ ಚೌಕಟ್ಟನ್ನು ಮೀರಿ ಬದುಕು ನಡೆಸಿದ ಶ್ರೀಗಳ ಬದುಕೇ ದಾರಿದೀಪವಾಗಿತ್ತು. ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ ಶ್ರೀಗಳು ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಶಾಲಾ, ಕಾಲೇಜುಗಳನ್ನು ತೆರೆದರು. ನಾಗರಿಕ ಸವಲತ್ತುಗಳಿಲ್ಲದ ಹಳ್ಳಿಗಳಲ್ಲಿ ಶಾಲೆಗಳನ್ನು ಆರಂಭಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿದ್ದಾರೆ.

ಒಬ್ಬ ವ್ಯಕ್ತಿ ಶಿಕ್ಷಣ ಪಡೆದರೆ ಅದರಿಂದ ಉದ್ಯೋಗ, ಆರ್ಥಿಕ ಭದ್ರತೆ, ಸಾಮಾಜಿಕ ಜೀವನ ಸಿಗುತ್ತದೆ. ನಿಜವಾದ ವಿದ್ಯಾವಂತ ಯಾವಾಗಲೂ ನಿರುದ್ಯೋಗಿ ಆಗಿರಲಿಕ್ಕೆ ಸಾಧ್ಯವಿಲ್ಲ. ಅಂಥ ನಿಜವಾದ ವಿದ್ಯಾವಂತರನ್ನಾಗಿ ಮಾಡುವ ಕೆಲಸವನ್ನು ಶ್ರೀಗಳು ಮಾಡುತ್ತಿದ್ದಾರೆ..

ಇಂದಿನ ದಿನಗಳಲ್ಲಿ ಮಠಗಳು, ಸ್ವಾಮಿಗಳು ಎಂದರೆ ಜನರಲ್ಲಿ ಅಸಹ್ಯ ಭಾವನೆ ಮೂಡುತ್ತದೆ. ಖಾವಿ ಧರಿಸಿದ ಸ್ವಾಮಿಗಳು ಭೋಗದ ಜೀವನ ನಡೆಸುತ್ತಾರೆ. ಆದರೆ, ಶಿವಕುಮಾರ ಸ್ವಾಮೀಜಿಯವರು ಖಾವಿ ತ್ಯಾಗದ ಸಂಕೇತ ಎಂದು ತಿಳಿದು ಕ್ರಾಂತಿಕಾರಕ ವ್ಯಕ್ತಿತ್ವ ಮೈಗೂಡಿಸಿಕೊಂಡು ಎಲ್ಲವನ್ನೂ ತ್ಯಜಿಸಿ ಸರಳ ಜೀವನ ನಡೆಸಿದವರು..

ಶ್ರೀಗಳವರು ವೈಜ್ನಾನಿಕ ಸತ್ಯಕ್ಕೂ, ಸಂಪ್ರದಾಯಗಳಲ್ಲಿರುವ ನಿಗೂಢ ಸತ್ಯಕ್ಕೂ ಸೇತುಪ್ರಾಯರು. ಇವರು ಹಳೆಯದು ಸುಳ್ಳೆಂದು, ಹೊಸದೆಲ್ಲ ಸತ್ಯವೆಂದು ಒಪ್ಪಿ ಹಳೆಯದನ್ನು ತಳ್ಳಿಹಾಕುವುದಿಲ್ಲ. ಅಂತಃಕರಣ ಶುದ್ಧಿಯಿಂದ ಮಾಡುವ ಅನೇಕ ಕ್ರಿಯೆಗಳು ಫಲಪ್ರದವಾಗುತ್ತವೆ ಎಂಬ ವಿಚಾರದಲ್ಲಿ ನಂಬಿಕೆಯುಳ್ಳವರು. ಶುದ್ಧಾಂತಃಕರಣದಿಂದ ಮಾಡುವ ಅನೇಕ ಕ್ರಿಯೆಗಳು ಶಿವನನ್ನು ಮುಟ್ಟುತ್ತವೆ. ಆಗ ಶಿವನು ಅನುಗ್ರಹಿಸುತ್ತಾನೆ ಎಂದೇ ಅವರ ನಂಬಿಕೆ. ಪ್ರತ್ಯಕ್ಷವೇ ಪ್ರಮಾಣವೆಂದು ಅವರು ನಂಬುವುದಿಲ್ಲ.

ಕಣ್ಣಿಗೆ ಕಾಣದಿರುವುದು ವಿಶ್ವದಲ್ಲಿ ಬಹಳ ಇದೆ. ಅದು ಅನುಭವಕ್ಕೆ, ಹೃದಯಕ್ಕೆ ಗೋಚರಿಸುತ್ತದೆ. ಯಂತ್ರಧಾರಣೆಯ ವಿಚಾರದಲ್ಲಿ ವೈಜ್ಞಾನಿಕತೆಗಿಂತ ವೈಚಾರಿಕ ಚಿಂತನೆಗೆ ಪ್ರಾಮುಖ್ಯತೆ, ಅದರಲ್ಲಿ ಶ್ರೀಗಳವರಿಗೂ ನಂಬಿಕೆ, ಜನಕ್ಕೂ ತೃಪ್ತಿ ಇದೆ.

 

Facebook Comments

Sri Raghav

Admin