ಸಿದ್ದಗಂಗಾ ಮಠದಲ್ಲಿ ಆರದ ದಾಸೋಹದ ಒಲೆ

ಈ ಸುದ್ದಿಯನ್ನು ಶೇರ್ ಮಾಡಿ

Siddagaga-m

ಆಮೇಲೆ ನಡೆದದೆಲ್ಲವೂ ಪವಾಡ ಶ್ರೀ ಮಠದಲ್ಲಿ ನಿತ್ಯ ಸಾವಿರಾರು ಟನ್ ದವಸ ಧಾನ್ಯ ಹರಿದು ಬರುತ್ತಿದೆ. ಎಷ್ಟು ಬರುತ್ತಿದೆ, ಎಷ್ಟು ಖರ್ಚಾಗಿದೆ ಎಂಬ ಲೆಕ್ಕ ಇಟ್ಟವರಿಲ್ಲ. ದಿನಕ್ಕೆ ವಿದ್ಯಾರ್ಥಿಗಳು ಸೇರಿದಂತೆ ಲಕ್ಷಾಂತರ ಜನರು ಊಟ ಸೇವಿಸುತ್ತಾರೆ.

ಒಂದು ದಿನಕ್ಕೆ ಬೇಕಾಗುವ ಅಂದಾಜು ಲೆಕ್ಕ:  ಅಕ್ಕಿ 3500 ಕೆಜಿ, ರಾಗಿ ಹಿಟ್ಟು 1500 ಕೆಜಿ, ರವೆ ಉಪ್ಪಿಟ್ಟು 500 ಕೆಜಿ, ಈರುಳ್ಳಿ 300 ಕೆಜಿ, ಖಾರಪುಡಿ ಸಾಂಬಾರ್ ಪುಡಿ 100 ಕೆ ಜಿ, ಕಡಲೆ ಕಾಯಿ ಎಣ್ಣೆ 150 ಲೀಟರ್, ತರಕಾರಿ 400 ಕೆಜಿ ಬೇಕಾಗುತ್ತದೆ. ಇದರ ಜೊತೆ ಇನ್ನು ಕೆಲ ದಿನಸಿ ಸಾಮಾನುಗಳು ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳಲಾಗುತ್ತದೆ.

ಶಿಷ್ಯ ವೃಂದದೊಂದಿಗೆ ಶ್ರೀಗಳು ಇಷ್ಟ ಲಿಂಗವಿಡಿದು ದೀಪದ ಬೆಳಕಿನಲ್ಲಿ ಶಿವಪೂಜೆ ನೆರವೇರಿಸುತ್ತಿದ್ದರು. ನಂತರ ನೈವೇದ್ಯ ಮಾಡಿ, ಧ್ಯಾನ ಮಾಡಿ, ಬೇವಿನ ಕಷಾಯ ಸೇವನೆ ಮಾಡುತ್ತಿದ್ದರು. ನಂತರ ಮಠದಲ್ಲೆ ವಿಶೇಷ ಕೊಠಡಿಯಲ್ಲಿ ತಯಾರಿಸಿದ ಇಡ್ಲಿ, ಬೇಳೆ ತೊವ್ವೆ ಸೇವಿಸುತ್ತಿದ್ದರು. ಶ್ರೀಗಳ ಜಪ ತಪ ಮಿತ ಆಹಾರ ಯೋಗ ಧ್ಯಾನಗಳ ಫಲವೇ ಅವರ 111 ವರ್ಷದ ಆರೋಗ್ಯದ ರಹಸ್ಯವಾಗಿತ್ತು.

ಶ್ರೀಗಳು ಸ್ವತಃ ತಾವೇ ಯಂತ್ರಗಳನ್ನ ಬರೆದು ಬಂದ ಭಕ್ತಾದಿಗಳಿಗೆ ಧರಿಸುತ್ತಿದ್ದರು. ಸಿದ್ದಗಂಗಾ ಶ್ರೀಗಳು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದ್ದರು. ದಶಕಗಳ ಕಾಲ ಬೆಳಗಿನ ಸಮಯದಲ್ಲಿ ತಾವೇ ಶಿಕ್ಷಕರಾಗಿ ಮಕ್ಕಳಿಗೆ ಸಂಸ್ಕøತ, ಇಂಗ್ಲೀಷ್ ಪಾಠಗಳನ್ನ ಮಾಡುತ್ತಿದ್ದರು.

ಮಠದಲ್ಲಿ ಓದಿದ ವಿದ್ಯಾರ್ಥಿಗಳಲ್ಲಿ ಕವಿ ಜಿ.ಎಸ್.ಶಿವರುದ್ರಪ್ಪನವರೂ ಕೂಡ ಒಬ್ಬರು. ಇದೇ ರೀತಿ ಅದೆಷ್ಟೋ ಜನ ವಿದ್ಯಾರ್ಥಿಗಳು ಉನ್ನತ ಸ್ಥಾನಮಾನಗಳನ್ನು ಪಡೆದಿದ್ದಾರೆ. ಕೆಲವರು ವಿದೇಶಗಳಿಗೆ ಹೋಗಿ ಶಿಕ್ಷಣ ನೌಕರಿ ಮಾಡುತ್ತಿದ್ದಾರೆ. ಅವರೆಲ್ಲರೂ ಸೇರಿ ಹಳೆ ವಿದ್ಯಾರ್ಥಿಗಳ ಸಂಘವನ್ನೇ ಮಠದಲ್ಲಿ ಸ್ಥಾಪನೆ ಮಾಡಿದ್ದಾರೆ. ಪ್ರತಿ ವರ್ಷ ತಮ್ಮ ನೆಚ್ಚಿನ ಶ್ರೀಗಳಿಗೆ ಗುರುವಂದನೆ ಸಲ್ಲಿಸುತ್ತಾರೆ.

Facebook Comments