ಸಿದ್ದಗಂಗಾ ಶ್ರೀಗಳ ಭಕ್ತರಿಗೆ ಕೃತಜ್ಞತೆ ಸಲ್ಲಿಸಿದ ಸಿಎಂ ಕುಮಾರಸ್ವಾಮಿ

ಈ ಸುದ್ದಿಯನ್ನು ಶೇರ್ ಮಾಡಿ

Kumarasamy--1

ಬೆಂಗಳೂರು, ಜ. 22- ಸಿದ್ದಗಂಗಾ ಮಠದಲ್ಲಿ ಇಂದು ಶ್ರೀ ಶ್ರೀ ಶ್ರೀ ಡಾ. ಶಿವಕುಮಾರ ಸ್ವಾಮೀಜಿಯವರ ಅಂತಿಮ ಕ್ರಿಯಾ ವಿಧಿಗಳು ಶ್ರದ್ಧಾಪೂರ್ವಕವಾಗಿ, ಶಾಂತಿಯುತವಾಗಿ ನೆರವೇರಿತು.

ಲಕ್ಷಾಂತರ ಭಕ್ತರು ಶಾಂತಿಯುತವಾಗಿ ಸರತಿಯಲ್ಲಿ ಕಾದು, ಈ ತ್ರಿವಿಧ ದಾಸೋಹಿಗೆ ಅಂತಿಮ ನಮನಗಳನ್ನು ಅರ್ಪಿಸಿದರು. ಇದಕ್ಕಾಗಿ ಇದಕ್ಕಾಗಿ ಸಹಕರಿಸಿದ ಎಲ್ಲರಿಗೂ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

ಜನಸಾಗರವೇ ಹರಿದು ಬಂದರೂ ಎಲ್ಲ ವಿಧಿವಿಧಾನಗಳು ಅಚ್ಚುಕಟ್ಟಾಗಿ ನೆರವೇರಿದವು. ಈ ಸಂದರ್ಭದಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿ ಸಿದ್ಧತೆ ನಡೆಸಲು ಶ್ರಮಿಸಿದ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ, ಗೃಹ ಸಚಿವ ಎಂ.ಬಿ. ಪಾಟೀಲ, ಸಚಿವ ಸಂಪುಟದ ಸಹೋದ್ಯೋಗಿಗಳು, ತುಮಕೂರು ಜಿಲ್ಲಾಡಳಿತ, ಸೂಕ್ತ ಭದ್ರತಾ ವ್ಯವಸ್ಥೆ ಒದಗಿಸಿ, ಹಗಲು ರಾತ್ರಿ ಕರ್ತವ್ಯ ನಿರ್ವಹಿಸಿದ ಪೊಲೀಸ್ ಇಲಾಖೆಯ ಅಧಿಕಾರಿ, ಸಿಬ್ಬಂದಿ, ಮಠದ ಭಕ್ತರು, ಅಭಿಮಾನಿಗಳು, ಸಿಬ್ಬಂದಿ, ವಿದ್ಯಾರ್ಥಿಗಳು ಎಲ್ಲರಿಗೂ ಮುಖ್ಯಮಂತ್ರಿಗಳು ಧನ್ಯವಾದ ಅರ್ಪಿಸಿದರು.

#’ಶತಾಯುಷಿ ಯುಗಾಂತ್ಯ :  ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳ ಲಿಂಗ ಶರೀರದ ಕ್ರಿಯಾ ಸಮಾಧಿ ವಿಧಿ ವಿಧಾನ ಶಾಸ್ತ್ರೋಸ್ತ್ರವಾಗಿ ನೆರವೇರಿತು. ಸಿದ್ದಗಂಗಾ ಶ್ರೀಗಳ ದೇಹದ ಶುದ್ದೀಕರಣ ಪ್ರಕ್ರಿಯೆಗಳನ್ನು ನಡೆಸಿದ ನಂತರ ಲಿಂಗ ಶರೀರಕ್ಕೆ ಹೊಸ ಕಾಷಾಯ ವಸ್ತ್ರಗಳನ್ನು ತೊಡಿಸಿದ ನಂತರ ಲಿಂಗ ಶರೀರವನ್ನು ಸಮಾಧಿಯ ಗೂಡಿನಲ್ಲಿರಿಸಲಾಗಿದೆ.

ಬಳಿಕ ಲಿಂಗ ಶರೀರದ ಸುತ್ತಾ ವಿಭೂತಿ ಜೋಡಣೆ ಮಾಡಲಾಗಿದೆ. ನಂತರ ಲಿಂಗ ಶರೀರಕ್ಕೆ ಬಿಲ್ವ ಪತ್ರೆ ಸಮರ್ಪಣೆ ಮಾಡಲಾಯಿತು. ನಡೆದಾಡುವ ದೇವರು’ ಸಿದ್ದಗಂಗಾ ಶ್ರೀಗಳ ಪಾರ್ಥಿವ ಶರೀರದ ಕ್ರಿಯಾ ಸಮಾಧಿ ಪ್ರಕ್ರಿಯೆಯಲ್ಲಿ ವಿವಿಧ ಸ್ವಾಮೀಜಿಗಳು ಭಾಗಿಯಾಗಿದ್ದಾರೆ.

Facebook Comments

Sri Raghav

Admin