89 ವರ್ಷಗಳ ಸಾರ್ಥಕ ಕಾಯಕ ಪೂರೈಸಿ ಹೊರಟ ಕಾಯಕಯೋಗಿ

ಈ ಸುದ್ದಿಯನ್ನು ಶೇರ್ ಮಾಡಿ

Swamiji--01

ಶ್ರೀಗಳ ಸೇವೆಯನ್ನು ಪರಿಗಣಿಸಿ ಕರ್ನಾಟಕ ವಿಶ್ವವಿದ್ಯಾನಿಲಯ 1965 ರಲ್ಲಿ ಬೆಂಗಳೂರು ವಿವಿ 2013ರಲ್ಲಿ ಗೌರವ ಡಿ ಲಿಟ್ ಪದವಿ ನೀಡಿ ಗೌರವಿಸಿದೆ. ಕರ್ನಾಟಕ ಸರ್ಕಾರ ರಾಜ್ಯದ ಅತ್ಯುನ್ನತ ಪ್ರಶಸ್ತಿ ಕರ್ನಾಟಕ ರತ್ನ ನೀಡಿದ್ದು, ಏಪ್ರಿಲ 01, 2010ರಂದು 2007ರ ಬಸವ ಪುರಸ್ಕಾರ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

13-05-2015 ರಲ್ಲಿ ಭಾರತ ಸರ್ಕಾರ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿತು. 2017 ನೇ ಸಾಲಿನ ಶ್ರೀ ಭಗವಾನ್ ಮಹಾವೀರ್ ಪ್ರಶಸ್ತಿ ಸೇರಿದಂತೆ ಇನ್ನೂ ಹತ್ತು ಹಲವು ಪ್ರಶಸ್ತಿಗಳಿಗೆ ನೀಡಿ ತಮ್ಮ ಮೌಲ್ಯ ಹೆಚ್ಚಿಸಿಕೊಂಡಿವೆ.ಶ್ರೀಗಳಿಗೆ ದೇಶದ ಅತ್ಯುನ್ನತ ಪ್ರಶಸ್ತಿಯಾದ ಭಾರತ ರತ್ನ ನೀಡುವಂತೆ ಭಕ್ತರು ಬೇಡಿಕೆ ಇಟ್ಟಿದ್ದಾರೆ.

ಈ ನಿಟ್ಟಿನಲ್ಲಿ ಹಲವು ಪ್ರಯತ್ನಗಳು ನಡೆದಿವೆ.ಆದರೆ ಇಡೀ ವಿಶ್ವಕ್ಕೆ ರತ್ನವಾಗಿರುವ ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ನೀಡುವುದರಿಂದ ಭಾರತದೇಶಕ್ಕೆ ಒಂದು ಮೆರುಗು ಬಂದಂತಾಗುತ್ತದೆ ಎನ್ನುವುದು ಹಲವರ ಅಭಿಪ್ರಾಯ.

ಸಿದ್ದಗಂಗಾ ಮಠದ ಕೀರ್ತಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸಿದ ಕೀರ್ತಿ ಸಿದ್ದಗಂಗಾ ಶ್ರೀಗಳದ್ದು. 89 ವರ್ಷಗಳ ಸುದೀರ್ಘ ಕಾಲ ಕುಳಿತು ಲೋಕಕಲ್ಯಾಣಕ್ಕಾಗಿ ತಮ್ಮನ್ನು ಅರ್ಪಣ ಭಾವದಿಂದ ಸಮರ್ಪಿಸಿಕೊಂಡಿದ್ದ ಪರಮಪೂಜ್ಯರು.

ಕತೃತ್ವ ಶಕ್ತಿ,ದೂರದೃಷ್ಟಿ, ಕ್ರಿಯಾಶೀಲತೆ, ದೀನ ದಲಿತರ ಮೇಲಿನ ಕಾಳಜಿ ಗ್ರಾಮೀಣ ಪ್ರದೇಶದ ಬಡಮಕ್ಕಳಿಗೆ ಅಕ್ಷರ ಜ್ಞಾನದ ಜೊತೆಗೆ ನೈತಿಕ ಶಿಕ್ಷಣ ನೀಡಿ ವಿಶ್ವದಾದ್ಯಂತ ನಮ್ಮ ಸಂಸ್ಕøತಿಯ ಜ್ಯೋತಿಗಳಾಗಿ ಬೆಳಗುವಂತೆ ಮಾಡಿದ್ದಾರೆ.

Facebook Comments