ಬಿಕಿನಿ ತೊಟ್ಟು ಪರ್ವತ ಏರಿದ ಈ ಲೇಡಿ ಗತಿ ಏನಾಯ್ತು ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

Bikini---v01ತೈಪೆ, ಜ.22-ಕನಿಷ್ಠ ಉಡುಪಿನಲ್ಲಿ ಶಿಖರಾರೋಣ ಮಾಡಿ ಹೆಸರು ಗಳಿಸಿದ್ದ ತೈವಾನ್‍ನ ಬಿಕಿನಿ ಗರ್ಲ್ ದುರಂತ ಸಾವಿಗೀಡಾಗಿದ್ದಾರೆ ಬಿಕಿನಿ ಹೈಕರ್ ಎಂದೇ ಜನಪ್ರಿಯರಾಗಿದ್ದ ಗಿಗಿ ವು(36 ವರ್ಷ) ತೈವಾನ್‍ನ ಅತ್ಯಂತ ಎತ್ತರದ ಪರ್ವತ ಏರುವಾಗ ಆಕಸ್ಮಿಕವಾಗಿ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಬಿದ್ದು ಮೃತಪಟ್ಟಿದ್ದಾರೆ.

ಕೇವಲ ಒಳ ಉಡುಪುಗಳಲ್ಲೇ ಏಕಾಂಗಿಯಾಗಿ ಅನೇಕ ಶಿಖರಾಗ್ರಗಳು ಮತ್ತು ಉತ್ತುಂಗ ಪರ್ವತಗಳನ್ನು ಆರೋಹಣ ಮಾಡುತ್ತಿದ್ದ ಗಿಗಿ ತನ್ನ ವಿಶಿಷ್ಟ ರೂಪ ಮತ್ತು ಮೈಮಾಟದಿಂದಲೂ ಹೆಸರಾಗಿದ್ದರು.   ಬಣ್ಣ ಬಣ್ಣದ ಬಿಕಿನಿ ತೊಟ್ಟು ಕಣ್ಣಿಗೆ ತಂಪು ಕನ್ನಡಕ ಧರಿಸಿ ಪರ್ವತಾರೋಹಣ ಸಾಧನಗಳೊಂದಿಗೆ ಈಕೆ ಹೊರಟರೇ ಒಂದು ಎತ್ತರದ ಬೆಟ್ಟವನ್ನು ಜಯಿಸಿದರೆಂದೇ ಅರ್ಥ.

ಆದರೆ ತೈವಾನ್ ಹೃದಯ ಭಾಗದಲ್ಲಿರುವ ನನ್‍ಟಾವೋ ಕೌಂಟಿಯಲ್ಲಿನ ದೇಶದ ಅತಿ ಎತ್ತರದ ಯುಶಾನ್ (ಜೇಡ್ ಮೌಂಟೇನ್) ಪರ್ವತಾರೋಹಣಕ್ಕಾಗಿ ಜ.11ರಂದು ಈ ದಿಟ್ಟ ಸಾಹಸಿ ತೆರಳಿದ್ದರು. ಈ ಪರ್ವತ 12,966 ಅಡಿಗಳಷ್ಟು ಎತ್ತರದಲ್ಲಿದೆ.

ಏಕಾಂಗಿಯಾಗಿ ಪರ್ವತ ಏರುವಾಗ ಗಿಗಿ ಆಯ ತಪ್ಪಿ ಪ್ರಪಾತಕ್ಕೆ ಉರುಳಿ ಬಿದ್ದಳು. ಜ.19ರಂದು ಆಕೆ ತನ್ನ ಸ್ಯಾಟಲೈಟ್ ಪೋನ್‍ನಿಂದ ಕರೆ ಮಾಡಿ ತಾನು ಅಪಾಯದಲ್ಲಿರುವುದಾಗಿ ಹೇಳಿದ್ದಳು. ಪ್ರತಿಕೂಲ ಹವಾಮಾನದಿಂದಾಗಿ ರಕ್ಷಣಾ ಕಾರ್ಯಕರ್ತರು ಸರಿಯಾದ ಸಮಯಕ್ಕೆ ಅಲ್ಲಿಗೆ ತಲುಪಲು ಸಾಧ್ಯವಾಗಿಲಿಲ್ಲ ನಂತರ ಬ್ಲಾಕ್ ಹಾಕ್ ಹೆಲಿಕಾಫ್ಟರ್‍ಗಳು ತೀವ್ರ ಶೋಧ ನಡೆಸಿದ ನಂತರ ಹಿಮ ಕಂದಕವೊಂದರಲ್ಲಿ ಆಕೆಯ ಮೃತದೇಹ ಕಂಡುಬಂದಿತು.

Facebook Comments