ಕೆರ್ಚ್ ಜಲಸಂಧಿಯಲ್ಲಿ ಭಾರತೀಯ ಸಿಬ್ಬಂದಿ ಇದ್ದ 2 ನೌಕೆಗಳಲ್ಲಿ ಬೆಂಕಿ, 11 ಸಾವು

ಈ ಸುದ್ದಿಯನ್ನು ಶೇರ್ ಮಾಡಿ

shipsಮಾಸ್ಕೋ, ಜ.22-ಭಾರತ, ಟರ್ಕಿ ಮತ್ತು ಲೆಬನಾನ್ ಸಿಬ್ಬಂದಿಗಳಿದ್ದ ಎರಡು ಸರಕು ಸಾಗಣೆ ಹಡಗುಗಳಲ್ಲಿ ಬೆಂಕಿ ಆಕಸ್ಮಿಕದಿಂದ 11 ಮಂದಿ ಮೃತಪಟ್ಟು, ಕೆಲವರು ತೀವ್ರ ಗಾಯಗೊಂಡಿರುವ ಘಟನೆ ರಷ್ಯಾ ಮತ್ತು ಕ್ರಿಮಿಯಾ ನಡುವಣ ಕೆರ್ಚ್ ಜಲಸಂಧಿಯಲ್ಲಿ ಸಂಭವಿಸಿದೆ.

ರಷ್ಯಾದ ಪ್ರಾದೇಶಿಕ ಜಲ ಪ್ರದೇಶದಲ್ಲಿ ನಿನ್ನೆ ಈ ದುರಂತ ಸಂಭವಿಸಿದೆ. ತಾಂಜಾನಿಯಾ ದೇಶದ ಧ್ವಜಗಳಿದ್ದ ಈ ನೌಕೆಗಳಲ್ಲಿ ಭಾರತ ಸೇರಿದಂತೆ ಮೂರು ದೇಶಗಳ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದರು.

ಒಂದು ಹಡಗಿನಲ್ಲಿ ದ್ರವೀಕೃತ ನೈಸರ್ಗಿಕ ಅನಿಲ(ಎಲ್‍ಎನ್‍ಜಿ) ಇತ್ತು. ಮತ್ತೊಂದು ನೌಕೆಯ ಒಂದು ಟ್ಯಾಂಕರ್ ಆಗಿದೆ. ಒಂದರಿಂದ ಇನ್ನೊಂದು ಹಡುಗಿಗೆ ಇಂಧನವನ್ನು ವರ್ಗಾಯಿಸುತ್ತಿದ್ದಾಗ ಬೆಂಕಿ ಹೊತ್ತಿಕೊಂಡಿತು.

ಕ್ಯಾಂಡಿ ಎಂಬ ಒಂದು ನೌಕೆಯಲ್ಲಿ ಒಂಭತ್ತು ಟರ್ಕಿಯರು ಮತ್ತು ಎಂಟು ಭಾರತೀಯರೂ ಸೇರಿದಂತೆ 17 ಮಂದಿ ಇದ್ದರು. ಮಹಿಸ್ಟ್ರೋ ಹೆಸರಿನ ಇನ್ನೊಂದು ಹಡಗಿನಲ್ಲಿ ಏಳು ಟರ್ಕಿಯರು, ಏಳು ಭಾರತೀಯರು ಮತ್ತು ಲಿಬಿಯಾದ ಒಬ್ಬ ಪ್ರಜೆ ಇದ್ದ. ಈ ಬೆಂಕಿ ಆಕಸ್ಮಿಕದಲ್ಲಿ ಕನಿಷ್ಠ 11 ಮಂದಿ ಮೃತಪಟ್ಟಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Facebook Comments