ತೆರಿಗೆ ಮಿತಿ 2.5 ಲಕ್ಷ ರೂಗಳಿಂದ 5 ಲಕ್ಷಕ್ಕೇರಿಕೆ..?

ಈ ಸುದ್ದಿಯನ್ನು ಶೇರ್ ಮಾಡಿ

Tax--01

ನವದೆಹಲಿ, ಜ.22- ಮಾಸಿಕ ಆದಾಯ ತೆರಿಗೆ ಮಿತಿಯನ್ನು ಈಗಿನ ಎರಡೂವರೆ ಲಕ್ಷರೂಪಾಯಿಂದ 5 ಲಕ್ಷಕ್ಕೆಏರಿಸಲುಕೇಂದ್ರ ಸರ್ಕಾರ ಚಿಂತಿಸಿದೆ.  ಸದ್ಯಎರಡೂವರೆ ಲಕ್ಷರೂಪಾಯಿವರೆಗಿನ ವಾರ್ಷಿಕಆದಾಯವುತೆರಿಗೆ ಮುಕ್ತವಾಗಿದೆ.ಎರಡೂವರೆ ಲಕ್ಷ ಮೇಲ್ಪಟ್ಟವರಆದಾಯವು ಶೇಕಡಾ 5ರಷ್ಟು ತೆರಿಗೆಗೆ ಒಳಪಡುತ್ತಿದೆ.

ಈಗಿನ ನಿಯಮದ ಪ್ರಕಾರ ತಿಂಗಳ ವೇತನದಾರರ 2.50 ಲಕ್ಷ ರೂ. ವರೆಗಿನ ವಾರ್ಷಿಕ ಆದಾಯವು ತೆರಿಗೆ-ಮುಕ್ತವಾಗಿದೆ. ಅನಂತರದ 2.50 ಲಕ್ಷ ರೂ.ವರೆಗಿನ ಆದಾಯವು ಶೇ.5ರ ತೆರಿಗೆಗೆ ಒಳಪಡುತ್ತಿದೆ.

5ರಿಂದ 10 ಲಕ್ಷ ರೂ. ವರೆಗಿನ ವಾರ್ಷಿಕ ಆದಾಯ ಇರುವ ವೇತನದಾರರ ಮೇಲೆ ಶೇ.20 ಆದಾಯ ತೆರಿಗೆ ಬೀಳುತ್ತಿದೆ. 10 ಲಕ್ಷ ರೂ. ಮೀರಿದ ವಾರ್ಷಿಕ ಆದಾಯ ಹೊಂದಿರುವ ವೇತನದಾರರ ಮೇಲೆ ಶೇ.30 ಆದಾಯ ತೆರಿಗೆ ಇದೆ. ಪ್ರಕೃತ 5 ಲಕ್ಷ ರೂ.ವರೆಗಿನ ವಾರ್ಷಿಕ ಆದಾಯ ತೆರಿಗೆ-ಮುಕ್ತವಾಗಿರುವುದು ಕೇವಲ 80 ವರ್ಷ ದಾಟಿದವರ ಸಂದರ್ಭದಲ್ಲಿ ಮಾತ್ರ.

ಕೇಂದ್ರ ಸರಕಾರವು ಈಚೆಗೆ ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೆ ಜನರಲ್‌ ಕೆಟಗರಿಯಲ್ಲಿ, ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ.10ರ ಮೀಸಲಾತಿಯನ್ನು ಕಲ್ಪಿಸಿದ್ದು ಇದಕ್ಕೆ ಅರ್ಹತೆ ಪಡೆಯುವವರ ವಾರ್ಷಿಕ ಆದಾಯ 8 ಲಕ್ಷ ರೂ.ಗಳಿಗಿಂತ ಕಡಿಮೆ ಇರಬೇಕಾಗುತ್ತದೆ.

ಇದನ್ನು ಸರಿದೂಗಿಸುವ ನಿಟ್ಟಿನಲ್ಲಿ ಸರಕಾರ ಈ ಬಾರಿ ತಿಂಗಳ ವೇತನದಾರರ ತೆರಿಗೆ-ಮುಕ್ತ ವಾರ್ಷಿಕ ಆದಾಯದ ಮಿತಿಯನ್ನು ಈಗಿನ 2.50 ಲಕ್ಷ ರೂ.ದಿಂದ 5 ಲಕ್ಷ ರೂ.ಗೆ ಏರಿಸಲು ನಿರ್ಧರಿಸಿದೆ ಎಂದು ವಿತ್ತ ಸಚಿವಾಲಯದ ಮೂಲಗಳು ಹೇಳಿವೆ.

Facebook Comments

Sri Raghav

Admin

One thought on “ತೆರಿಗೆ ಮಿತಿ 2.5 ಲಕ್ಷ ರೂಗಳಿಂದ 5 ಲಕ್ಷಕ್ಕೇರಿಕೆ..?

Comments are closed.