ಬೋನಿಗೆ ನುಗ್ಗಿದ ವ್ಯಕ್ತಿಯನ್ನು ಭೀಕರವಾಗಿ ಕೊಂದ ಸಿಂಹಗಳು..!

ಈ ಸುದ್ದಿಯನ್ನು ಶೇರ್ ಮಾಡಿ

lions--01

ಚಂಡೀಗಢ್, ಜ.22- ಪಂಜಾಬ್ ರಾಜ್ಯದ ಚಾಟೀರ್ ಮೃಗಾಲಯದಲ್ಲಿ ಭೀಕರ ಘಟನೆ ನಡೆದಿದೆ. ಭಂಡ ಧೈರ್ಯ ಮಾಡಿದ ವ್ಯಕ್ತಿಯೊಬ್ಬ 20 ಅಡಿ ಎತ್ತರ ಗೋಡೆಯನ್ನು ಹತ್ತಿ ಸಿಂಹಗಳಿದ್ದ ಬೋನಿಗೆ ನುಗ್ಗಿದ ಪರಿಣಾಮ ಅವುಗಳ ದಾಳಿಗೆ ತುತ್ತಾಗಿ ಸಾವನ್ನಪ್ಪಿದ್ದಾನೆ.

ನಿಷೇಧಿತ ಪ್ರದೇಶ ಎಂಬ ಸೂಚನಾ ಫಲಕವಿದ್ದರೂ ಅದನ್ನು ಲೆಕ್ಕಿಸದೆ ನಾಲ್ಕು ಸಿಂಹಗಳಿದ್ದ ಬೋನಿನೊಳಗೆ ಆ ವ್ಯಕ್ತಿ ನುಗ್ಗಿದ. ಕೂಡಲೇ ಸಿಂಹಗಳು ಆತನ ಮೇಲೆ ದಾಳಿ ಮಾಡಿ ಸೀಳಿ ಹಾಕಿದವು.

ನಂತರ ವ್ಯಕ್ತಿಯ ಆಕ್ರಂದನ ಕೇಳಿ ಭದ್ರತಾ ಸಿಬ್ಬಂದಿಗಳು ಓಡಿ ಬಂದು ಆತನ ರಕ್ಷಣೆಗೆ ಮುಂದಾಗಿದ್ದಾರೆ.

ಶತ ಪ್ರಯತ್ನ ಮಾಡಿ ಸಿಂಹಗಳಿಂದ ಆತನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೆ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ರಾಜ್ಯ ಅರಣ್ಯ ಇಲಾಖೆ ಅಧಿಕಾರಿ ರೋಶನ್ ಸುಂಕರಿಯಾ ಹೇಳಿದ್ದಾರೆ.

Facebook Comments

Sri Raghav

Admin

3 thoughts on “ಬೋನಿಗೆ ನುಗ್ಗಿದ ವ್ಯಕ್ತಿಯನ್ನು ಭೀಕರವಾಗಿ ಕೊಂದ ಸಿಂಹಗಳು..!

Comments are closed.