ಪಾಟೀಲ್ ನಡಹಳ್ಳಿ ಅವರ ಅದೃಷ್ಟ ಬದಲಿಸಿತ್ತು ಸಿದ್ದಗಂಗಾ ಶ್ರೀಗಳ ಕಾರು..!

ಈ ಸುದ್ದಿಯನ್ನು ಶೇರ್ ಮಾಡಿ

Nadahalli---01

ಮುದ್ದೆಬಿಹಾಳ, ಜ.22- ಸಿದ್ದಗಂಗಾ ಮಠದ ಡಾ.ಶ್ರೀ ಶಿವಕುಮಾರಸ್ವಾಮೀಜಿಯವರು ನೀಡಿದ್ದ ಕಾರಿನಲ್ಲಿ ತೆರಳಿ ನಾಮಪತ್ರ ಸಲ್ಲಿಸಿದ ಶಿಷ್ಯರೊಬ್ಬರು ಶಾಸಕರಾಗಿ ಆಯ್ಕೆಯಾಗಿದ್ದಾರಂತೆ.

ಮುದ್ದೆಬಿಹಾಳ ಕ್ಷೇತ್ರದ ಬಿಜೆಪಿ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಅವರಿಗೆ ಸ್ವಾಮೀಜಿಯವರು ನಾಮಪತ್ರ ಸಲ್ಲಿಸಲು ಕಾರನ್ನು ನೀಡಿದ್ದರಂತೆ. 2008ರಲ್ಲಿ ನಡಹಳ್ಳಿ ದೇವರ ಹಿಪ್ಪರಗಿ ಕ್ಷೇತ್ರದಿಂದ ಸ್ಪರ್ಧಿಸಿ ಚುನಾಯಿತರಾಗಿದ್ದರು.

ಈಗ ಸತತ ಮೂರನೇ ಬಾರಿ ಶಾಸಕರಾಗಿ ಅವರು ಆಯ್ಕೆಯಾಗಿದ್ದಾರೆ. ನಡಹಳ್ಳಿ ಅವರಿಗೆ ಕಾರನ್ನು ನೀಡಿದ್ದ ಸ್ವಾಮೀಜಿಯವರು ನಾಮಪತ್ರ ಸಲ್ಲಿಕೆಗೆ ಇದೇ ಕಾರಿನಲ್ಲಿ ಹೋಗುವಂತೆ ಸೂಚಿಸಿದ್ದರಂತೆ. ಅದರಂತೆ ನಡಹಳ್ಳಿಯವರಿಗೆ ಸ್ವಾಮೀಜಿಯವರು ನೀಡಿದ್ದ ಕಾರಿನಲ್ಲಿ ತೆರಳಿ ನಾಮಪತ್ರ ಸಲ್ಲಿಸಿ ಚುನಾವಣೆಯಲ್ಲಿ ಚುನಾಯಿತರಾಗಿದ್ದಾರಂತೆ.

ಲಿಂಗೈಕ್ಯರಾದ ಶಿವಕುಮಾರಸ್ವಾಮೀಜಿಯವರಿಗೆ ಸಂತಾಪ ಸೂಚಿಸಿರುವ ಶಾಸಕ ನಡಹಳ್ಳಿಯವರು, ಸಿದ್ದಗಂಗಾ ಮಠದಲ್ಲಿ ಬಸವಣ್ಣನವರ ತತ್ವಗಳು ಪ್ರಯೋಗವಾಗುತ್ತಿದ್ದವು. ಶ್ರೀಗಳು ತಾಯಿ ಹೃದಯದಿಂದ ಮಕ್ಕಳನ್ನು ಕಾಣುತ್ತಿದ್ದರು. ನಿಮಗೆ ಶ್ರೀಮಂತಿಕೆ ಬಂದರೆ ದಾಸೋಹ ಮಾಡಿ ಎಂಬ ಸಲಹೆ ಮಾಡಿದ್ದರು ಎಂಬುದನ್ನು ನಡಹಳ್ಳಿ ನೆನಪಿಸಿಕೊಂಡರು.

Facebook Comments