ನೀರವ್, ಚೋಕ್ಸಿ ಹಸ್ತಾಂತರ ಖಚಿತ : ಜಾವ್ಡೇಕರ್

ಈ ಸುದ್ದಿಯನ್ನು ಶೇರ್ ಮಾಡಿ

niravಜೈಪುರ್, ಜ.22-ಈ ಹಿಂದೆ ಆಡಳಿತ ನಡೆಸಿದ್ದ ಕಾಂಗ್ರೆಸ್ ಸರ್ಕಾರ ಸುರಕ್ಷತೆ ಇಲ್ಲದೆ ಬೇಕಾಬಿಟ್ಟಿ ಬೃಹತ್ ಪ್ರಮಾಣದಲ್ಲಿ ಸಾಲ ನೀಡಿದ್ದರಿಂದಲೇ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಕೋಟ್ಯಂತರ ರೂ. ನಷ್ಟವಾಗಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವ್ಡೇಕರ್ ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿವಿಐಪಿ ಹೆಲಿಕಾಫ್ಟರ್ ಹಗರಣದ ಮಧ್ಯವರ್ತಿ ಆರೋಪಿ ಕ್ರಿಶ್ಸಿಯನ್ ಮೈಕಲ್‍ನನ್ನು ಭಾರತಕ್ಕೆ ಕರೆತಂದ ಮಾದರಿಯಲ್ಲೇ ದೇಶ ಭ್ರಷ್ಟ ಆರ್ಥಿಕ ಅಪರಾಧಿಗಳಾದ ನೀರವ್ ಮೋದಿ, ಮೆಹುಲ್ ಚೋಕ್ಸಿ ಮತ್ತು ವಿಜಯ್ ಮಲ್ಯ ಅವರುಗಳನ್ನು ಭಾರತಕ್ಕೆ ಹಸ್ತಾಂತರ ಪಡೆಯುವುದು ಖಚಿತ ಎಂದು ತಿಳಿಸಿದ್ದಾರೆ.

ರಾಷ್ಟ್ರೀಕೃತ ಬ್ಯಾಂಕುಗಳಿಂದ ಸಹಸ್ರಾ ಕೋಟಿ ರೂ.ಗಳ ಸಾಲ ಪಡೆದು ವಂಚಿಸಿ ಇವರೆಲ್ಲರೂ ಕಾಂಗ್ರೆಸ್ ಸರ್ಕಾರದಲ್ಲಿ ಅರಾಮಾಗಿದ್ದರು. ಆದರೆ, ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅತ್ಯಂತ ಕಠಿಣ ಕ್ರಮಗಳನ್ನು ಕೈಗೊಂಡಿದ್ದರಿಂದ ಹೆದರಿ ವಿದೇಶಗಳಿಗೆ ಪಲಾಯನವಾಗಿದ್ದಾರೆ. ಆದರೂ ಇವರನ್ನು ದೇಶಕ್ಕೆ ಎಳೆತರುವುದು ಶತಸಿದ್ಧ ಎಂದರು.

ಸಾರ್ವಜನಿಕರು ಮತ್ತು ಬ್ಯಾಂಕುಗಳಿಗೆ ಇವರಿಗೆ ಮಾಡಿರುವ ಮೋಸದ ಹಣದ ಪ್ರತಿಯೊಂದು ಪೈಸೆಯನ್ನೂ ವಸೂಲಿ ಮಾಡದೆ ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಜಾವ್ಡೇಕರ್ ಸ್ಪಷ್ಟಪಡಿಸಿದರು.

Facebook Comments