ಕೊನೆಯದಾಗಿ ‘ದೇವರ’ನ್ನು ನೋಡಿ ಕಣ್ತುಂಬಿಕೊಳ್ಳಿ..!

ಈ ಸುದ್ದಿಯನ್ನು ಶೇರ್ ಮಾಡಿ

Siddaga-Swamiji--01
ತುಮಕೂರು. ಜ. 22 : ನಡೆದಾಡುವ ದೇವರು ಸಿದ್ದಗಂಗಾ ಸ್ವಾಮೀಜಿಗಳು ಇಂದು ಕ್ರಿಯಾಮಾಧಿ ಸೇರಿಕೊಂಡಿದ್ದಾರೆ. ಕ್ರಿಯಾ ಸಮಾಧಿ ಪ್ರಕ್ರಿಯೆಯ ಕೊನೆಯ ಕ್ಷಣಗಳು ಭಕ್ತ ಕೋಟಿಯ ಮನಸಲ್ಲಿ, ಕಣ್ಣಲ್ಲಿ ಅಚ್ಚಳಿಯದೆ ಉಳಿಯುವಂತಹ ದೃಶ್ಯಗಳಿಗೆ ಸಾಕ್ಷಿಯಾಯಿತು .

ಕ್ರಿಯಾ ಸಮಾಧಿಯ ಗದ್ದುಗೆಯಲ್ಲಿ ದೇವರು ಕುಳಿತ ನಂತರ ಕಂಡುಬಂದ ದೃಶ್ಯ ಈ ಫೋಟೋದಲ್ಲಿದೆ, ಕೊನೆಯದಾಗಿ ದೇವರ ದರ್ಶನವನ್ನು ಕಣ್ತುಂಬಿಕ್ಕೊಳ್ಳಿ.

ಶಿವಕುಮಾರಸ್ವಾಮಿಜಿಯವರು ಕೋಟಿ ಕೋಟಿ ಭಕ್ತರ ಮನದಲ್ಲಿ ಎಂದೆಂದಿಗೂ ಅಚ್ಚಳಿಯದೆ ಉಳಿಯುತ್ತಾರೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ, ಅವರು ನಡೆದು ಬಂದ ದಾರಿಯೇ ಪ್ರತಿಯೊಬ್ಬರಿಗೂ ದಾರಿದೀಪ, ಅವರ ಆದರ್ಶಕೆಗಳೇ ಎಲ್ಲರಿಗೂ ಮಾತು. ಕೊನೆಯ ಕ್ಷಣದ ಈ ಅಪೂರ್ವ ಕ್ಷಣಗಳನ್ನು ಮೃತಿ ಪೇಟ್ಲಾಡ್ಫಾಲ್ಲಿ ಸದಾ ಕಾಲ ಉಳಿಯುವಂತೆ ಕಣ್ತುಂಬಿಕೊಂಡುಬಿಡಿ.

ಸಿದ್ದಗಂಗಾ ಶ್ರೀಗಳಿಗೆ ಅಂತಿಮ ನಮನ ಸಲ್ಲಿಸಿದ ಸಿಎಂ :
ತುಮಕೂರಿನ ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಅವರು ಅಂತ್ಯಕ್ರಿಯೆ ಮಂಗಳವಾರ ಸಂಜೆ ನಡೆಯಿತು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಹಲವು ಗಣ್ಯರು ಅಂತಿಮ ನಮನ ಸಲ್ಲಿಸಿದರು.

ಮಂಗಳವಾರ ಸಂಜೆ ಗೋಸಲ ಸಿದ್ದೇಶ್ವರ ವೇದಿಕೆಯಿಂದ ಕ್ರಿಯಾ ಸಮಾಧಿ ಕಟ್ಟಡದ ತನಕ ಶ್ರೀಗಳ ಅಂತಿಮ ಯಾತ್ರೆಯನ್ನು ರುದ್ರಾಕ್ಷಿ ರಥದಲ್ಲಿ ನಡೆಸಲಾಯಿತು. 400ಕ್ಕೂ ಅಧಿಕ ಸ್ವಾಮೀಜಿಗಳು ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡರು.

ಅಂತಿಮ ಧಾರ್ಮಿಕ ಕಾರ್ಯಕ್ರಮಕ್ಕೂ ಮೊದಲು ಕರ್ನಾಟಕ ಸರ್ಕಾರದ ವತಿಯಿಂದ ಸಕಲ ಸರ್ಕಾರಿ ಗೌರವ ಸಲ್ಲಿಸಲಾಯಿತು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಅಂತಿಮವಾಗಿ ಪುಷ್ಪ ನಮನವನ್ನು ಸಲ್ಲಿಸಿದರು.

ಲಿಂಗ ಶರೀರಕ್ಕೆ ಬಿಲ್ವ ಪತ್ರೆ ಸಮರ್ಪಣೆ :
ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳ ಪಾರ್ಥಿವ ಶರೀರದ ಕ್ರಿಯಾ ಸಮಾಧಿ ವಿಧಿ ವಿಧಾನ ನಡೆಯುತ್ತಿದೆ. ಸಿದ್ದಗಂಗಾ ಶ್ರೀಗಳ ದೇಹದ ಶುದ್ದೀಕರಣ ಪ್ರಕ್ರಿಯೆಗಳನ್ನು ನಡೆಸಿದ ನಂತರ ಲಿಂಗ ಶರೀರಕ್ಕೆ ಹೊಸ ಕಾಷಾಯ ವಸ್ತ್ರಗಳನ್ನು ತೊಡಿಸಿದ ನಂತರ ಲಿಂಗ ಶರೀರವನ್ನು ಸಮಾಧಿಯ ಗೂಡಿನಲ್ಲಿರಿಸಲಾಗಿದೆ. ಬಳಿಕ ಲಿಂಗ ಶರೀರದ ಸುತ್ತಾ ವಿಭೂತಿ ಜೋಡಣೆ ಮಾಡಲಾಗಿದೆ. ನಂತರ ಲಿಂಗ ಶರೀರಕ್ಕೆ ಬಿಲ್ವ ಪತ್ರೆ ಸಮರ್ಪಣೆ ಮಾಡಲಾಯಿತು.

Facebook Comments

Sri Raghav

Admin