ಇಂದಿನ ಪಂಚಾಗ ಮತ್ತು ರಾಶಿಫಲ (22-01-2019-ಮಂಗಳವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಸಮಯದಲ್ಲಿ ಕೆಲಸವಾಗದೆ ದುಃಖದಿಂದ ಒಂದು ವೇಳೆ ಆಕ್ಷೇಪ ಮಾಡಿದರೂ ಅರಸನು ಅದನ್ನು ಕ್ಷಮಿಸಬೇಕು. ಮಕ್ಕಳು, ರೋಗಿಗಳು, ಮುದುಕರು ಆಡಿದ ಆಕ್ಷೇಪಗಳನ್ನು ಸಹಿಸಬೇಕು. ಇದರಿಂದ ಹಿತವೇ ಆಗುತ್ತದೆ. -ಮನುಸ್ಮೃತಿ

Rashi-Bhavishya--01

# ಪಂಚಾಂಗ : ಮಂಗಳವಾರ, 22.01.2019
ಸೂರ್ಯ ಉದಯ ಬೆ.06.46 / ಸೂರ್ಯ ಅಸ್ತ ಸಂ.06.16
ಚಂದ್ರ ಉದಯ ಸಂ.07.37/ ಚಂದ್ರ ಅಸ್ತ ಬೆ.08.35
ವಿಲಂಬಿ ಸಂವತ್ಸರ / ಉತ್ತರಾಯಣ / ಹಿಮಂತ ಋತು
ಪುಷ್ಯ ಮಾಸ / ಶುಕ್ಲ ಪಕ್ಷ / ತಿಥಿ : ಪ್ರತಿಪದ್-ದ್ವಿತೀಯ  (ಬೆ.07.05-ರಾ.03.26)
ನಕ್ಷತ್ರ: ಆಶ್ಲೇಷಾ (ರಾ.11.32) / ಯೋಗ: ಆಯುಷ್ಮಾನ್ (ರಾ.02.03)
ಕರಣ: ಕೌಲವ-ತೈತಿಲ-ಗರಜೆ (ಬೆ.07.05-ಸಾ.05.15-ರಾ.03.26)
ಮಳೆ ನಕ್ಷತ್ರ: ಉತ್ತರಾಷಾಢ / ಮಾಸ: ಮಕರ / ತೇದಿ: 09

# ರಾಶಿ ಭವಿಷ್ಯ
ಮೇಷ: ಆಪ್ತ ಸ್ನೇಹಿತರ ಮುಖಾಂತರ ಲಾಭ ಪಡೆಯುವಿರಿ. ಉನ್ನತ ಹುದ್ದೆ ದೊರೆಯಬಹುದು
ವೃಷಭ: ವಿದ್ಯಾರ್ಥಿಗಳು ಓದಿನಲ್ಲಿ ಮುನ್ನಡೆ ಸಾಧಿಸುವರು. ಶುಭ ವಾರ್ತೆಯನ್ನು ಕೇಳುವಿರಿ
ಮಿಥುನ: ಅನಾವಶ್ಯಕವಾದ ಖರ್ಚುಗಳನ್ನು ಕಡಿಮೆ ಮಾಡಿ
ಕಟಕ: ನೆರೆಹೊರೆಯವರಿಂದ ತೊಂದರೆಯಲ್ಲಿ ಸಿಲುಕುವಿರಿ
ಸಿಂಹ: ಪ್ರೀತಿಯ ಮಾತಿಗೆ ಮರುಳಾಗದಿರಿ. ಪರಸ್ಥಳ ವಾಸ ಮಾಡಬೇಕಾಗಬಹುದು
ಕನ್ಯಾ: ಸ್ತ್ರೀ ಮೂಲಕ ಹಣ ಸಂಗ್ರಹವಾಗುವ ಯೋಗವಿದೆ
ತುಲಾ: ದುಡುಕು ಬುದ್ಧಿ ಯಿಂದ ಕೆಲಸ-ಕಾರ್ಯಗಳಿಗೆ ಭಂಗವಾಗುತ್ತದೆ
ವೃಶ್ಚಿಕ: ನಿಮ್ಮ ಸುತ್ತಲಿನ ಜನರ ಬಗ್ಗೆ ಎಚ್ಚರದಿಂದಿರಿ
ಧನುಸ್ಸು: ಪತಿ-ಪತ್ನಿ ಬಾಂಧವ್ಯ ಮಧುರವಾಗಿರುವುದು
ಮಕರ: ಆಯುಧಗಳಿಂದ ಗಾಯಗಳಾಗಬಹುದು
ಕುಂಭ: ಎಲ್ಲರೂ ನಿಮ್ಮನ್ನು ದೂಷಿಸುವರು
ಮೀನ: ಸಾಲವನ್ನು ಮರುಪಾವತಿ ಮಾಡುತ್ತೀರಿ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments