ಕ್ಯಾಪ್ಟನ್ ಕೊಹ್ಲಿ ಹೊಸ ದಾಖಲೆ..!

ಈ ಸುದ್ದಿಯನ್ನು ಶೇರ್ ಮಾಡಿ

Virat-Kohliದುಬೈ, ಜ. 22- ಆಸೀಸ್ ನಾಡಿನಲ್ಲಿ ಟೆಸ್ಟ್ ಹಾಗೂ ಏಕದಿನ ಸರಣಿ ಗೆದ್ದ ಸಂಭ್ರಮದಲ್ಲಿರುವ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಗೆ ಇಂದು ಮತ್ತೊಂದು ಮಹತ್ವದ ಗರಿ ಸೇರ್ಪಡೆಗೊಂಡಿದೆ.

ಐಸಿಸಿ ಪ್ರಕಟಿಸಿದ ವರ್ಷದ ಪ್ರಶಸ್ತಿ ವಿಭಾಗದಲ್ಲಿ ವಿರಾಟ್ ವರ್ಷದ ಉತ್ತಮ ಕ್ರಿಕೆಟಿಗ, ಟೆಸ್ಟ್, ಏಕದಿನ ಹಾಗೂ ಉತ್ತಮ ಆಟಗಾರನೆಂಬ ಗರಿಯನ್ನು ಟೀಂ ಇಂಡಿಯಾ ನಾಯಕ ಕೊಹ್ಲಿ ತಮ್ಮ ಮುಡಿಗೇರಿಸಿಕೊಂಡಿದ್ದೆ ಅಲ್ಲದೆ ಸರ್‍ಗ್ರಾರ್‍ಫೀಲ್ಡ್ ಸೋಬರ್ಸ್ ಪ್ರಶಸ್ತಿ ಗೆದ್ದ ಮೊದಲ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಉತ್ತಮ ನಾಯಕನಾಗಿ ಗುರುತಿಸಿ ಕೊಂಡಿರುವ ಕೊಹ್ಲಿ ಐಸಿಸಿ ಪ್ರಕಟಿಸಿರುವ ಟೆಸ್ಟ್ ಹಾಗೂ ಏಕದಿನ ತಂಡಗಳಲ್ಲಿ ನಾಯಕನ ಸ್ಥಾನ ಪಡೆಯುವ ಮೂಲಕವೂ ಗಮನ ಸೆಳೆದಿದ್ದಾರೆ.

2018ರಲ್ಲಿ 13 ಟೆಸ್ಟ್ ಪಂದ್ಯಗಳನ್ನಾಡಿರುವ ವಿರಾಟ್ ಕೊಹ್ಲಿ 5 ಶತಕ ಒಳಗೊಂಡಂತೆ 1,322 ರನ್‍ಗಳನ್ನು ಗಳಿಸಿದ್ದರೆ, 14 ಏಕದಿನ ಪಂದ್ಯಗಳಿಂದ 1202 ರನ್‍ಗಳನ್ನು ಬಾರಿಸಿದ್ದಾರೆ, ಇದರಲ್ಲಿ 6 ಶತಕಗಳು ಸೇರಿವೆ. 10 ಚುಟುಕು ಪಂದ್ಯಗಳಲ್ಲಿ ಕೊಹ್ಲಿ 211 ರನ್‍ಗಳನ್ನು ಗಳಿಸಿದ್ದಾರೆ.

ಐಸಿಸಿ ಪ್ರಕಟಿಸಿರುವ ಟೆಸ್ಟ್ ಕ್ರಿಕೆಟ್ ತಂಡದಲ್ಲಿ ವಿರಾಟ್‍ಕೊಹ್ಲಿಯೊಂದಿಗೆ ಯುವ ವಿಕೆಟ್ ಕೀಪರ್ ರಿಷಭ್‍ಪಂತ್, ವೇಗಿ ಜಸ್‍ಪ್ರೀತ್ ಬೂಮ್ರಾ ಸ್ಥಾನಪಡೆದರೆ, ಏಕದಿನ ತಂಡದಲ್ಲಿ ಟೀಂ ಇಂಡಿಯಾದ ಆರಂಭಿಕ ಆಟಗಾರ ರೋಹಿತ್‍ಶರ್ಮಾ, ಸ್ಪಿನ್ನರ್ ಕುಲ್‍ದೀಪ್ ಯಾದವ್, ಬೂಮ್ರಾ ಅವರು ವಿರಾಟ್‍ಕೊಹ್ಲಿಯೊಂದಿಗೆ ಸ್ಥಾನ ಪಡೆದಿದ್ದಾರೆ.

ವಿರಾಟ್ ನಂಬರ್ 1:  2008ರಲ್ಲಿ ನಡೆದ ಅಂಡರ್ 19 ವಿಭಾಗದಲ್ಲಿ ಭಾರತಕ್ಕೆ ವಿಶ್ವಕಪ್ ಮುಕುಟ ತಂದುಕೊಟ್ಟ ವಿರಾಟ್ ಕೊಹ್ಲಿ ಈ ವರ್ಷ ಪ್ರಕಟಿಸಿದ ಏಕದಿನ ಹಾಗೂ ಟೆಸ್ಟ್‍ನ ರ್ಯಾಂಕಿಂಗ್‍ನಲ್ಲಿ ನಂಬರ್ 1 ಬ್ಯಾಟ್ಸ್‍ಮನ್ ಆಗಿ ಹೊರಹೊಮ್ಮಿದ್ದಾರೆ.

2018ರ ಜನವರಿ 1 ರಿಂದ ಡಿಸೆಂಬರ್ 31ರವರೆಗೆ ನಡೆದ ಪಂದ್ಯಗಳ ಆಧಾರದ ಮೇಲೆ ಈ ಪ್ರಶಸ್ತಿಯನ್ನು ಪ್ರಕಟಿಸಿದ್ದು ವಿರಾಟ್ ಕೊಹ್ಲಿಯು 14 ಪಂದ್ಯಗಳಲ್ಲಿ ನಾಯಕತ್ವವನ್ನು ವಹಿಸಿಕೊಂಡಿದ್ದು 9 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ನಾಲ್ಕರಲ್ಲಿ ಸೋಲು ಹಾಗೂ ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡಿದ್ದಾರೆ.

ಕೊಹ್ಲಿ ಇದಕ್ಕೂ ಮುಂಚೆ 2012 ರಲ್ಲಿ ಐಸಿಸಿ ವರ್ಷದ ಆಟಗಾರ ಪ್ರಶಸ್ತಿಗೆ ಭಾಜನರಾಗಿ ಸರ್ ಗ್ರಾರ್‍ಫೀಲ್ಡ್ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದ್ದರಾದರೂ ಆ ವರ್ಷ ವರ್ಷದ ಟೆಸ್ಟ್ ಆಟಗಾರನಾಗಿ ಮಾತ್ರ ಗುರುತಿಸಿಕೊಂಡಿದ್ದರು.

ದಕ್ಷಿಣ ಆಫ್ರಿಕಾದ ವೇಗಿ ಕಗಾಸೋ ರಬಡಾಗೆ ವರ್ಷದ ಟೆಸ್ಟ್ ಆಟಗಾರ ಪ್ರಶಸ್ತಿಗೆ ಭಾಜನರಾದರೆ, ಆಫ್ಗಾನಿಸ್ಥಾನದ ರಶೀದ್‍ಖಾನ್ ಐಸಿಸಿ ಏಕದಿನ ಪ್ರಶಸ್ತಿಯಲ್ಲಿ ರನ್ನರ್‍ಅಪ್‍ಗೆ ತೃಪ್ತಿಪಟ್ಟುಕೊಂಡರು.

Facebook Comments