ಮಹಿಳೆ ಸೇರಿ ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

Family--01

ಭೋಪಾಲ್, ಜ.23- ಮಧ್ಯ ವಯಸ್ಸಿನ ಮಹಿಳೆ, ಆಕೆಯ 12 ದಿನಗಳ ಮೊಮ್ಮಗಳು ಸೇರಿ ಒಂದೇ ಕುಟುಂಬದ ನಾಲ್ವರು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಮಧ್ಯ ಪ್ರದೇಶದ ರೈಸನ್ ಜಿಲ್ಲಾ ಮಂಡಿದೀಪ್ ಪಟ್ಟಣದಲ್ಲಿ ನಡೆದಿದೆ.

ಮಹಿಳೆ, ಆಕೆಯ 11 ವರ್ಷದ ಮಗ, 20 ವರ್ಷದ ಮಗಳು ಹಾಗೂ 12 ದಿನದ ಹಸುಳೆ ಮಹಿಳೆಯ ಅಳಿಯನ ಮನೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಇದೇ ವೇಳೆ ಅಳಿಯ ಸಹ ಅದೇ ಮನೆಯಲ್ಲಿ ಸುಪ್ತಾವಸ್ಥೆಯಲ್ಲಿರುವುದು ಪತ್ತೆಯಾಗಿದ್ದು, ಒಳಗಿನಿಂದ ಲಾಕ್ ಮಾಡಿಕೊಳ್ಳಲಾದ ಮನೆಯಿಂದ ಆತನನ್ನು ಒಯ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಭೋಪಾಲ್‍ನಿಂದ ಸುಮಾರು 25 ಕಿಮೀ ದೂರದಲ್ಲಿರುವ ಪಟ್ಟಣದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಬೆಳಗಿನಿಂದ ಮನೆಯ ಯಜಮಾನ ಸಂಜು ಭುರಿಯಾ ಸೇರಿ ಯಾರೊಬ್ಬರೂ ಮನೆಯಿಂದ ಹೊರಬರದ್ದನ್ನು ಗಮನಿಸಿದ ನೆರೆಮನೆಯ ನಿತಿನ್ ಒಳಗಿನಿಂದ ಲಾಕ್ ಮಾಡಲಾದ ಬಾಗಿಲನ್ನು ಪದೇ ಪದೇ ತಟ್ಟಿದ್ದಾನೆ. ಆದರೆ ಅತ್ತಕಡೆಯಿಂದ ಯಾವ ಪ್ರತಿಕ್ರಿಯೆ ಬಂದಿಲ್ಲ.

ಇದಾಗಿ ಆತ ಪೊಲೀಸರಿಗೆ ಮಾಹಿತಿ ಒದಗಿಸಿದ್ದು, ಪೊಲೀಸರು ಮನೆ ಬಾಗಿಲು ಒಡೆದು ನೋಡಿದಾಗ ನಾಲ್ವರ ಶವ ಪತ್ತೆಯಾಗಿದೆ. ಮೃತರನ್ನು ದೀಪಲತಾ (40), ಆಕೆಯ ಮಗ ಆಕಾಶ್ (11), ಮಗಳು ಪೂರ್ಣಿಮಾ (20) ಮತ್ತು ಪೂರ್ಣಿಮಾಳ 12 ದಿನದ ಮಗು ಎಂದು ಗುರುತಿಸಲಾಗಿದೆ.

Facebook Comments