ಕಳೆದ 15 ತಿಂಗಳಲ್ಲಿ 73.50 ಲಕ್ಷ ಉದ್ಯೋಗ ಸೃಷ್ಟಿ..!

ಈ ಸುದ್ದಿಯನ್ನು ಶೇರ್ ಮಾಡಿ

jobsನವದೆಹಲಿ, ಜ.23 (ಪಿಟಿಐ)- ಕಳೆದ 15 ತಿಂಗಳ ಅವಧಿಯಲ್ಲಿ ಔಪಚಾರಿಕ ವಲಯದಲ್ಲಿನ ಉದ್ಯೋಗ ಸೃಷ್ಟಿಯಲ್ಲಿ ಶೇ.48ರಷ್ಟು ಹೆಚ್ಚಳ ಕಂಡುಬಂದಿದೆ.

ಈ ಅವಧಿಯಲ್ಲಿ 73.50 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿವೆ ಎಂಬುದು ನೌಕರರ ಭವಿಷ್ಯ ನಿಧಿ ಸಂಘಟನೆ(ಇಪಿಎಫ್‍ಒ)ಯ ಇತ್ತೀಚಿನ ವೇತನ ಅಂಕಿಅಂಶಗಳಿಂದ ತಿಳಿದುಬಂದಿದೆ.

ಇದು ಈಗ ಅವಧಿಯಲ್ಲಿ ಔಪಚಾರಿಕ ವಲಯದಲ್ಲಿನ ಅನೇಕ ಹುದ್ದೆಗಳ ಸೃಷ್ಟಿಯ ಸೂಚಕವಾಗಿದೆ. ಕಳೆದ ವರ್ಷ ನವೆಂಬರ್‍ನಲ್ಲೇ ಒಟ್ಟು 7.32 ಲಕ್ಷ ಮಂದಿ ಉದ್ಯೋಗ ಪಡೆದಿದ್ದಾರೆ. 2017ರ ಇದೇ ಅವಧಿಯಲ್ಲಿ 4.93 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿತ್ತು.

2017ರ ಸೆಪ್ಟೆಂಬರ್‍ನಿಂದ ನವೆಂಬರ್ 2018ರ ಅವಧಿಯಲ್ಲಿ ಇಪಿಎಫ್‍ಒನ ಸಾಮಾಜಿಕ ಭದ್ರತಾ ಯೋಜನೆಗಳಿಗೆ ಸುಮಾರು 73.50 ಲಕ್ಷ ಹೊಸ ಚಂದಾದಾರರು ಸೇರ್ಪಡೆಯಾಗಿದ್ದಾರೆ ಎಂಬ ವಿವರ ಲಭ್ಯವಾಗಿದೆ.

2018ರ ನವೆಂಬರ್‍ನಲ್ಲಿ ಒಟ್ಟು 7.32 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ. ಇದು ಹಿಂದಿನ ಅವದಿಗಿಂತ ಇದು ಗರಿಷ್ಠ ಮಟ್ಟದ್ದಾಗಿದೆ. ಇದರಲ್ಲಿ 18 ರಿಂದ 21 ವರ್ಷಗಳ 2.18 ಲಕ್ಷ ಮಂದಿ ಹಾಗೂ 22 ರಿಂದ 25ರ ವಯೋಮಾನದ 2.03 ಲಕ್ಷ ಜನರು ಸಹ ಉದ್ಯೋಗ ಪಡೆದಿದ್ದಾರೆ. ಇದು ಒಂದು ದಾಖಲೆ ಎನಿಸಿದೆ.

Facebook Comments